Homeಮುಖಪುಟಕೇರಳ ಅಭಯಾ ಕೊಲೆ ಪ್ರಕರಣ: ಫಾದರ್‌ ಥಾಮಸ್ ಕೊಟುರ್‌, ಸಿಸ್ಟರ್‌ ಸೆಫಿಗೆ ಜೀವಾವಧಿ ಶಿಕ್ಷೆ

ಕೇರಳ ಅಭಯಾ ಕೊಲೆ ಪ್ರಕರಣ: ಫಾದರ್‌ ಥಾಮಸ್ ಕೊಟುರ್‌, ಸಿಸ್ಟರ್‌ ಸೆಫಿಗೆ ಜೀವಾವಧಿ ಶಿಕ್ಷೆ

1992 ರಲ್ಲಿ ಕೊಟ್ಟಾಯಂನ ಸೇಂಟ್ ಪಿಯಸ್ ಕಾನ್ವೆಂಟ್‌ನಲ್ಲಿ ಅಪರಾಧಿಗಳಿಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ನೋಡಿದ್ದ 19 ವರ್ಷದ ಅಭಯಾ ಅವರನ್ನು ಕೊಲೆ ಮಾಡಿ ಬಾವಿಗೆ ಹಾಕಿದ್ದರು.

- Advertisement -
- Advertisement -

28 ವರ್ಷಗಳ ಹಿಂದೆ ಕೊಲೆಯಾದ ಕ್ರೈಸ್ತ ಸನ್ಯಾಸಿನಿ ಅಭಯಾ ಪ್ರಕರಣದಲ್ಲಿ ಕೇರಳ ಸಿಬಿಐ ನ್ಯಾಯಾಲಯವು ಫಾದರ್‌ ಥಾಮಸ್ ಕೊಟುರ್‌ ಮತ್ತು ಸಿಸ್ಟರ್‌ ಸೆಫಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದು, ಇಬ್ಬರಿಗೂ ಜೀವಾವಧಿ ಶಿ‌ಕ್ಷೆ ಮತ್ತು ಐದು ಲಕ್ಷ ದಂಡವನ್ನು ಘೋಷಿಸಿದೆ.

1992 ರಲ್ಲಿ ಕೊಟ್ಟಾಯಂನ ಸೇಂಟ್ ಪಿಯಸ್ ಕಾನ್ವೆಂಟ್‌ನಲ್ಲಿ ಅಪರಾಧಿಗಳಿಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ನೋಡಿದ್ದ 19 ವರ್ಷದ ಅಭಯಾ ಅವರನ್ನು ಕೊಲೆ ಮಾಡಿ ಬಾವಿಗೆ ಹಾಕಿದ್ದರು. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರಿಗೂ ಈಗಾಗಲೇ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ಅನ್ವಯವಾಗಲಿದೆ.

ಇದನ್ನೂ ಓದಿ: ಮೋದಿ, ಅಮಿತ್ ಶಾ ಕುರಿತು ಕಟುಟೀಕೆಯೇ ಸಂಜೀವ್ ಭಟ್ ಜೀವಾವಧಿ ಶಿಕ್ಷೆಗೆ ಕಾರಣವೆ?

 

ಶವಪರೀಕ್ಷೆ ಮತ್ತು ಇತರ ಪರೀಕ್ಷೆಗಳ ಹೊರತಾಗಿಯೂ, ಕೊಟ್ಟಾಯಂ ಪಶ್ಚಿಮ ಪೊಲೀಸರು ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿ ಹಾಕಿದ್ದರು. ಅದರ ನಂತರ ಪ್ರಕರಣವನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿತು. ಅವರು ಕೂಡಾ ಆತ್ಮಹತ್ಯೆ ಎಂದೇ ಆರೋಪಿಸಿದ್ದರು. ಆದರೆ ಕೇರಳ ಹೈಕೋರ್ಟ್‌ಗೆ ಸಲ್ಲಿಕೆಯದ ರಿಟ್ ಅರ್ಜಿಯ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ: ಆಸಿಡ್‌ ದಾಳಿ ಆರೋಪಿಗಳಿಗೆ 10 ಲಕ್ಷ ರೂ ದಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...