Homeಮುಖಪುಟಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

ಸೋಲಿನ ಭಯದ ಸಮಯದಲ್ಲಿ ಪ್ರಧಾನಿಯವರ ಕೆಲ ಹೇಳಿಕೆಗಳು ಸುಳ್ಳು ಹಾಗು ಅರ್ಧ ಸತ್ಯಗಳಾಗಿವೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿತ್ತು. ಮೋದಿಯವರ ಇಂದಿನ ಭಾಷಣವೂ ಸಹ ಅದೇ ಆಗಿದೆ.

- Advertisement -
- Advertisement -

“ನೀವು ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಎನ್ನುವುದು ಅವರಿಗೆ (ವಿರೋಧ ಪಕ್ಷಗಳಿಗೆ) ಬೇಕಾಗಿಲ್ಲ. ಛತ್ತಿ ದೇವಿಯನ್ನು ಪೂಜಿಸುವ ಈ ಶುಭ ಭೂಮಿಯಲ್ಲಿ, ಜನರು ರಾಷ್ಟ್ರಕ್ಕಾಗಿ ಜಪಿಸದಿರಲು ಸಾಧ್ಯವೇ? ಅವರಲ್ಲಿ ಒಂದು ಗುಂಪು ಭಾರತ್ ಮಾತಾಕೀ ಜೈ ಎಂಬ ಘೋಷಣೆಯನ್ನು ವಿರೋಧಿಸುತ್ತದೆ. ಇನ್ನೊಂದು ಗುಂಪು ಅದನ್ನು ತಲೆನೋವು ಎಂದು ಭಾವಿಸುತ್ತದೆ. ಅವರೆಲ್ಲರೂ ಈಗ ಮತಕ್ಕಾಗಿ ಒಂದಾಗಿದ್ದಾರೆ. ಆದರೆ ನೀವು ಜೈಶ್ರೀರಾಮ್ ಎನ್ನುವುದು ಅವರಿಗೆ ಬೇಕಿಲ್ಲ” ಇವು ಬಿಹಾರದ ವಿರೋಧ ಪಕ್ಷಗಳನ್ನು ಟೀಕಿಸಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನುಡಿಮುತ್ತುಗಳು.

ಬಿಹಾರದಲ್ಲಿ 94 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಏಕೆ ಈ ರೀತಿ ಮಾತನಾಡಿದ್ದಾರೆ? ಒಬ್ಬ ಪ್ರಧಾನಿಯವರ ಬಾಯಲ್ಲಿ ಬರುವ ಮಾತುಗಳೆ ಇವು? ಎಂಬ ಪ್ರಶ್ನೆಗಳು ಎದ್ದಿವೆ. ಚುನಾವಣೆಯ ಸಂದರ್ಭದಲ್ಲಿ ಎದುರಾಳಿ ಪಕ್ಷಗಳನ್ನು, ಮುಖಂಡರನ್ನು ಟೀಕಿಸುವುದು ಸಹಜ. ಆದರೆ ಧರ್ಮ, ದೇವರು, ರಾಷ್ಟ್ರಭಕ್ತಿ ಇತ್ಯಾದಿ ಪದಪುಂಜಗಳನ್ನು ಬಳಸಿ ಮತಕೇಳುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ಅದರಲ್ಲಿಯೂ ಪ್ರಧಾನಿ ಮಂತ್ರಿಯಂತಹ ಜವಾಬ್ದಾರಿ ಹುದ್ದೆಯಲ್ಲಿರುವವರ ಆಡುವ ಮಾತುಗಳೇ? ಎಂಬ ಟೀಕೆಗಳು ವ್ಯಕ್ತವಾಗಿವೆ.

ಈ ನಡುವೆಯೇ ಪ್ರಧಾನಿ ಮೋದಿಯವರ ಮೇಲಿನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ಬಿಹಾರದಲ್ಲಿ ಇಷ್ಟು ದಿನದ ಪ್ರಚಾರದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವುದು ಆರ್‌ಜೆಡಿ ಪಕ್ಷದ ಯುವನಾಯಕ ತೇಜಸ್ವಿ ಯಾದವ್. ಚುನಾವಣೋತ್ತರ ಸಮೀಕ್ಷೆಗಳನ್ನೆಲ್ಲ ತಲೆಕೆಳಗಾಗಿಸುವಂತೆ ಅವರ ರ್ಯಾಲಿಗಳಿಗೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ದಿನಕ್ಕೆ 3-4 ರ್ಯಾಲಿಗಳಿಗೆ ಸೀಮಿತವಾದರೆ ತೇಜಸ್ವಿ ಯಾದವ್ ದಿನಕ್ಕೆ 18-19 ರ್ಯಾಲಿಗಳಲ್ಲಿ ಭಾಗವಹಿಸಿ ದೇಶದ ಗಮನ ಸೆಳೆದಿದ್ದಾರೆ. ಅವರ ರ್ಯಾಲಿಗಳಿಗೆ ಸೇರುತ್ತಿರುವ ಜನಸಂಖ್ಯೆ ನೋಡಿಯೇ ಬಿಜೆಪಿ ಮತ್ತು ಜೆಡಿಯು ಪಕ್ಷಕ್ಕೆ ನಡುಕ ಉಂಟಾಗಿದೆ. ಅಲ್ಲದೇ ಉದ್ಯೋಗ ಸೃಷ್ಟಿ, ಯುವಜನರ ಸಮಸ್ಯೆಗಳು, ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿ ಹಾಗೂ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವಿಫಲತೆ ಕುರಿತ ತೇಜಸ್ವಿ ಯಾದವ್ ಪ್ರಶ್ನೆಗಳಿಗೆ ಆಡಳಿತರೂಢ ಬಿಜೆಪಿ ಮತ್ತು ಜೆಡಿಯು ಬಳಿ ಉತ್ತರವಿಲ್ಲದಂತಾಗಿದೆ. ಹಾಗಾಗಿಯೇ ಸೋಲಿನ ಭೀತಿಯಲ್ಲಿ ಈ ಹಿಂದಿನಂತೆ ಮೋದಿಯವರು ಭಾವನಾತ್ಮಕ ಭಾಷಣದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನಿಯವರಿಗೆ ಸೋಲುವ ಭಯ ಉಂಟಾದಾಗ ಇಂತಹ ದೇವರು, ಧರ್ಮ, ರಾಷ್ಟ್ರ ಇತ್ಯಾದಿ ಕಾರಣಗಳನ್ನಿಟ್ಟುಕೊಂಡು ಮತಯಾಚನೆ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆ 2017ರ ಗುಜರಾತ್ ಚುನಾವಣೆಯಲ್ಲಿಯೂ ಅವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸುವುದನ್ನು ಬಿಟ್ಟು “ಕಾಂಗ್ರೆಸ್ ಪಕ್ಷವು ಪಾಕಿಸ್ತಾನದೊಂದಿಗೆ ಸೇರಿ ಭಾರತದ ವಿರುದ್ಧ ಸಂಚು ಹೂಡುತ್ತಿದೆ” ಎಂದು ಆರೋಪಿಸಿದ್ದರು.

ಸೋಲಿನ ಭಯದ ಸಮಯದಲ್ಲಿ ಪ್ರಧಾನಿಯವರ ಕೆಲ ಹೇಳಿಕೆಗಳು ಸುಳ್ಳು ಹಾಗು ಅರ್ಧ ಸತ್ಯಗಳಾಗಿದ್ದು, 2017ರಲ್ಲಿ ಪ್ರಧಾನಿ ಮೋದಿಯವರು ನೀಡಿದ್ದ ಕೆಲ ಹೇಳಿಕೆಗಳ ಬಗ್ಗೆ ಹಾಗೂ ಅದರ ಸತ್ಯಾಸತ್ಯತೆಯ ಬಗ್ಗೆ ಅಲ್ಟ್‌ ನ್ಯೂಸ್ ವರದಿ ಮಾಡಿದೆ. ಕೆಲವು ಇಲ್ಲಿವೆ.

1. ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ರಾಯಭಾರಿಯನ್ನು ಭೇಟಿ: ಪಾಕ್ ಜೊತೆ ಸೇರಿ ಸಂಚು ಆರೋಪ

2017ರ ಗುಜರಾತ್ ಚುನಾವಣೆಯ ಸಮಯದಲ್ಲಿ ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ರಾಯಭಾರಿಯನ್ನು ಭೇಟಿಯಾಗಿದ್ದರು. ಇದರ ಹಿಂದೆ ಸಂಚು ಅಡಗಿದೆ ಎಂದು ಪ್ರಧಾನಿ ಮೋದಿ ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಆದರೆ ಈ ಚರ್ಚೆಯಲ್ಲಿ ಗುಜರಾತ್ ಚುನಾವಣೆಯ ವಿಚಾರವನ್ನು ಚರ್ಚಿಸಿರಲಿಲ್ಲ ನೆಂದು ಸೇನೆಯ ಮಾಜಿ ಮುಖ್ಯಸ್ಥ ದೀಪಕ್ ಕಪೂರ್ ಹೇಳಿಕೆ ನೀಡಿದ್ದರು. ಚುನಾವಣೆ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿ, ಮನಮೋಹನ್ ಸಿಂಗ್ ಅಥವಾ ಅನ್ಸಾರಿಯವರ ಬದ್ಧತೆಯನ್ನು ಎಂದೂ ಪ್ರಶ್ನಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

2. “ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ಆರಂಭಿಸಿದ್ದು ನಾವು”?

ಕರ್ನಾಟಕಕ್ಕೆ ಅಕ್ಟೋಬರ್‌ನಲ್ಲಿ ಭೇಟಿ ನೀಡಿದ್ದ ಮೋದಿ, ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ನಾವು ಆರಂಭಿಸಿದ್ದು, ಮಧ್ಯವರ್ತಿಗಳು ಮತ್ತು ಸೋರಿಕೆಯನ್ನು ತಡೆಯುವ ಮೂಲಕ ಸರಕಾರ 57 ಸಾವಿರ ಕೋಟಿ ರೂ.ಗಳನ್ನು ಉಳಿಸಿದೆ ಎಂದಿದ್ದರು. ಆದರೆ ವಾಸ್ತವವೇನೆಂದರೆ ಈ ಯೋಜನೆಯನ್ನು 2013ರ ಬಜೆಟ್‍ನಲ್ಲಿ ಘೋಷಿಸಲಾಗಿತ್ತು.

ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು

3.ರಂಜಾನ್-ದೀಪಾವಳಿಯ ದಿನ ಪೂರೈಕೆಯಾದ ವಿದ್ಯುತ್ ಲೆಕ್ಕ ಹಾಕಿದ ಪ್ರಧಾನಿ!?

ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಫತೇಪುರ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅಂದು ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷವು ರಂಜಾನ್‌ ನಂದು ದೀಪಾವಳಿಗಿಂತ ಹೆಚ್ಚು ವಿದ್ಯುತ್ ಪೂರೈಕೆ ಮಾಡಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. “ರಂಜಾನ್ ಸಂದರ್ಭ ವಿದ್ಯುತ್ ಪೂರೈಕೆಯಿದ್ದರೆ ದೀಪಾವಳಿಯಂದೂ ವಿದ್ಯುತ್ ಸಂಪರ್ಕವಿರಬೇಕು. ತಾರತಮ್ಯ ಇರಲೇಬಾರದು” ಎಂದು ಮೋದಿ ಹಿಂದೂ-ಮುಸ್ಲಿಂ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದರು. ಪ್ರಧಾನಿಯವರ ಈ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ವಾಸ್ತವವೆಂದರೆ ರಂಜಾನ್ ಸಮಯದ 2016ರ ಜುಲೈ 6ರಂದು 13,500 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಿದ್ದರೆ, ದೀಪಾವಳಿ ಸಂದರ್ಭದಲ್ಲಿ 15,400 ಮೆಗಾವ್ಯಾಟ್ ವಿದ್ಯುತ್ ಪೂರೈಸಲಾಗಿತ್ತು. ಮೋದಿ ಮಾತ್ರಕ್ಕಾಗಿ ಮತಕ್ಕಾಗಿ ಸುಳ್ಳು ಹೇಳಿದ್ದರು.

4. ರೈಲು ಹಳಿ ತಪ್ಪಿದ ಘಟನೆಗೂ ಐಎಸ್‍ಐಗೂ ಸಂಬಂಧವಿದೆ?

ಇಂಧೋರ್- ಪಾಟ್ನಾ ಎಕ್ಸ್‌ ಪ್ರೆಸ್ ರೈಲು 2016ರ ನವೆಂಬರ್‌ನಲ್ಲಿ ಹಳಿ ತಪ್ಪಿ 150 ಮಂದಿ ಮೃತಪಟ್ಟ ಘಟನೆಯನ್ನು 2017ರಲ್ಲಿ ಉಲ್ಲೇಖಿಸಿದ ಮೋದಿ, ಇದರ ಹಿಂದೆ ಪಾಕಿಸ್ತಾನದ ಐಎಸ್ಐನ ಕೈವಾಡವಿದೆ ಎಂದಿದ್ದರು. ಆದರೆ ಉತ್ತರ ಪ್ರದೇಶದ ಡಿಜಿಪಿ ಜಾವೆದ್ ಅಹ್ಮದ್ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ರೈಲು ಹಳಿ ತಪ್ಪಿದ ಘಟನೆಯಲ್ಲಿ ಐಎಸ್ಐ ಕೈವಾಡವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದರು.

5. ದಿನವೊಂದಕ್ಕೆ ಅಪರಾಧದ ಲೆಕ್ಕಹಾಕಿ ನಗೆಪಾಟಲಿಗೀಡಾದ ಪ್ರಧಾನಿ?

2017ರ ಉತ್ತರ ಪ್ರದೇಶ ಚುನಾವಣೆಯ ಸಂದರ್ಭದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ದೇಶದಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿವೆ ಎಂದು ಅಖಿಲೇಶ್ ಯಾದವ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ದಿನಕ್ಕೆ 24 ಅತ್ಯಾಚಾರ, 21 ಅತ್ಯಾಚಾರ ಯತ್ನ, 13 ಹತ್ಯೆ, 33 ಅಪಹರಣ, 19 ದೊಂಬಿ, 136 ಕಳ್ಳತನ ಪ್ರಕರಣಗಳು ನಡೆಯುತ್ತವೆ ಎಂದಿದ್ದರು. ಆದರೆ ಅಪರಾಧ ದರವನ್ನು ಲಕ್ಷ ಜನಸಂಖ್ಯೆಗೆ ಎಷ್ಟು ಅಪರಾಧ ನಡೆದಿದೆ ಎಂಬ ಆಧಾರದಲ್ಲಿ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ ಲೆಕ್ಕ ಹಾಕುತ್ತದೆ ಹೊರತು ಪ್ರಧಾನಿ ಹೇಳಿದಂತೆ ದಿನವೊಂದಕ್ಕಲ್ಲ.

6. ಹವಾಮಾನ ವೈಪರೀತ್ಯದಿಂದ ಸುರಕ್ಷೆ ನೀಡುವ ಬೆಳೆವಿಮೆ ಯೋಜನೆ ಜಾರಿ?

“ಪ್ರಧಾನ ಮಂತ್ರಿಗಳ ಬೆಳೆ ವಿಮೆ ಯೋಜನೆಯನ್ನು ನಾವು ಆರಂಭಿಸಿದ್ದೇವೆ. ಹವಾಮಾನ ವೈಪರಿತ್ಯಗಳು ಸಂಭವಿಸಿ ಬೆಳೆ ನಾಶವಾದರೂ ರೈತರು ಈ ಯೋಜನೆಯ ಮೂಲಕ ವಿಮೆ ಪಡೆಯಬಹುದು. ಯಾರಾದರೂ ಈ ಮೊದಲು ಇಂತಹ ಯೋಜನೆಯನ್ನು ನೋಡಿದ್ದೀರ” ಎಂದು ಪ್ರಧಾನಿ ಹೇಳಿದ್ದರು. ಆದರೆ 2003ರಲ್ಲೇ ಈ ಯೋಜನೆ ಆರಂಭವಾಗಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: CAA, NRC, NPR : ಮೋದಿ- ಅಮಿತ್‌ ಶಾ ಹೇಳಿದ ಹತ್ತು ಮಹಾ ಸುಳ್ಳುಗಳು

7. ತೆಂಗಿನಕಾಯಿ ಜ್ಯೂಸ್ ಮತ್ತು ಆಲೂಗಡ್ಡೆ ಫ್ಯಾಕ್ಟರಿ?

2017ರ ಮಾರ್ಚ್ 1ರಂದು ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ, ತೆಂಗಿನಕಾಯಿ ಜ್ಯೂಸನ್ನು ಲಂಡನ್ ನಲ್ಲಿ ಮಾರುವ ಮೂಲಕ ರೈತರಿಗೆ ಸಹಾಯ ಮಾಡಲಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆಲೂಗಡ್ಡೆ ತಯಾರಿಸುವ ಫ್ಯಾಕ್ಟರಿಯನ್ನು ನಿರ್ಮಿಸುವುದಾಗಿಯೂ ಅವರು ಹೇಳಿದ್ದಾರೆ ಎಂದಿದ್ದರು. ಆದರೆ ವಾಸ್ತವ ಏನೆಂದರೆ ರಾಹುಲ್ ಗಾಂಧಿ ತೆಂಗಿನಕಾಯಿ ಅಥವಾ ತೆಂಗಿನ ಕಾಯಿ ಜ್ಯೂಸ್ ಬಗ್ಗೆ ಏನೂ ಹೇಳಿರಲಿಲ್ಲ. ಅವರು ಅನಾನಸು ಜ್ಯೂಸ್ ಬಗ್ಗೆ ಮಾತನಾಡಿದ್ದರು. ಆಲೂಗಡ್ಡೆ ಫ್ಯಾಕ್ಟರಿಯ ಬಗ್ಗೆಯೂ ಪ್ರಧಾನಿ ಹೇಳಿದ್ದು ಸುಳ್ಳೇ ಆಗಿದೆ. ಆಲೂಗಡ್ಡೆ ಚಿಪ್ಸ್ ತಯಾರಿಸಲು ಫ್ಯಾಕ್ಟರಿ ನಿರ್ಮಿಸುವ ಬಗ್ಗೆ ರಾಹುಲ್ ಮಾತನಾಡಿದ್ದರೇ ಹೊರತು ಆಲೂಗಡ್ಡೆ ತಯಾರಿಸುವ ಬಗ್ಗೆಯಲ್ಲ.

ಹೀಗೆ, ಒಂದು ಪ್ರಾಮಾಣಿಕ ರಾಜಕೀಯ ಪಕ್ಷ ಅಥವಾ ಒಬ್ಬ ಪ್ರಾಮಾಣಿಕ ರಾಜಕೀಯ ಪಟುವಿನ ಯಾವುದೇ ಲಕ್ಷಣಗಳನ್ನು ಹೊಂದಿರದ ಮೋದಿ, ಬರೀ ಇಂತಹ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ. ಇನ್ನು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಆಶ್ವಾಸನೆಗಳ ಬಗ್ಗೆಯಂತೂ ಅವರು ತುಟಿ ಬಿಚ್ಚುವುದಿಲ್ಲ. ಜನರಿಗೆ ನೇರಾನೇರ ಮುಖಾಮುಖಿಯಾದರೆ ಜನರು ಇವುಗಳನ್ನೆಲ್ಲಾ ಪ್ರಶ್ನಿಸುತ್ತಾರೆ ಎಂಬ ಭಯಕ್ಕೆ ಪ್ರಧಾನಿಯವರು ಇದುವರೆಗೆ ಪ್ರಾಮಾಣಿಕವಾದ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನೂ ನಡೆಸಿಲ್ಲ. ನಡೆಸುವುದೂ ಇಲ್ಲ ಎಂದು ಸಾಮಾಜಿಕ ಜಾಲತಾಣಿಗರು ದೂರಿದ್ದಾರೆ.


ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬುಡುಬುಡಿಕೆ ದಾಸಯ್ಯನ ಬಡಬಡಿಕೆಗಾದರೂ ಅರ್ಥವಿರುತ್ತದೆ. ಆದರೆ ಈವಯ್ಯನ ಮಾತುಗಳಿಗೆ ಅರ್ಥವೇ ಇರುವುದಿಲ್ಲ.
    ವಿಶ್ವನಾಥ ಎನ್ ಅಮಾಸ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...