Homeಮುಖಪುಟದೇಶದ ಅತಿ ಕಿರಿಯ ಮೇಯರ್ ಆಗಿ ಕೇರಳ ಸಿಪಿಎಂನ ಆರ್ಯ ರಾಜೇಂದ್ರನ್ ಪ್ರಮಾಣ ವಚನ

ದೇಶದ ಅತಿ ಕಿರಿಯ ಮೇಯರ್ ಆಗಿ ಕೇರಳ ಸಿಪಿಎಂನ ಆರ್ಯ ರಾಜೇಂದ್ರನ್ ಪ್ರಮಾಣ ವಚನ

ಕೇರಳದಲ್ಲಿ ಇತ್ತೀಚೆಗಷ್ಟೇ ಸ್ಥಳೀಯ ಚುನಾವಣೆ ನಡೆದಿದ್ದು, ಎಡಪಕ್ಷಗಳ ಒಕ್ಕೂಟ(LDF) ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದೆ.

- Advertisement -
- Advertisement -

ಪ್ರಧಾನಿಯಿಂದ ಹಿಡಿದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕು 60-70 ವರ್ಷದ ದಾಟಿದ ಹಿರಿಯರೇ ಆಗಿದ್ದಾರೆ. ಯುವಜನರು ಅಧಿಕಾರದ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಕೊರಗು ನಿವಾರಿಸುವ ಸುದ್ದಿಯೊಂದು ಹೊರಬಿದ್ದಿದೆ. ತಿರುವನಂದಪುರಂ ಕಾರ್ಪೋರೇಷನ್‌‌ ಮೇಯರ್‌ ಆಗಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌‌ವಾದಿ) ಪಕ್ಷದ ’ಆರ್ಯ ರಾಜೇಂದ್ರನ್’ ಆಯ್ಕೆಯಾಗಿದ್ದು, ಈ ಮೂಲಕ ಭಾರತದ ಅತೀ ಕಿರಿಯ ಮೇಯರ್ ಆಗಿ‌  ಹೊರಹೊಮ್ಮಿದ್ದಾರೆ. ಕೇರಳದಲ್ಲಿ ಇತ್ತೀಚೆಗಷ್ಟೇ ಸ್ಥಳೀಯ ಚುನಾವಣೆ ನಡೆದಿದ್ದು ಎಡಪಕ್ಷಗಳ ಒಕ್ಕೂಟ(LDF) ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದೆ.

ಇತ್ತೀಚೆಗಿನ ಚುನಾವಣೆಯಲ್ಲಿ 21 ವರ್ಷದ ಆರ್ಯ ರಾಜೇಂದ್ರನ್ ತಿರುವನಂದಪುರಂ ಕಾರ್ಪೋರೇಷನ್‌ನ ಮುದವನ್ಮುಗಲ್ ವಾರ್ಡ್ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಅವರು ಎಸ್‌ಎಫ್‌ಐ ಕೇರಳ ರಾಜ್ಯ ಸಮಿತಿ ಸದಸ್ಯೆಯಾಗಿದ್ದು ಮತ್ತು ’ಬಾಲಸಂಗಂ ಕೇರಳ ರಾಜ್ಯ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಕೇರಳ: ಪುರಸಭೆ ಕಚೇರಿಯಲ್ಲಿ ’ಜೈಶ್ರೀರಾಮ್’ ಬ್ಯಾನರ್‌ ವಿರುದ್ದ ರಾಷ್ಟ್ರಧ್ವಜ ಹಾರಿಸಿದ ಡಿವೈಎಫ್‌ಐ!

ಒಟ್ಟು 100 ಸ್ಥಾನಗಳ ತಿರುವನಂದಪುರಂ ಕಾರ್ಪೋರೇಷನ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌‌ವಾದಿ) ನೇತೃತ್ವದ LDF ಒಕ್ಕೂಟ ಒಟ್ಟು 52 ಸ್ಥಾನಗಳ ಸ್ಪಷ್ಟ ಬಹುಮತವನ್ನು ಹೊಂದಿದೆ. ಆರ್ಯ ರಾಜೇಂದ್ರನ್ ಪ್ರಸ್ತುತ ಆಲ್ ಸೇಂಟ್ಸ್ ಕಾಲೇಜಿನ ಬಿಎಸ್ಸಿ ಗಣಿತ ವಿದ್ಯಾರ್ಥಿನಿ ಆಗಿದ್ದಾರೆ. ಅವರ ತಂದೆ ರಾಜೇಂದ್ರನ್ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಎಲ್ಐಸಿ ಏಜೆಂಟ್ ಆಗಿದ್ದಾರೆ.

ಇತ್ತೀಚೆಗಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ಒಟ್ಟು 941 ಗಳಲ್ಲಿ 514 ಗ್ರಾಮ ಪಂಚಾಯಿತಿಗಳನ್ನು ಗೆದ್ದಿತ್ತು. ಒಟ್ಟು 152 ತಾಲೂಕು ಪಂಚಾಯತ್‌‌ನಲ್ಲಿ 107, 14 ಜಿಲ್ಲಾ ಪಂಚಾಯತ್‌ನಲ್ಲಿ 10, ಹಾಗೂ 6 ಕಾರ್ಪೋರೇಷನ್‌ಗಳಲ್ಲಿ 3 ಎಲ್‌ಡಿಎಫ್‌ ಪಾಲಾಗಿದ್ದವು.

ಇದನ್ನೂ ಓದಿ: ಕೇರಳದಲ್ಲಿ ಮತ್ತೊಮ್ಮೆ LDF ?- ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳ ಸೂಚನೆಯೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...