ಕೇಂದ್ರ ಸರ್ಕಾರದೊಂದಿಗೆ ಚರ್ಚೆಗೆ ಆಗಮಿಸಿದ್ದ ರೈತರು ಮಾತುಕತೆಯಿಂದ ಹೊರನಡೆದರು ಎಂಬ ಕೇಂದ್ರ ಸಚಿವರ ಮಾತನ್ನು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ (AIKSCC) ನಿರಾಕರಿಸಿದ್ದು ಅದೊಂದು ದೊಡ್ಡ ಸುಳ್ಳು ಎಂದು ಹೇಳಿದೆ.
ಡಿಸೆಂಬರ್ 5 ರಂದು 3 ಕಾಯಿದೆಗಳನ್ನು ರದ್ದುಗೊಳಿಸುವ ಬೇಡಿಕೆಯನ್ನು ಪರಿಗಣಿಸಲು ಸಚಿವರು ಸ್ಪಷ್ಟವಾಗಿ ಪ್ರಸ್ತಾಪಿಸಿದ್ದರು ಆದರೆ ಮತ್ತೇ ತಮ್ಮ ಹಳೆಯ ಪ್ರಸ್ತಾಪದೊಂದಿಗೆ ಹಿಂತಿರುಗಿದರು. ಇದೀಗ ರೈತರು ಸರ್ಕಾರದ ಪ್ರಸ್ತಾಪಗಳಿಗೆ ಸ್ಫಂದಿಸಲಿಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು AIKSCC ಆರೋಪಿಸಿದೆ.
ಇದನ್ನೂ ಓದಿ: ರೈತರಿಗೆ ಬೆಂಬಲ: ‘#WeUnitedForFarmers’ ಟ್ರೆಂಡಿಂಗ್ – ಪ್ರತಿತಂತ್ರ ಹೂಡುತ್ತಿರುವ ಬಿಜೆಪಿ!
3 ಕಾಯಿದೆಗಳು ಮತ್ತು ಇಬಿ 2020 ಅನ್ನು ರದ್ದುಗೊಳಿಸುವುದು ರೈತರ ಪ್ರಮುಖ ಬೇಡಿಕೆಯಾಗಿದೆ ಎಂದು AIKSCC ತಿಳಿಸಿದೆ.
ಸಿಂಘೂ, ಟಿಕ್ರಿ, ಘಾಝೀಪುರ್ ಮತ್ತು ಪಾಲ್ವಾಲ್‌ನಲ್ಲಿ ನಡೆಯುತ್ತಿರುವ ಧರಣಿಗೆ ಇನ್ನೂ ಹೆಚ್ಚಿನ ರೈತರು ಸೇರಲಿದ್ದಾರೆ ಎಂದಿರುವ AIKSCC, ಡಿಸೆಂಬರ್ 14 ರಂದು ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿರುವ ಧರಣಿ, ಜೈಪುರ- ದೆಹಲಿ ದಿಗ್ಭಂಧನ ಹಾಗೂ ಪ್ರತಿಭಟನೆಗೆ ಪೂರ್ಣ ಸಿದ್ದತೆ ನಡೆಯುತ್ತಿದೆ ಎಂದಿದೆ.
ತಮಿಳುನಾಡಿನ ರೈತರು ಧರಣಿಗೆ ಈಗಾಗಲೆ ಆಗಮಿಸಿದ್ದು, ಭಾರತದ ಬಹುತೇಕ ಎಲ್ಲ ರಾಜ್ಯಗಳ ರೈತರ ಗುಂಪುಗಳು ದೆಹಲಿ ಪ್ರತಿಭಟನೆಯಲ್ಲಿ ಸೇರಲು ಶೀಘ್ರದಲ್ಲೇ ಆಗಮಿಸಲಿವೆ ಎಂದು AIKSCC ಹೇಳಿದೆ. ಕೋಲ್ಕತ್ತಾದಲ್ಲಿ ಡಿಸೆಂಬರ್ 16 ರಂದು ರಾಜ ಭವನಕ್ಕೆ ಮೆರವಣಿಗೆಯೊಂದಿಗೆ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ, ಡಿಸೆಂಬರ್ 15 ರಂದು ಮುಂಬೈಯಲ್ಲೂ ಕೂಡಾ ಭಾರಿ ಪ್ರತಿಭಟನೆ ನಡೆಯಲಿದೆ ಎಂದು AIKSCC ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಾನವ ಹಕ್ಕುಗಳ ದಿನ: ಬಂಧನದಲ್ಲಿರುವ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿದ ರೈತರು!


