Homeಮುಖಪುಟಮಹಾರಾಷ್ಟ್ರ: ಆಸಿಡ್‌ ದಾಳಿ ಆರೋಪಿಗಳಿಗೆ 10 ಲಕ್ಷ ರೂ ದಂಡ

ಮಹಾರಾಷ್ಟ್ರ: ಆಸಿಡ್‌ ದಾಳಿ ಆರೋಪಿಗಳಿಗೆ 10 ಲಕ್ಷ ರೂ ದಂಡ

ಮಹಿಳೆ, ಮಕ್ಕಳ ಮೇಲಿನ ಅಪರಾಧಕ್ಕೆ ಮರಣದಂಡನೆಯಂತಹ ಕಠಿಣ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.

- Advertisement -
- Advertisement -

ಮಹಾರಾಷ್ಟ್ರದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಭೀಕರ ಅಪರಾಧಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ, ರಾಜ್ಯ ಕ್ಯಾಬಿನೆಟ್ ಬುಧವಾರ ಶಕ್ತಿ ಕಾಯ್ದೆಯ ಕರಡು ಮಸೂದೆಗೆ ಅನುಮೋದನೆ ನೀಡಿದೆ. ಈ ಕಾಯ್ದೆಯ ಪ್ರಕಾರ ಅಪರಾಧಿಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ ಮತ್ತು ಭಾರಿ ದಂಡ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸಬಹುದು.

ಈ ಕರಡು ಮಸೂದೆಯು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಐಪಿಸಿ, ಸಿಆರ್‌ಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಕಾನೂನಿನ ವಿಭಾಗಗಳನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.

ಮುಂಬೈನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರಡು ಮಸೂದೆಯನ್ನು ಅಂಗೀಕರಿಸಲಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶ್‌ಮುಖ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎರಡು ದಿನಗಳ ಚಳಿಗಾಲದ ವಿಧಾನಸಭಾ ಅಧಿವೇಶನ ಮುಂಬೈನಲ್ಲಿ ಡಿಸೆಂಬರ್ 14 ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: 4 ಸ್ಥಾನದಲ್ಲಿ ಮಹಾವಿಕಾಸ್ ಅಘಾಡಿ ಮುನ್ನಡೆ- ಬಿಜೆಪಿಗೆ ಮುಖಭಂಗ

“ಶಕ್ತಿ ಕಾಯ್ದೆ” ಎಂದು ಕರೆಯಲ್ಪಡುವ ಈ ಮಸೂದೆ ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚೆ ನಡೆದು ನಂತರ ಅನುಮೋದನೆ ಸಿಗಲಿದೆ ಎಂದು ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದರು. ಒಂದು ಪ್ರಕರಣವನ್ನು 15 ದಿನಗಳಲ್ಲಿ ತನಿಖೆ ನಡೆಸಿ, 30 ದಿನಗಳಲ್ಲಿ ವಿಚಾರಣೆಯನ್ನು ಸಂಪೂಣವಾಗಿ ಪೂರ್ಣಗೊಳಿಸಲು ಇದು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಉಭಯ ಸದನಗಳಲ್ಲಿ ಅನುಮೋದನೆ ಪಡೆದ ನಂತರ, ಮಸೂದೆಯನ್ನು ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಅಧ್ಯಕ್ಷರ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎಂದು ದೇಶ್‌ಮುಖ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಶಕ್ತಿ ಅಪರಾಧ ಕಾನೂನು (ಮಹಾರಾಷ್ಟ್ರ ತಿದ್ದುಪಡಿ) ಕಾಯ್ದೆ, 2020 ಮತ್ತು ಮಹಾರಾಷ್ಟ್ರ ಶಕ್ತಿ ಅಪರಾಧ ಕಾನೂನಿನ ಅನುಷ್ಠಾನಕ್ಕೆ ವಿಶೇಷ ನ್ಯಾಯಾಲಯ ಮತ್ತು ಕಾರ್ಯತಂತ್ರ ಎಂಬ ಎರಡು ಭಾಗಗಳಲ್ಲಿ ಶಾಸಕಾಂಗದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿದೆ.

ಹೊಸ ಕಾನೂನಿನ ನಿಬಂಧನೆಗಳು ಮಹಿಳೆಯರು ಮತ್ತು ಮಕ್ಕಳ ಮೇಲಿನ ಘೋರ ಲೈಂಗಿಕ ಅಪರಾಧಗಳನ್ನು ನಿಯಂತ್ರಿಸುವ ಗುರಿಯನ್ನು ಈ ಕಠಿಣ ಕಾನೂನು ಹೊಂದಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಸಾರಿಗೆ ಕಂಡಕ್ಟರ್‌ಗಳ‌ ಸಮವಸ್ತ್ರದಲ್ಲಿ ಶೀಘ್ರ ಕ್ಯಾಮೆರಾ ಅಳವಡಿಕೆ ಏಕೆ?

ಅಪರಾಧಿಗಳಿಗೆ ಮರಣದಂಡನೆ ಮತ್ತು ಭಾರಿ ದಂಡ ಸೇರಿದಂತೆ ನಿಗದಿತ ಸಮಯದೊಳಗೆ, ಕಠಿಣ ಶಿಕ್ಷೆಯೊಳಗೆ ತನಿಖೆ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸಲು ಇದು ಸಹಾಯಕವಾಗುತ್ತದೆ. ಕರಡು ಮಸೂದೆಯ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ಮೇಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ವಿಶೇಷ ಪೊಲೀಸ್ ತಂಡಗಳು ಮತ್ತು ಪ್ರತ್ಯೇಕ ನ್ಯಾಯಾಲಯಗಳನ್ನು ರಚಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಅಪರಾಧಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಹತ್ತು ವರ್ಷಗಳಿಗಿಂತ ಹೆಚ್ಚಿನ ಅವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಶಿಕ್ಷೆಯನ್ನು ಜೀವಿತಾವಧಿವರೆಗೆ  ವಿಸ್ತರಿಸಬಹುದು. ಕೆಲವು ಘೋರ, ವಿಕೃತ ಅಪರಾಧಗಳ ಪ್ರಕರಣಗಳಲ್ಲಿ ಮರಣದಂಡನೆಗೂ ವಿಸ್ತರಿಸಬಹುದು ಎಂದು ಕರಡಿನಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಸಿಡ್ ದಾಳಿಗೆ ಒಳಗಾದವರಿಗೆ ಪ್ಲಾಸ್ಟಿಕ್ ಸರ್ಜರಿ ಮತ್ತು ಮುಖದ ಸರ್ಜರಿಗಾಗಿ 10 ಲಕ್ಷ ಮೊತ್ತವನ್ನು, ಅಪರಾಧಿಗಳಿಂದ ದಂಡವಾಗಿ ಸ್ವೀಕರಿಸಿ ನೀಡಲಾಗುವುದು. ಜೊತೆಗೆ ಪ್ರಕರಣ ಕುರಿತು ಎಫ್‌ಐಆರ್‌ ದಾಖಲಾದ ದಿನಾಂಕದಿಂದ 15 ಕೆಲಸದ ದಿನಗಳ ಅವಧಿಯಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಶಕ್ತಿ ಕಾಯ್ದೆಯನ್ನು ಆಂಧ್ರಪ್ರದೇಶದ ದಿಶಾ ಕಾಯ್ದೆಯ ಮಾದರಿಯಲ್ಲಿ ರೂಪಿಸಲಾಗಿದ್ದು, ಹೈದರಾಬಾದ್‌ನಲ್ಲಿ ಪಶುವೈದ್ಯರ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯಲು ಕಳೆದ ವರ್ಷ ದಿಶಾ ಕಾಯ್ದೆ ತರಲಾಯಿತು.


ಇದನ್ನೂ ಓದಿ: ಪ.ಬಂಗಾಳ: ಬಿಜೆಪಿ ನಾಯಕರ ಮೇಲೆ ಜಾಮೀನು ರಹಿತ ಪ್ರಕರಣದಲ್ಲಿ ಎಫ್‌ಐಆರ್ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...