ಅರುಣಾಚಲ ಪ್ರದೇಶದ ಜನತಾದಳ ಯುನೈಟೆಡ್‌ನ (ಜೆಡಿಯು) ಏಳು ಶಾಸಕರ ಪೈಕಿ ಆರು ಶಾಸಕರು BJPಗೆ ಪಕ್ಷಾಂತರವಾಗಿದ್ದಾರೆ. 60 ಸದಸ್ಯರ ಬಲವಿರುವ ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ JDU ಗೆ ಈಗ ಕೇವಲ ಒಂದು ಸ್ಥಾನ ಮಾತ್ರ ಉಳಿದಿದೆ.
JDU ತ್ಯಜಿಸಿರುವ ಆರು ಶಾಸಕರ ಪೈಕಿ ಮೂವರನ್ನು ಕಳೆದ ತಿಂಗಳು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆಂದು ಅಮಾನತುಗೊಳಿಸಿ, ನೋಟಿಸ್‌ನ್ನು ನೀಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಅರುಣಾಚಲ ಪ್ರದೇಶದ BJP ಅಧ್ಯಕ್ಷ ಬಿ ಆರ್ ವಾಘೆ, “ಪಕ್ಷಕ್ಕೆ ಸೇರುವುದಾಗಿ ಅವರು ನಮಗೆ ಪತ್ರ ಬರೆದಿದ್ದಾರೆ. ಅದನ್ನು ನಾವು ಸ್ವೀಕರಿಸಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಜಾಹೀರಾತು: ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವಿನ ಮುನಿಸಿಗೆ ತೇಪೆ?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ JDU 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 15 ಸ್ಥಾನಗಳಲ್ಲಿ ಏಳನ್ನು ಗೆದ್ದುಕೊಂಡಿತ್ತು. 41 ಸ್ಥಾನಗಳನ್ನು ಪಡೆದ BJPಯ ನಂತರ ಎರಡನೇ ಅತಿದೊಡ್ಡ ಪಕ್ಷವಾಗಿ JDU ಹೊರಹೊಮ್ಮಿತ್ತು.
2020 ರ ಬಿಹಾರ ಚುನಾವಣೆಯಲ್ಲಿ JDU ಮತ್ತು BJP ಮೈತ್ರಿ ಮಾಡಿಕೊಂಡು, ಸ್ಪಷ್ಟ ಬಹುಮತ ಪಡೆಯುವ ಮೂಲಕ ರಾಜ್ಯದ ಅಧಿಕಾರ ಹಿಡಿದಿದ್ದರು. ಈಗ ಅರುಣಾಚಲ ಪ್ರದೇಶದಲ್ಲಿನ ಈ ಘಟನೆ ಮೈತ್ರಿ ಪಕ್ಷಗಳ ನಡುವೆ ತೆರೆಮರೆಯ ಮುನಿಸನ್ನು ತಂದೊಡ್ಡಿವೆ.
ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ: ಜೆಡಿಯುನಲ್ಲಿ ಭಿನ್ನಾಭಿಪ್ರಾಯ – ರಾಜಕೀಯ ಚತುರ ಪ್ರಶಾಂತ್ ಕಿಶೋರ್ ವಿರೋಧ


