ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡಾ ಅವರ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದು, ದೆಹಲಿ ಜಲಮಂಡಳಿಗೆ ಸೇರಿದ ಕಛೇರಿಯನ್ನು ಇಂದು ಧ್ವಂಸಗೊಳಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಘವ್ ಚಡ್ಡಾ, “ಬಿಜೆಪಿಯ ಗೂಂಡಾಗಳು ಜಲ ಮಂಡಳಿಯ ಕಛೇರಿಯ ಮೇಲೆ ದಾಳಿ ಮಾಡಿದ್ದಾರೆ. ನನ್ನ ಕಛೇರಿ ಪೂರಾ ಧ್ವಂಸಗೊಂಡಿದೆ. ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇದರ ವೀಡಿಯೋವನ್ನು ರಾಘವ್ ಚಡ್ಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ’ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದ ಮೋದಿಗೆ ಯಡಿಯೂರಪ್ಪ ಮೇಲಿನ ಆರೋಪ ಕಣ್ಣಿಗೆ…
BJP goons have attacked the @DelhiJalBoard headquarters. My entire office has been vandalized. Staff has been threatened. pic.twitter.com/iEwhaGBYRB
— Raghav Chadha (@raghav_chadha) December 24, 2020
ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇಬ್ಬಂದಿತನವಿದೆ: ಸುನೀಲ್ ಗಾವಾಸ್ಕರ್
“ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ನೇತೃತ್ವದಲ್ಲಿ ಮಧ್ಯಾಹ್ನ 12:30 ಕ್ಕೆ ದಿಲ್ಲಿ ಜಲ ಮಂಡಳಿಯ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ” ಎಂದು ಆಮ್ ಆದ್ಮಿ ಪಕ್ಷವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ, “ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿಯ ಕಛೇರಿಯ ಗೇಟ್ ಅನ್ನು ಮುರಿಯುತ್ತಿದ್ದರು. ಅಮಿತ್ ಶಾ ಅವರ ಪೊಲೀಸರು ಹಿಂದಿನಿಂದ ತಮಾಶೆ ನೋಡುತ್ತಿದ್ದರು” ಎಂದು ಆರೋಪಿಸಿದೆ.
भाजपा के गुंडे दिल्ली जल बोर्ड के ऑफिस का गेट तोड़ रहे थे और अमित शाह की पुलिस पीछे से तमाशा देख रही थी। #BJPKeGunde pic.twitter.com/txfiOVXmxd
— AAP (@AamAadmiParty) December 24, 2020
ಇದನ್ನೂ ಓದಿ: ವಿಸ್ಟ್ರಾನ್ ವಿವಾದ: ಆಕ್ರೋಶವಾಯಿತೆ ಕಾರ್ಮಿಕರಿಗೆ ಕೊಟ್ಟ ಕಿರುಕುಳ?
“ಮೊದಲು ಅರವಿಂದ್ ಕೇಜ್ರಿವಾಲ್ ರನ್ನು ಗೃಹ ಬಂಧನಕ್ಕೊಳಪಡಿಸಿದರು. ಬಳಿಕ ಮನೀಷ್ ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆಯಿತು. ಈಗ ರಾಘವ್ ಛಡ್ಡಾ ಕಚೇರಿಯ ಮೇಲೆ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ಯಾವುದರ ಕುರಿತು ಭಯಪಡುತ್ತಿದೆ? ಎಂದು ಪಕ್ಷದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
देश की राजधानी में ये कैसी गुण्डागर्दी है? पहले @ArvindKejriwal के घर तोड़ फोड़ फिर @msisodia के परिवार पर अटैक और अब @raghav_chadha के ऑफ़िस पर जानलेवा हमला @AmitShah जी चुनाव की हार अभी तक नही भूला पा रहे आप लोग खून-ख़राबे पर उतर आये। https://t.co/sqwme7mFJ5
— Sanjay Singh AAP (@SanjayAzadSln) December 24, 2020
ಇದನ್ನೂ ಓದಿ: ಕೇರಳ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲರ ನಕಾರ: ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಆಕ್ರೋಶ