ಸುನೀಲ್, ಗಾವಾಸ್ಕರ್‌,Sunil Gavaskar

ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇಬ್ಬಗೆಯ ನೀತಿಯಿದೆ ಎಂದಿರುವ ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಸುನೀಲ್ ಗಾವಸ್ಕರ್, “ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮವಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಪೋಟ್ಸ್‌ಸ್ಟಾರ್ ವೆಬ್‌ಸೈಟ್‌ತಮ್ಮ ಅಂಕಣದಲ್ಲಿ ಭಾರತೀಯ ಆಡಳಿತ ಮಂಡಳಿಯು ವಿಭಿನ್ನ ಆಟಗಾರರನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಂಡ ರೀತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಅಂಕಣದಲ್ಲಿ ಎಡಗೈ ವೇಗದ ಬೌಲರ್ ಟಿ.ನಟರಾಜನ್ ಅವರನ್ನು ಉಲ್ಲೇಖಿಸಿರುವ ಅವರು, ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯ ಈ ನಿಯಮಗಳು ಹೊಸ ಆಟಗಾರರಿಗೆ ಅಚ್ಚರಿಯಾಗಿರಬಹುದು, ಆದರೆ ಅವರು ಏನೂ ಹೇಳುವಂತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ’ದೆಹಲಿ ಕ್ರಿಕೆಟ್ ಮಂಡಳಿ’ಗೆ ರಾಜೀನಾಮೆ ನೀಡಿದ ಕ್ರಿಕೆಟ್ ದಂತಕತೆ ಬಿಷನ್ ಸಿಂಗ್ ಬೇಡಿ!

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೋಹ್ಲಿಗೆ ಆಸೀಸ್ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಆದರೆ ಅತ್ತ ತಮ್ಮ ಚೊಚ್ಚಲ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಎಡಗೈ ವೇಗಿ ತಂಗರಸು ನಟರಾಜನ್ ಅವರಿಗೆ ಈ ಅವಕಾಶವನ್ನು ಬಿಸಿಸಿಐ ನೀಡಿಲ್ಲ ಎಂದು ಗವಾಸ್ಕರ್‌ ಕಟುವಾಗಿ ಟೀಕಿಸಿದ್ದಾರೆ.

“ಐಪಿಎಲ್ ಪ್ಲೇ-ಆಫ್ ನಡೆಯುತ್ತಿರುವಾಗಲೇ ತಂಗರಸು ಮೊದಲ ಬಾರಿಗೆ ಅಪ್ಪನಾಗಿದ್ದರು. ಅವರನ್ನು ತಂಡದ ಭಾಗವಾಗಿಸದೆ ನೆಟ್ ಬೌಲರ್ ಆಗಿ, ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮುಂದುವರಿಯಲು ಕೇಳಲಾಗಿದೆ. ಓರ್ವ ಮ್ಯಾಚ್ ವಿನ್ನರ್ ಬೌಲರ್‌ಗೆ ನೆಟ್ ಬೌಲರ್ ಆಗಿ ಉಳಿದುಕೊಳ್ಳಲು ಹೇಳಲಾಗುತ್ತಿದೆ, ಅದನ್ನುಊಹಿಸಿ ನೋಡಿ” ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡದ ಮೀಟಿಂಗ್‌ನಲ್ಲಿ ಮನಬಿಚ್ಚಿ ನೇರವಾಗಿ ಮಾತನಾಡುತ್ತಾರೆ. ಹಾಗಾಗಿ ಒಂದು ಪಂದ್ಯದಲ್ಲಿ ಅಶ್ವಿನ್ ವಿಕೆಟ್‌ಗಳನ್ನು ಪಡೆಯದಿದ್ದರೆ ಮುಂದಿನ ಪಂದ್ಯದಿಂದ ಕೈಬಿಡಲಾಗುತ್ತದೆ. ಆದರೆ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಿಗೆ ಹೀಗಾಗುವುದಿಲ್ಲ” ಎಂದು ಗವಾಸ್ಕರ್ ಬೊಟ್ಟು ಮಾಡಿದ್ದಾರೆ.

ಈ ನಿಮಯಗಳ ಬಗ್ಗೆ ಯಾವ ಆಟಗಾರ ಆದರೂ ಆಶ್ಚರ್ಯಪಟ್ಟುಕೊಳ್ಳುತ್ತಾನೆ, ಆದರೆ ಹೊಸಬರು ಅದರ ಬಗ್ಗೆ ಶಬ್ದ ಎತ್ತುವ ಹಾಗಿಲ್ಲ. ಇದುವೇ ಟೀಮ್ ಇಂಡಿಯಾ. ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು. ನೀವು ನನ್ನನ್ನು ನಂಬದಿದ್ದರೆ ಅಶ್ವಿನ್ ಹಾಗೂ ನಟರಾಜನ್ ಅವರನ್ನೇ ಕೇಳಿ ಎಂದು ಸುನೀಲ್ ಗವಾಸ್ಕರ್ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್‌ ಅವರ ಅತ್ಯುತ್ತಮ 10 ಇನ್ನಿಂಗ್ಸ್‌ಗಳ ಪಟ್ಟಿ ಇಲ್ಲಿದೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here