“ವಿಧಾನ ಪರಿಷತ್ತಿಗೆ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅಥವಾ ನಾಮನಿರ್ದೇಶನ ಮಾಡುವುದು ಹಿಂಬಾಗಿಲಿನ ಪ್ರವೇಶಕ್ಕೆ ಸಮನಾಗಿರುತ್ತದೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕರ್ನಾಟಕ ಹೈಕೋರ್ಟ್ ಮುಂದೆ ಬುಧವಾರ ವಾದಿಸಿದರು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದಾರೆ.
‘ಆರ್.ಶಂಕರ್, ಎನ್.ನಾಗರಾಜ್ ಮತ್ತು ಎ.ಎಚ್.ವಿಶ್ವನಾಥ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಬೇಕು ಎನ್ನುವ ನಿರ್ಧಾರ ಮತ್ತು ಅವರ ನಾಮನಿರ್ದೇಶನವನ್ನು ಪ್ರಶ್ನಿಸುವ’ ಪಿಐಎಲ್‌ಗಳ ಕುರಿತು ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಅಧಿಕೃತವಾಗಿ ಬಿಜೆಪಿ ಸೇರಿದ 17 ಅನರ್ಹ ಶಾಸಕರು: ಭಾವೀ ಮಂತ್ರಿಗಳು ಎಂದ ಯಡಿಯೂರಪ್ಪ
ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, “ಈ ಮೂವರು ರಾಜಕಾರಣಿಗಳ ಅನರ್ಹತೆಯನ್ನು ಸ್ಪೀಕರ್ ಸಮರ್ಥಿಸಿದ್ದಾರೆ. ಆದ್ದರಿಂದ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಪ್ರತಿವಾದಿ ವಾದ ಮಂಡಿಸಲು ಸಮಯ ಕೋರಿರುವುದರಿಂದ ನ್ಯಾಯಪೀಠವು ಈ ವಿಚಾರಣೆಯನ್ನು ಇಂದು ನಡೆಸಲಿದೆ.
ಇದನ್ನೂ ಓದಿ: ಎಚ್. ವಿಶ್ವನಾಥ್, ಸಿ. ಪಿ. ಯೋಗೇಶ್ವರ್ ಸೇರಿ ಐವರು ವಿಧಾನಪರಿಷತ್‌ಗೆ ನಾಮನಿರ್ದೇಶನ
ಅನರ್ಹಗೊಂಡ ಶಾಸಕರಾದ ಎ.ಎಚ್.ವಿಶ್ವನಾಥ್ (ನಾಮನಿರ್ದೇಶಿತ) ಮತ್ತು ಎಂಟಿಬಿ ನಾಗರಾಜ್ ಡಿಸೆಂಬರ್ ಉಪಚುನಾವಣೆಯಲ್ಲಿ ಸೋತಿದ್ದರು. ಶಂಕರ್ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.
ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಮೇಲ್ಮನೆಗೆ ಇವರ ನಾಮನಿರ್ದೇಶನ/ಚುನಾವಣೆ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಇವರನ್ನು ಪರಿಷತ್ತಿನಲ್ಲಿ ಸೇರಿಸಿಕೊಳ್ಳುವುದು ಸಂವಿಧಾನದ 164 ಮತ್ತು 361 ಬಿ ವಿಧಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!


