ಇಂಡಿಯನ್ ಪ್ರೀಮಿಯರ್ ಲೀಗ್ (IPL T20) ಕ್ರಿಕೆಟ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಗೆ ಗುರುವಾರ ಅನುಮತಿ ಸಿಕ್ಕಿದ್ದು, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರ್ವಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ IPLನಲ್ಲಿ ಆಡುವ ತಂಡಗಳ ಸಂಖ್ಯೆಯು ಹತ್ತಕ್ಕೇರಿದೆ.
ಈ ಕುರಿತು ಎಎನ್‌ಐ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರಾತ್ರಿ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ!
Board of Control for Cricket in India (BCCI) approves 10-team IPL from 2022, in its annual general meeting today pic.twitter.com/AGEEFvx5Ke
— ANI (@ANI) December 24, 2020
ಇದನ್ನೂ ಓದಿ: ರಾತ್ರಿ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ!
“ಮುಂಬರುವ IPLನಲ್ಲಿಯೇ ಎರಡೂ ಹೊಸ ತಂಡಗಳನ್ನು ಸೇರ್ಪಡೆ ಮಾಡುವ ಯೋಚನೆಯಿತ್ತು. ಆದರೆ ಸಮಯ ಕಡಿಮೆ ಇರುವುದರಿಂದ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದು ಸರಿಯಾಗುವುದಿಲ್ಲ ಎಂಬ ಕಾರಣಕ್ಕೆ 2022ರ ಐಪಿಎಲ್‌ನಲ್ಲಿ ಸೇರಿಸಲು ನಿರ್ಧರಿಸಲಾಯಿತು” ಎಂದು ಮೂಲಗಳು ತಿಳಿಸಿವೆ.
ಇದಿಷ್ಟೇ ಅಲ್ಲದೇ ಸಭೆಯಲ್ಲಿ ಇನ್ನಷ್ಟು ಪ್ರಮುಖ ಅಂಶಗಳ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮುಖ್ಯಾಂಶಗಳನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ದೆಹಲಿ: ಆಪ್ ಮುಖಂಡ ರಾಘವ್ ಚಡ್ಡಾ ಕಛೇರಿಯ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ
“2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ T20 ಕ್ರಿಕೆಟ್‌ಗೆ ಬೆಂಬಲ, 2022ರ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹತ್ತಕ್ಕೇರಿಸಲು ಅನುಮೋದನೆ, ಜನವರಿಯಲ್ಲಿ ಸೈಯದ್ ಮುಷ್ತಾಕ್ ಅಲಿ T20 ಟೂರ್ನಿಯೊಂದಿಗೆ ದೇಶಿ ಕ್ರಿಕೆಟ್‌ಗೆ ಚಾಲನೆ, ಕೊರೊನಾ ಕಾರಣದಿಂದ ಆದಾಯ ನಷ್ಟವಾಗಿರುವ ಪುರುಷ ಮತ್ತು ಮಹಿಳಾ ದೇಶಿ ತಂಡಗಳ ಕ್ರಿಕೆಟಿಗರಿಗೆ ಪರಿಹಾರ, ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ ಶುಕ್ಲಾ, ಐಸಿಸಿಯ ಮಂಡಳಿಯಲ್ಲಿ ಸೌರವ್ ಗಂಗೂಲಿ ನಿರ್ದೇಶಕರಾಗಿ ಮುಂದುವರಿಯಲು ಸಹಮತ, ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಮಿತಿ ಸಭೆಯಲ್ಲಿ ಪ್ರತಿನಿಧಿಯಾಗಿ ಕಾರ್ಯದರ್ಶಿ ಜಯ್ ಶಾ ಹೆಚ್ಚುವರಿ ನಿರ್ದೇಶಕರಾಗಿ ಮುಂದುವರಿಕೆ ಸೇರಿದಂತೆ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಪದಾಧಿಕಾರಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು, ಐಪಿಎಲ್ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ’ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದ ಮೋದಿಗೆ ಯಡಿಯೂರಪ್ಪ ಮೇಲಿನ ಆರೋಪ ಕಣ್ಣಿಗೆ…


