Homeಚಳವಳಿರೈತರಿಗೆ ಬೆಂಬಲ: '#WeUnitedForFarmers' ಟ್ರೆಂಡಿಂಗ್ - ಪ್ರತಿತಂತ್ರ ಹೂಡುತ್ತಿರುವ ಬಿಜೆಪಿ!

ರೈತರಿಗೆ ಬೆಂಬಲ: ‘#WeUnitedForFarmers’ ಟ್ರೆಂಡಿಂಗ್ – ಪ್ರತಿತಂತ್ರ ಹೂಡುತ್ತಿರುವ ಬಿಜೆಪಿ!

ಇಡೀ ಮಾನವ ಇತಿಹಾಸದಲ್ಲಿಯೇ ಶಾಂತಿಯುತವಾದ ಮತ್ತು ಅತಿದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಇನ್ನೂ ನಾವು ಮೌನವಾಗಿರಲು ಸಾಧ್ಯವಿಲ್ಲ. ಹಿಂಸಾಚಾರದ ವಿರುದ್ಧ ದನಿಯೆತ್ತೋಣ...

- Advertisement -
- Advertisement -

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ ರೈತರು ದೆಹಲಿಯಲ್ಲಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೆ ಕೇಂದ್ರದೊಟ್ಟಿಗೆ ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿದ್ದರೂ ಸಹ ಪಟ್ಟು ಬಿಡದ ರೈತರು ‘ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಟ್ವಿಟ್ಟರ್‌ನಲ್ಲಿ ಲಕ್ಷಾಂತರ ಜನ ಬೆಂಬಲ ನೀಡುತ್ತಿದ್ದು #WeUnitedForFarmers ಟ್ರೆಂಡಿಂಗ್ ಆಗುತ್ತಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಕೆನಡಾ ಪ್ರಧಾನಿ: ಅನಪೇಕ್ಷಿತ, ಅನಗತ್ಯ ಎಂದ ಭಾರತ ಸರ್ಕಾರ!

ರೈತರ ಈ ಪ್ರತಿಭಟನೆಗೆ ಇಡೀ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ಚಿಂತಕರು, ವಿದ್ವಾಂಸರು, ವಿದ್ಯಾರ್ಥಿಗಳು, ಕಾರ್ಮಿಕ ದಲಿತ ಸಂಘಟನೆಗಳು ಸೇರಿದಂತೆ ಎಲ್ಲರೂ ರೈತರ ಪರ ನಿಂತಿದ್ದಾರೆ. ಇದರ ಭಾಗವಾಗಿಯೇ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ #WeUnitedForFarmers ಎಂದು ಟ್ರೆಂಡಿಂಗ್ ಆಗುತ್ತಿದೆ.

 

ಈ ವರದಿ ಬರೆಯುವ ವೇಳೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಬಳಕೆದಾರರು ಈ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಪ್ರೀತಿಯ ಮುಂದೆ ನಿಮ್ಮ ದ್ವೇಷದ ಸೋಲು ನಿಶ್ಚಯ- ಲವ್ ಜಿಹಾದ್ ವಿರೋಧಿಸಿ, ಪ್ರೀತಿಗಾಗಿ ಪ್ರತಿಭಟನೆ!

ಜಶನ್ ಕೌರ್ ಎಂಬುವವರು ಟ್ವೀಟ್ ಮಾಡಿ, “ಭಾರತದಲ್ಲಿ ಈಗ ನಡೆಯುತ್ತಿರುವುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಡೀ ಮಾನವ ಇತಿಹಾಸದಲ್ಲಿಯೇ ಶಾಂತಿಯುತವಾದ ಮತ್ತು ಅತಿದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಇನ್ನೂ ನಾವು ಮೌನವಾಗಿರಲು ಸಾಧ್ಯವಿಲ್ಲ. ಹಿಂಸಾಚಾರದ ವಿರುದ್ಧ ದನಿಯೆತ್ತೋಣ ಮತ್ತು ಸಮಾನ ಮಾನವ ಹಕ್ಕುಗಳನ್ನು ಬೆಂಬಲಿಸೋಣ. # WeUnitedForFarmers” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ರೈತರ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ- AIKSCC ಅಧಿಕೃತ ಹೇಳಿಕೆ

ಜಶ್ವಂದರ್ ಪಾಲ್ ಸಿಂಗ್ ಎಂಬುವವರು “ಗೋಧಿ ಮಾಧ್ಯಮಗಳು ಈ ಟ್ರೆಂಡಿಂಗ್ ಅನ್ನು ಪ್ರಸಾರ ಮಾಡುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆಯನ್ನು ತುಕ್ಡೆ-ತುಕ್ಡೆ ಗ್ಯಾಂಗ್ ಶಾಹೀನ್ ಬಾಗ್ ಆಗಿ ಪರಿವರ್ತಿಸುತ್ತಿದೆ- ದೆಹಲಿ ಸಂಸದ

ಸತ್ನಂ ಸೋಹಲ್ ಎಂಬುವವರು ಟ್ವೀಟ್ ಮಾಡಿ, “ಯಾರಾದರೂ ಧೈರ್ಯ ಎಂದರೆ ಏನು ಎಂದು ಕೇಳಿದರೆ, ಅವರಿಗೆ ಈ ದೃಶ್ಯವನ್ನು ತೋರಿಸಿ” ಎಂದು ಗಾಯಗೊಂಡಿರುವ ರೈತರೊಬ್ಬರ ಮಾತುಗಳಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ’ಬಿಜೆಪಿ ರೈತರ ಕಲ್ಯಾಣವನ್ನೇ ಯೋಚಿಸುತ್ತದೆ- ಪ್ರತಿಭಟನೆ ಬಗ್ಗೆ ನಟ ಸನ್ನಿ ಡಿಯೋಲ್ ಹೇಳಿಕೆ

ಕುಲ್ವಿಂದರ್ ಸೆಖೊನ್ ಎಂಬುವವರು ವೀಡಿಯೋವೊಂದನ್ನು ಟ್ವೀಟ್ ಮಾಡಿ, “ನ್ಯೂಜಿಲ್ಯಾಂಡ್ ಸಂಸತ್ತಿನ ಮುಂದೆ ನಾವು ರೈತರನ್ನು ಬೆಂಬಲಿಸುತ್ತೇವೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿಯವರಿಗೆ ನಾಚಿಕೆಯಾಗಬೇಕು. ಗೋಧಿ ಮೀಡಿಯಾಗೆ ಧಿಕ್ಕಾರ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಸೈನಿಕನನ್ನು ಬಂಧಿಸಿದ ಪೊಲೀಸರು!

ಹೀಗೆ ಲಕ್ಷಾಂತರ ಜನರು ರೈತರನ್ನು ಮತ್ತು ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಕೇಂದ್ರದ ಬಿಜೆಪಿ ಸರ್ಕಾರವು ದರ್ಪ ತೋರುತ್ತಲೇ ಇದೆ. ಜೊತೆಗೆ ಪ್ರತಿಭಟನೆಯನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತದೆ.

ಅಲ್ಲದೇ ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಸಲೆಂದು 700 ಜಿಲ್ಲೆಗಳಲ್ಲಿ 100 ಪ್ರತಿಕಾಗೋಷ್ಠಿಗಳು ಮತ್ತು 700 ರೈತ ಸಭೆಗಳನ್ನು ಆಯೋಜಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿವಾದಾತ್ಮಕ ಕಾನೂನುಗಳ ಕುರಿತು ಜನರಲ್ಲಿನ ಆತಂಕ ಮತ್ತು ಕಳವಳಗಳನ್ನು ದೂರ ಮಾಡುಲು ಇದನ್ನು ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ

ಆದರೆ ರೈತರು ಇದಾವುದಕ್ಕೂ ಸೊಪ್ಪು ಹಾಕದೇ ತಮ್ಮ ಗುರಿಯನ್ನು ಮುಟ್ಟಿಯೇ ತೀರುತ್ತೇವೆ ಎಂದು ಬೀದಿಗಿಳಿದಿದ್ದಾರೆ.

ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಕೇಂದ್ರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಹಲವು ಸುತ್ತಿನ ಮಾತಕತೆ ಮತ್ತು ಸಂಧಾನ ಸಭೆಗಳನ್ನು ನಡೆಸಿದರೂ ಸಹ ಅವುಗಳೆಲ್ಲಾ ವಿಫಲಾಗಿವೆ.

ಇದನ್ನೂ ಓದಿ: ಇಂದು BMTC ಬಸ್‌ಗಳು ರಸ್ತೆಗಿಳಿಯುವುದಿಲ್ಲ: ಸಾರಿಗೆ ನೌಕರರ ಪ್ರತಿಭಟನೆ

ಇತ್ತೀಚೆಗೆ ಅಮಿತ್ ಶಾ ರೈತ ಮುಖಂಡರನ್ನು ಮಾತುಕತೆಗೆ ಕರೆದು, ಕಾನೂನುಗಳಲ್ಲಿ ಕೆಲವು ತಿದ್ದುಪಡಿಗಳನ್ನು ತರುವುದಾಗಿ ಪ್ರಸ್ತಾವವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು. ಆದರೆ ರೈತರು ಇದನ್ನೂ ಒಪ್ಪಿರಲಿಲ್ಲ.

ಇದರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸೀಮಗ್ ತೋಮರ್, “ನಮ್ಮ ಲಿಖಿತ ಪ್ರಸ್ತಾವಕ್ಕೆ ರೈತ ಸಂಘಟನೆಗಳು ಇನ್ನೂ ಪ್ರತಿಕ್ರಿಯಿಸಿಲ್ಲ” ಎಂದು ಹೇಳಿದ್ದಾರೆ. ಆದರೆ ಈಗಾಗಲೇ ರೈತರು ಕೇಂದ್ರ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.


ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...