Homeಮುಖಪುಟ’ದೆಹಲಿ ಕ್ರಿಕೆಟ್ ಮಂಡಳಿ’ಗೆ ರಾಜೀನಾಮೆ ನೀಡಿದ ಕ್ರಿಕೆಟ್ ದಂತಕತೆ ಬಿಷನ್ ಸಿಂಗ್ ಬೇಡಿ!

’ದೆಹಲಿ ಕ್ರಿಕೆಟ್ ಮಂಡಳಿ’ಗೆ ರಾಜೀನಾಮೆ ನೀಡಿದ ಕ್ರಿಕೆಟ್ ದಂತಕತೆ ಬಿಷನ್ ಸಿಂಗ್ ಬೇಡಿ!

ನಾನು ಅಪಾರ ಸಹಿಷ್ಣುತೆ ಮತ್ತು ತಾಳ್ಮೆಯ ಮನುಷ್ಯ. ಈ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಡಿಡಿಸಿಎ ಇದೀಗ ನನ್ನ ಸಹಿಷ್ಣುತೆಯನ್ನು ನಿಜವಾಗಿಯೂ ಪರೀಕ್ಷಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ

- Advertisement -
- Advertisement -

ದೆಹಲಿ ಕ್ರಿಕೆಟ್​ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಅವರ ಮೂರ್ತಿಯನ್ನು ದೆಹಲಿಯ ಫಿರೋಜ್​ ಷಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಮಾಜಿ ಕ್ರಿಕೆಟಿಗ ಸ್ಪಿನ್​ ದಂತಕಥೆ ಬಿಷನ್​ ಸಿಂಗ್ ಬೇಡಿ ದೆಹಲಿ ಕ್ರಿಕೆಟ್​ ಅಸೋಸಿಯೇಷನ್​ನಿಂದಲೇ ಹೊರ ನಡೆದಿದ್ದಾರೆ. ರಾಜಕಾರಣಿಗಳ ಪುತ್ಥಳಿಯನ್ನು ಕ್ರಿಕೆಟ್​ ಅಂಗಳದಲ್ಲಿ ಸ್ಥಾಪಿಸುವುದರಿಂದ ಸ್ವಜನಪಕ್ಷಪಾತವನ್ನು ಉತ್ತೇಜಿಸುವಂತಾಗುತ್ತದೆ ಮತ್ತು ಆಟಗಾರರಿಗಿಂತ ನಿರ್ವಾಹಕರೇ ಅಧಿಕ ಎನ್ನುವಂತಹ ಸಂಸ್ಕೃತಿಗೆ ಕಾರಣವಾಗುತ್ತದೆ, ಹೀಗಾಗಿ ಸ್ಟೇಡಿಯಂನ ವೀಕ್ಷಕರ ಸ್ಟಾಂಡ್​ಗೆ ಇಟ್ಟಿರುವ ನನ್ನ ಹೆಸರನ್ನೂ ಶೀಘ್ರವಾಗಿ ಅಳಿಸಿ ಹಾಕಿ ಎಂದು, ಪ್ರಸ್ತುತ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಅರುಣ್ ಜೇಟ್ಲಿ ಅವರ ಮಗ ರೋಹನ್​ ಜೇಟ್ಲಿಗೆ ಪತ್ರ ಬರೆದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟ್​ ದಂತಕಥೆ ಹಾಗೂ 1983 ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಮೊಹಿಂದರ್​ ಅಮರನಾಥ್​ ಹಾಗೂ ಬಿಷನ್​ ಸಿಂಗ್ ಬೇಡಿ ಅವರ ಹೆಸರನ್ನು 2017 ರಲ್ಲಿ ದೆಹಲಿ ಕ್ರಿಕೆಟ್​ ಅಸೋಸಿಯೇಷನ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್​ಗೆ ನಾಮಕರಣ ಮಾಡಿತ್ತು.​

ಇದನ್ನೂ ಓದಿ: ಅರುಣ್ ಜೈಟ್ಲಿ ಕೆಲ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದರೆ? ಇಲ್ಲಿದೆ ಹೊಸ ವಿವಾದ

ಬಿಷನ್​ ಸಿಂಗ್ ಬೇಡಿ ಡಿಡಿಸಿಎ ಅಧ್ಯಕ್ಷರಿಗೆ ತಾವು ಬರೆದಿರುವ ಪತ್ರದಲ್ಲಿ, “ನಾನು ಅಪಾರ ಸಹಿಷ್ಣುತೆ ಮತ್ತು ತಾಳ್ಮೆಯ ಮನುಷ್ಯ. ಈ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಡಿಡಿಸಿಎ ಇದೀಗ ನನ್ನ ಸಹಿಷ್ಣುತೆಯನ್ನು ನಿಜವಾಗಿಯೂ ಪರೀಕ್ಷಿಸುತ್ತಿದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನನ್ನನ್ನು ಪ್ರೇರೇಪಿಸುತ್ತಿದೆ.

ಆದ್ದರಿಂದ ಡಿಡಿಸಿಎ ಅಧ್ಯಕ್ಷರಾದ ರೋಹನ್​ ಜೇಟ್ಲಿ ಅವರಿಗೆ ನನ್ನ ಹೆಸರಿನ ನಿಲುವನ್ನು ತಕ್ಷಣದಿಂದ ಜಾರಿಗೆ ತರಲು ನಾನು ವಿನಂತಿಸುತ್ತೇನೆ. ವೀಕ್ಷಕರ ಸ್ಟಾಂಡ್​ಗೆ ಇಟ್ಟಿರುವ ನನ್ನ ಹೆಸರನ್ನು ಶೀಘ್ರದಲ್ಲೇ ತೆಗೆದುಹಾಕಿ. ಅಲ್ಲದೆ, ನನ್ನ ಡಿಡಿಸಿಎ ಸದಸ್ಯತ್ವವನ್ನು ನಾನು ತ್ಯಜಿಸುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಲ್ಲದೆ, “ನಾನು ಸಾಕಷ್ಟು ಯೋಚಿಸಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನಗೆ ದೊರೆತ ಗೌರವವನ್ನು ನಾನು ನಿರ್ಲಕ್ಷಿಸುತ್ತಿಲ್ಲ. ಎಲ್ಲರೂ ತಿಳಿದಿರುವಂತೆ ಗೌರವ ಎಂಬುದು ನಮ್ಮ ಜವಾಬ್ದಾರಿಗಳಿಂದ ನಮಗೆ ಧಕ್ಕುತ್ತದೆ. ನನಗೆ ಸಿಕ್ಕ ಗೌರವವೂ ಅಂಗಳದಲ್ಲಿ ನಾನು ತೋರಿದ ಪ್ರದರ್ಶನ ನನಗೆ ತಂದುಕೊಟ್ಟದ್ದು.

ಇದನ್ನೂ ಓದಿ: ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

ಆದರೆ, ನಾನೀಗ ಕ್ರಿಕೆಟ್​ ಅಂಗಳದಿಂದ ನಿವೃತ್ತನಾಗಿದ್ದೇನೆ. ನಾನು ನಂಬಿದ ಮೌಲ್ಯಗಳ ಭರವಸೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ಈಗ ನನ್ನ ಗೌರವವನ್ನು ಹಿಂದಿರುಗಿಸುತ್ತಿದ್ದೇನೆ. ಏಕೆಂದರೆ ನಾನೂ ಇನ್ನೂ ನನ್ನ ಮೌಲ್ಯಗಳನ್ನು ಉಳಿಸಿಕೊಂಡಿದ್ದೇನೆ.

ನನ್ನ ಈ ನಿರ್ಧಾರವನ್ನು ಇಂದಿನ ಸಂದರ್ಭಕ್ಕೆ ತಕ್ಕಂತೆ ಹೇಳುವುದಾದರೆ ನಾನು ಎಂದಿಗೂ ಅರುಣ್​ ಜೇಟ್ಲಿ ಅವರ ಕಾರ್ಯಶೈಲಿಯ ಅಭಿಮಾನಿಯಲ್ಲ. ನಾನು ಒಪ್ಪದ ಯಾವುದೇ ನಿರ್ಧಾರಗಳನ್ನು ಎಂದಿಗೂ ವಿರೋಧಿಸುತ್ತಲೇ ಇರುತ್ತೇನೆ” ಎಂದು ತಿಳಿಸಿದ್ದಾರೆ.

ದಿವಂಗತ ಅರುಣ್​ ಜೇಟ್ಲಿ ಕೇಂದ್ರ ಸರ್ಕಾರದ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮುನ್ನ 1999 ರಿಂದ 2013 ರವರೆಗೆ ಸತತ 14 ವರ್ಷಗಳ ಕಾಲ ದೆಹಲಿ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರ ಸ್ಮರಣಾರ್ಥ ಫಿರೋಜ್​ ಷಾ ಕೋಟ್ಲಾದಲ್ಲಿ ಅರುಣ್​ ಜೇಟ್ಲಿ ಅವರ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ನಿರ್ಧರಿಸಿದೆ.

ಇದನ್ನೂ ಓದಿ: ಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯಾರಿಗೂ ಹೆದರುವುದಿಲ್ಲ, 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಅಭ್ಯರ್ಥಿಗಳ ನಿರ್ಧಾರ: ಕಾಂಗ್ರೆಸ್

0
ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ಪ್ರತಿಷ್ಠಿತ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಇದ್ದ ಕುತೂಹಲಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಸಜ್ಜಾಗಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ)...