ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಬಗ್ಗೆ ರೈತರು ಮತ್ತು ವಿರೋಧ ಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಈ ಕಾಯ್ದೆಗಳ ಕುರಿತು ಪ್ರಚಾರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಯ್ದೆಗಳನ್ನು ವಿರೋಧಿಸುವುದಕ್ಕೆ ಪ್ರಮುಖ ವಿಷಯವಾದ ಕನಿಷ್ಟ ಬೆಂಬಲ ಬೆಲೆ (MSP)ಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಮೂರು ಕಾಯ್ದೆಗಳನ್ನು ಜಾರಿ ಮಾಡುವುದರ ಮೂಲಕ MSPಯನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಇದು MSPಯನ್ನು ನಾಶಪಡಿಸುವುದಿಲ್ಲ ಎಂದು ಹೇಳುತ್ತಿದೆ. ಆದರೆ ಬಿಜೆಪಿ MSP ಕುರಿತು ನಿರ್ದಿಷ್ಟ ಕಾನೂನು ಮಾಡಲೂ ಸಹ ಹಿಂದೇಟು ಹಾಕುತ್ತಿದೆ.
ಇದನ್ನೂ ಓದಿ: ಕೈ ಮುಗಿದು, ತಲೆಬಾಗಿ ರೈತರೊಡನೆ ಚರ್ಚಿಸಲು ಸಿದ್ದನಿದ್ದೇನೆ: ನರೇಂದ್ರ ಮೋದಿ
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲ, “MSP ಕುರಿತು ಕಾನೂನು ಜಾರಿಗೆ ತರಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು. ಆದರೆ ಮೋದಿಜಿಯವರ ಮಾತನ್ನು ಮೋದಿಜಿವರೇ ಏಕೆ ಕೇಳುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
PM Narendra Modi himself had declared that a law on the MSP needs to be implemented. Then why doesn't Modiji listen to Modiji: Randeep Surjewala, Congress pic.twitter.com/ghZbXcmGVk
— ANI (@ANI) December 18, 2020
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ – ವಕೀಲರ ಹೇಳಿಕೆ
MSPಯನ್ನು ಪಡೆದುಕೊಳ್ಳಲು ಭಾರತದ ರೈತರು ದಶಕಗಳಿಂದ ಹೋರಾಡುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೇವಲ 23 ಬೆಳೆಗಳಿಗೆ ಮಾತ್ರ MSPಯನ್ನು ನೀಡಲಾಗುತ್ತಿದೆ. ಆದರೆ ಇದೂ ಕೂಡ ವೈಜ್ಞಾನಿಕವಾಗಿಲ್ಲ ಎಂಬುದು ರೈತರ ವಾದ.
ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನರೇಂದ್ರ ಮೋದಿಯವರೇ ಖುದ್ದಾಗಿ MSP ಜಾರಿ ಮಾಡಿ ಎಂದು ಹೊರಾಟ ಮಾಡಿದ್ದರು. ಆದರೆ ಇಂದು ಮೋದಿಜಿ ತಮ್ಮ ಮಾತನ್ನೇ ಕೇಳುತ್ತಿಲ್ಲ ಎಂದು ರಣದೀಪ್ ಸುರ್ಜೆವಾಲ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಟೊಯೋಟಾ ಕಾರ್ಮಿಕರು


