Homeಮುಖಪುಟರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

- Advertisement -
- Advertisement -

ಜನರಿಂದ ಆರಿಸಿ ಬಂದ ಸರ್ಕಾರವು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದ ಭದ್ರತೆ, ಪ್ರಜೆಗಳ ಸೌಖ್ಯವನ್ನು ಮೆರೆತು ಏನೇನೋ ತರ್ಕ, ಕುತರ್ಕ, ಚಿಂತನೆಗಳ ಕರ್ಫ್ಯೂವನ್ನು ಪ್ರಜೆಗಳ ಮೇಲೆ ಹೇರಲು ಹವಣಿಸುತ್ತಿದೆ. ದೇಶದ ಆರ್ಥಿಕತೆಯ ಕುಸಿತ ಆಡಳಿತ ವೈಫಲ್ಯ ಮರೆಮಾಚಲು ದಿಢೀರನೆ ಒಂದು ದೇಶ ಒಂದು ಚುನಾವಣೆ ಅನ್ನೋದು. ಒಂದು ದೇಶ ಒಂದೇ ಧರ್ಮ ಒಂದೇ ಭಾಷೆ ಒಂದೇ ತೆರಿಗೆ ಅಂತ ಹೆದರಿಸೋದು ಅವ್ಯಾಹತವಾಗಿ ನಡೆದಿದೆ.

ಇದೆಲ್ಲಾ ದೇಶದ ಐಕ್ಯತೆಯನ್ನು ವಿಘಟನೆಯತ್ತ ಕೊಂಡೊಯುತ್ತದಲ್ಲದೆ ಆಯಾ ಭಾಷಿಕರ ಅಸ್ಮಿತೆಯ ಆತ್ಮಹತ್ಯೆಯಾದಿತೆಂಬುದರ ಬಗ್ಗೆ ಚಿಂತಿಸುತ್ತಿಲ್ಲ. ನಿರ್ದಿಷ್ಟ ಚುನಾವಣೆಯಲ್ಲಿ ಗೆಲ್ಲಲು ಆಯಾ ಸಮುದಾಯಗಳಿಗೆ ನಿಗಮಮಂಡಳಿ ಪ್ರಾಧಿಕಾರಗಳನ್ನು ಮಾಡ ಹೊರಡುವುದೂ ನಡೆಯುತ್ತಿದೆ.

ಸಾಲದ್ದಕ್ಕೆ ಇಲ್ಲದ ’ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಅಂತರಧರ್ಮೀಯ ಮದುವೆಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ’ಗೋಹತ್ಯೆ ನಿಷೇಧ’ ಜಾರಿಗೆ ತರುತ್ತೇವೆಂದು ಫರಮಾನು ಹೊರಡಿಸುತ್ತಾ ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳವರ ಮೇಲೆ ಸವಾರಿ ಮಾಡುವ ಚೋದ್ಯವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಜಾರಿಯಾಯಿತೆಂದು ’ಲವ್ ಜಿಹಾದ್ ಕಾಯ್ದೆ ತರಲು ಹೊರಟಿರುವ ಸರ್ಕಾರವೂ ಇದು ಅಸಂವಿಧಾನಿಕವೆಂದರಿಯದ್ದೇನಲ್ಲ. ನಿಗದಿಗೊಳಿಸಿದ ವಯೋಮಾನ ದಾಟಿದ ಪ್ರತಿ ಗಂಡು ಹೆಣ್ಣು ಇಷ್ಟಪಟ್ಟವರನ್ನು ವರಿಸುವ ಸ್ವಾತಂತ್ರ್ಯವಿದೆಯೆಂಬ ಕಾನೂನೇ ಇರುವಾಗ ನಿಯಮ ಹೇಗೆ ತರುತ್ತಾರಂತೆ! ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು, ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೇಮಿಸಿ ವರಿಸಬಾರದೆಂಬ ಯಾವ ಕಾಯ್ದೆ ಇದೆ? ಬಲವಂತ ಮತಾಂತರ ತಪ್ಪಿರಬಹುದು. ಇಷ್ಟಪಟ್ಟ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲವೆಂದು ಸಂವಿಧಾನವೇ ಸಾರಿರುವಾಗ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕೇಕೆ? ಮನುಷ್ಯರನ್ನು ಮನುಷ್ಯ ಮಟ್ಟಿಸಿಕೊಳ್ಳದ, ಮಮತೆ ತೋರದ ಧರ್ಮ ಒಂದಿದ್ದರೆ ಅದರಲ್ಲೆ ಉಳಿಯಲು ಜಿಗುಪ್ಸೆಗೊಂಡು ಪ್ರೀತಿ ಸಾಮರಸ್ಯ ಸಮಾನತೆ ತೋರುವ ಯಾವ ಧರ್ಮವಾದರೇನು ಹೋಗುವುದು ಸಹಜವಲ್ಲವೆ. ಕನಿಷ್ಟ ಜೊತೆಗೆ ಕೂತು ಉಣ್ಣದವರ ನಡುವೆ ವಿವಾಹಗಳಾದವೆ? ಹೀಗಾಗಿಯೇ ಕಾಲಕಾಲಕ್ಕೆ ರೂಪಾಂತರಗಳಾಗಿವೆ. ಅಪಾರ ಬುದ್ಧಿಮತ್ತೆ ಇರುವ ಮಾನವತಾವಾದಿ ಅಂಬೇಡ್ಕರ್ ಅಂಥವರೇ ನೋವುಂಡು ಬೌದ್ಧಧರ್ಮಕ್ಕೆ ಮತಾಂತರಗೊಂಡರೆಂದಾಗ ಜಾತಿಯ ಅಟ್ಟಹಾಸ ಅಳೆವ ಮಾಪನವೆಲ್ಲಿಂದ ತರೋದು ಹೇಳಿ.

ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸುವ ಕಾರ್ಯ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವುದೂ ಸಹ ’ಜಿಹಾದಿ’ ಅಲ್ಲವೆ? ಜಿಹಾದಿಗೂ ಲವ್‌ಗೂ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೊ! ’ಜಿಹಾ’ ಅಂದರೆ ಇಷ್ಟೆ ಅನ್ಯಾಯದ ವಿರುದ್ಧ ಹೋರಾಟ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾ ಅವರ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಪ್ರಯತ್ನಗಳಾಗುತ್ತಿರುವುದು ಜನಸಮಾನ್ಯರಿಂದಲ್ಲ. ಆಳುವ ಪ್ರಭುತ್ವದಿಂದಲೇ ಎಂದಾಗ ಯಾರ ಬಳಿ ದೂರುವುದು? ಮುಸ್ಲಿಂ ಹುಡುಗರು ಮಾತ್ರವೇ ಪ್ರೀತಿಸಿ ಮದುವೆಯಾಗಿಯೋ, ಆಗದೆಯೋ ಮೋಸ ಮಾಡುತ್ತಿದ್ದಾರೆಯೆ? ಹಿಂದೂಗಳಲ್ಲಿಯೂ ಅದೆಷ್ಟು ಅಂತರ್ಜಾತಿ ವಿವಾಹಗಳು ವಿಫಲವಾಗಿಲ್ಲ ಹೇಳಿ. ಸನಾತನವ್ಯಾಧಿಗಳಿಂದಾಗಿ ಮರ್ಯಾದಾ ಹತ್ಯೆಗಳು ನಡೆಯುತ್ತಿಲ್ಲವೆ.

ಯಾವನೋ ಮುಸಲ್ಮಾನನೊಬ್ಬ ಹಿಂದೂ ಹೆಣ್ಣೊಬ್ಬಳಿಗೆ ಮೋಸ ಮಾಡಿದನೆಂದಾದರೆ ಅವನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸದೆ, ಲವ್ ಜಿಹಾದಿ ನಿಷೇಧ ಕಾಯ್ದೆಗೆ ಮುಂದಾಗೋದು ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡಂತೆ. ಇದನ್ನು ಕಾನೂನಿಂದ ಮಾನ್ಯ ಮಾಡಲು ಸಾಧ್ಯವೇ? ಜಾತಿ ಧರ್ಮದ ಹೊರತಾಗಿಯೂ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವನ್ನು ಅತಿಕ್ರಮಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿದೆ. ಇತ್ತೀಚಿಗೆ ಇಂತದ್ದೇ ಪ್ರೇಮ ಪ್ರಕರಣದಲ್ಲಿ ರಮ್ಯ ಮತ್ತು ವಾಜಿದಾಖಾನ್‌ರ ಅಂತರ್ಧರ್ಮಿಯ ವಿವಾದ ವಿಚಾರದಲ್ಲಿ ನ್ಯಾಯಾಮೂರ್ತಿ ಎಸ್. ಸುಜಾತ ಹಾಗೂ ಸಚಿನ್ ಶಂಕರ್ ಮಗದಮ್ ಅವರುಗಳಿದ್ದ ಪೀಠ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೂ ಸರ್ಕಾರ ಕಾಯ್ದೆ ತರಲು ಹೊರಟಿದೆ. ಇದು ಸ್ವಂತ ಆಲೋಚನೆಯೂ ಅಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಕಲು.

ಇನ್ನು ಗೋಹತ್ಯೆ ನಿಷೇಧದ ಮಾತು ಬೇರೆ. ಈ ವಿಷಯದಲ್ಲಾಗಲೇ ಧರ್ಮಧರ್ಮಗಳ ನಡುವೆ, ಜಾತಿಜಾತಿಗಳ ಮಧ್ಯೆ ಕೊಲೆಗಳೇ ಆಗಿವೆಯಾದರೂ ಹಗ್ಗಜಗ್ಗಾಟ ನಿಲ್ಲುವಂತಿಲ್ಲ. ಅನಾದಿಕಾಲದಲ್ಲಿ ಎಲ್ಲರೂ ಒಂದೇ ಜಾತಿಯವರೆ – ಬೇಟೆಯಾಡುವ ಬೇಡರು, ಎಲ್ಲಾ ಮಾಂಸಾಹಾರಿಗಳೇ. ಒಂದು ಕಾಲದಲ್ಲಿ ವೈದಿಕರೂ ಮಾಂಸಾಹಾರಿಗಳೇ ಎಂಬ ವಾದವೂ ಈಗ ಹಳೆಯದು. ನಾವು ಏನನ್ನು ಇಷ್ಟಪಟ್ಟು ಉಣ್ಣುತ್ತೇವೋ ಉಡುತ್ತೇವೋ ಹಾಗೆ ಮತಾಂತರವೋ ವೈಯಕ್ತಿಕ ಹಕ್ಕೆಂದು ಸಂವಿಧಾನದಲ್ಲಿ ಹೇಳಿದ್ದರೂ ಸರ್ಕಾರ ಜನರ ನೆಮ್ಮದಿಗೆ ಮತ್ತೆ ಮತ್ತೆ ಕೊಳ್ಳಿ ಇಡುವ ಯತ್ನ ಮಾಡುತ್ತಲೇ ಇದೆಯೇಕೆ? ಮುಸ್ಲಿಮರಲ್ಲಿ ಮಾತ್ರವೆ ಉಗ್ರರಿದ್ದಾರೆಯೇ? ಹಿಂದೂಗಳಲ್ಲಿ ಉಗ್ರರು, ಮೂಲಭೂತವಾದಿಗಳಿಲ್ಲವೇ? ಭಯೋತ್ಪಾದಕರು ಜಿಹಾದಿಗಳೂ ಮುಸ್ಲಿಮರಲ್ಲಿ ಮಾತ್ರವಿದ್ದಾರೆಂಬುದು ಪೂರ್ವಾಗ್ರಹಪೀಡಿತ ಅರ್ಧ ಸತ್ಯವಷ್ಟೆ.

ಇನ್ನು ಕ್ರಾಸ್ ಮದುವೆಗಳಾಗಿವೆ ಎಂದು ವಿರೋಧ ಪಕ್ಷದ ನಾಯಕರ ಮಾತಿಗೆ ಆಳುವ ರಾಜಕಾರಣಿಗಳು ಮುನಿದು ಹೊಗೆ ಹಾಕಿದ್ದಾರೆ. ಇಂತಹ ಮದುವೆಗಳು 600 ವರ್ಷ ಆಳಿದ ಮೊಘಲರ ಕಾಲದಲ್ಲೂ ನಂತರ 200 ವರ್ಷ ಆಳಿದ ಬ್ರಿಟಿಷರ ಕಾಲದಲ್ಲೂ ನಡೆದಿದೆ. ಇಲ್ಲಿರುವ ಬಹುತೇಕ ಮುಸ್ಲಿಮರು ಕ್ರಿಶ್ಚಿಯನ್ನರೂ ಕನ್ವರ್ಟೆಡ್ ಹಿಂದೂಗಳು. ಇಂತಹ ಕೇಸ್‌ಗಳು ವೇದಗಳ ಕಾಲದಲ್ಲೇ ನಡೆದಿವೆ, ವಸಿಷ್ಠ ಅರುಂಧತಿ, ಜಮದಗ್ನಿ ರೇಣುಕಾರ ವಿವಾಹಗಳಿಗೇನಂತೀರಿ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

ಹೀಗಂದರೆ ತಟ್ಟನೆ ಧರ್ಮದ್ರೋಹಿ, ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತದೆ. ಅಂಬೇಡ್ಕರ್ ಕೊಟ್ಟ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವೀಗ ನಡೆದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಆಳುವವರ ಮುಖವಾಣಿಯಾಗಿದೆ. ವಿರೋಧ ಪಕ್ಷದಂತೆ ಧ್ವನಿ ಎತ್ತಬೇಕಾದ ದವರು ಆಳುವವರಿಗೆ ಮಾರಿಕೊಂಡು ಬಕೆಟ್ ಹಿಡಿದು ವಾಚಾಮಗೋಚರವಾಗಿ ಹೊಗಳಿ ಆಟ್ಟಕ್ಕೇರಿಸುತ್ತಾ ಅಸಹ್ಯ ಹುಟ್ಟಿಸುತ್ತಿದೆ. ಸರ್ಕಾರವಾಗಲಿ ಯಾರೇ ಅಗಲಿ ಕಾನೂನಿಗಿಂತ ಅತೀ ಅಲ್ಲವೆಂದು ತಿಳಿದೂ ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುವಲ್ಲಿ ಸದುದ್ದೇಶವಂತೂ ಕಾಣುತ್ತಿಲ್ಲ. ಎದೆ ಎಷ್ಟು ಇಂಚಿದೆ ಅನ್ನೋದು ದೊಡ್ಡ ವಿಷಯವಾಗದೆ ಮಿದುಳು ಎಷ್ಟಿದೆ ಎಂಬುದೀಗ ಸಾಬೀತಾಗಬೇಕಿದೆಯಲ್ಲವೆ.

  • ಡಾ. ಬಿ. ಎಲ್ ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. 26 ಕಾದಂಬರಿಗಳನ್ನು ಪ್ರಕಟಿಸಿದ್ದು ಈ ಪೈಕಿ 9 ಚಲನಚಿತ್ರಗಳಾಗಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...