ವಿವಾದಾತ್ಮಕ ಕೃಷಿ ಕಾನೂನುಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ರೈತರ ಆಕ್ರೋಶ ಭುಗಿಲೆದ್ದಿತ್ತು. ಇದನ್ನು ತಣಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಹಿಂದೆ ರೈತರನ್ನು ಮಾತುಕತೆಗೆ ಕರೆದಿತ್ತು. ಆದರೆ ನವೆಂಬರ್ 13 ರಂದು ನಡೆದ ಈ ಸಭೆಯು ವಿಫಲಾಗಿತ್ತು. ಹಾಗಾಗಿ ಡಿಸಂಬರ್ 3 ರಂದು ಮತ್ತೊಮ್ಮೆ ಎರಡನೇ ಸುತ್ತಿನ ಸಭೆಗೆ ರೈತಮುಖಂಡರು ಮತ್ತು ರೈತ ಸಂಘಗಳನ್ನು ಆಹ್ವಾನಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪಂಜಾಬ್‌ನಲ್ಲಿ ನಡೆಯುತ್ತಿದ್ದ ಸುಮಾರು ಎರಡು ತಿಂಗಳ ಕಾಲದ ನಿರಂತರ ರೈಲು ಮುತ್ತಿಗೆಯ ರೈತರ ‘ರೈಲ್ ರೋಕೊ’ ಆಂದೋಲನವನ್ನು ಸೋಮವಾರ ಹಿಂತೆಗೆದುಕೊಂಡರು. 15 ದಿನಗಳ ಕಾಲ ಗಡುವು ನೀಡಿ ಕೇವಲ ಸರಕು ರೈಲುಗಳನ್ನು ಮಾತ್ರ ಪುನರಾರಂಭಿಸಲು ರೈತ ಮುಖಂಡರು ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ 15 ದಿನ ಗಡುವು ಕೊಟ್ಟು ’ರೈಲ್ ರೋಕೋ’ ವಾಪಾಸ್ ಪಡೆದ ಪಂಜಾಬ್ ರೈತ ಸಂಘಟನೆಗಳು!
ಪಿಟಿಐ ಜೊತೆ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ, “ಡಿಸೆಂಬರ್ 3 ರಂದು ಬೆಳಿಗ್ಗೆ 11 ಗಂಟೆಗೆ ವಿಜಯನ್ ಭವನದಲ್ಲಿ ಎರಡನೇ ಸುತ್ತಿನ ಚರ್ಚೆಗೆ ನಾವು 30 ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದಿದ್ದೇವೆ” ಎಂದು ಹೇಳಿದರು.
ಕಾರ್ಯದರ್ಶಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪರವಾಗಿ ರೈತ ಸಂಘಟನೆಗಳಿಗೆ ಆಹ್ವಾನವನ್ನು ಕಳುಹಿಸಿದ್ದಾರೆ. ಸಭೆಯಲ್ಲಿ ಆಹಾರ ಸಚಿವ ಪಿಯೂಷ್ ಗೋಯಲ್ ಕೂಡ ಹಾಜರಾಗುವ ನಿರೀಕ್ಷೆಯಿದ್ದು, ಮಾತುಕತೆಗೆ ಪಂಜಾಬ್ ಸರ್ಕಾರದ ಆಹಾರ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!
ನವೆಂಬರ್ 13 ರಂದು ಭಾರತ ಸರ್ಕಾರದೊಂದಿಗೆ ಪಂಜಾಬ್‌ನ ರೈತ ಮುಖಂಡರ ಸತತ ಏಳು ಗಂಟೆಗಳ ಸಭೆ ನಡೆಸಿದರು. ರೈತ ಮುಖಂಡರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದರೂ ಸಹ ಸರ್ಕಾರದಿಂದ ರೈತರಿಗೆ ಯಾವುದೇ ಖಚಿತ ಭರವಸೆ ದೊರೆತಿರಲಿಲ್ಲ.
ಸರ್ಕಾರವು ತನ್ನ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಅಥವಾ ಎಲ್ಲಾ ರೈತರಿಗೆ ಮತ್ತು ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಟ ಬೆಂಬಲ ಬೆಲೆ ನೀಡಲು ಬದ್ಧವಾಗಿಲ್ಲ. ಸಭೆಯಲ್ಲಿ ರೈತ ಮುಖಂಡರು ಎತ್ತಿದ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಪೂರ್ವಭಾವಿ ಅಥವಾ ರಚನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಹಾಗಾಗಿ ಎಐಕೆಎಸ್‌ಸಿಸಿ, ರಾಷ್ಟ್ರೀಯ ಕಿಸಾನ್ ಮಹಾಸಂಗ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ ಹಲವಾರು ರೈತರು ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಮತ್ತು 500 ಕ್ಕೂ ಹೆಚ್ಚು ರೈತ ಸಂಘಟನೆಗಳು ನವೆಂಬರ್ 26-27ರಂದು ದೆಹಲಿ ಚಲೋ ನಡೆಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ‘ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ರೈತರ ಉತ್ಪಾದನಾ ವೆಚ್ಚ ಮಾತ್ರ ಡಬಲ್ ಆಗಿದೆ’
ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್‌ಸಿಸಿ ಅಕ್ಟೋಬರ್ 27 ರಂದೇ ನವದೆಹಲಿಯ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ಸಭೆ ಸೇರಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು ಎಂದು ಎಐಕೆಎಸ್‌ಸಿಸಿ ಮಾಧ್ಯಮ ಕಾರ್ಯದರ್ಶಿ ಅಶುತೋಷ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರು ಮೋದಿ ಸರ್ಕಾರದ ಅಹಂಕಾರವನ್ನು ಮಟ್ಟಹಾಕುತ್ತಾರೆ: ಪ್ರತಿಭಟನಾ ನಿರತ ರೈತರು


