ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹುಟ್ಟೂರಿಗೆ ಮತದಾನ ಮಾಡಲು ಹೋಗಿದ್ದಾಗ ನಾಟಿಕೋಳಿ ಸಾರು-ಮುದ್ದೆ ಸವಿಯುವಾಗ ಹನುಮ ಜಯಂತಿಯ ಬಗ್ಗೆ ಮಾತನಾಡಿದ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡ ಟ್ವಿಟ್ಟಿಗರು ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತದಾನ ಮಾಡಿದ ನಂತರ ಸಿದ್ದರಾಮಯ್ಯ ತಮ್ಮ ಸ್ನೇಹಿತನ ಮನೆಯಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟ ಮಾಡಿದರು. ಈ ಸಂದರ್ಭದಲ್ಲಿ “ಅಣ್ಣಾ ಇಂದು ಹನುಮ ಜಯಂತಿ. ನಾನು ನಾನ್‌ವೆಜ್ ತಿನ್ನಲ್ಲ” ಎಂದು ಊಟದ ವೇಳೆ ಸ್ನೇಹಿತರೊಬ್ಬರು ಸಿದ್ದರಾಮಯ್ಯ ಅವರಲ್ಲಿ ಹೇಳಿದರು. ಅದಕ್ಕೆ ಉತ್ತರಿಸಿ, “ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಗೊತ್ತಿದ್ದರೆ ಆ ದಿನ ತಿನ್ನಬೇಡ. ಗೊತ್ತಿಲ್ಲ ಅಂದರೆ ಚಿಕನ್ ತಿನ್ನು, ಏನೂ ಆಗಲ್ಲ” ಎಂದು ಗದರಿಸಿದ್ದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ: ಉತ್ತರಪ್ರದೇಶ ತೊರೆಯುತ್ತಿರುವ ಅಂತರ್‌ಧರ್ಮೀಯ ಸಂಗಾತಿಗಳು!
ಈ ಹೇಳಿಕೆಯನ್ನು ಉಲ್ಲೇಖಿಸಿ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, “ಅಣ್ಣಾ, ಇವತ್ತು ಹನುಮ ಜಯಂತಿ, ಎಂದು ನೆನಪಿಸಿದ ಗ್ರಾಮಸ್ಥನಿಗೆ, ‘ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನು’ ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು” ಎಂದು ವ್ಯಂಗ್ಯವಾಡಿದ್ದರು.
"ಅಣ್ಣಾ, ಇವತ್ತು ಹನುಮ ಜಯಂತಿ"
ಎಂದು ನೆನಪಿಸಿದ ಗ್ರಾಮಸ್ಥನಿಗೆ,
"ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನು"
ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು.
— S.Suresh Kumar, Minister – Govt of Karnataka (@nimmasuresh) December 28, 2020
ಇದನ್ನೂ ಓದಿ: ರೈತ ಉತ್ಪನ್ನಗಳ ಬೆಂಬಲ ಬೆಲೆಗೆ ಲಿಖಿತ ವಾಗ್ದಾನ ಬೇಕು
ಮತ್ತೊಂದು ಟ್ವೀಟ್‌ನಲ್ಲಿ, “ಈ ನೆಲದ ನಂಬಿಕೆಗಳಿಗೆ ಈ ರೀತಿ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ “ಶ್ರೀ ರಾಮನ birth certificate ಎಲ್ಲಿ” ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ” ಎಂದು ಬರೆದುಕೊಂಡಿದ್ದರು.
ಈ ನೆಲದ ನಂಬಿಕೆಗಳಿಗೆ ಈ ರೀತಿ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು.
ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ "ಶ್ರೀ ರಾಮನ birth certificate ಎಲ್ಲಿ" ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ.
— S.Suresh Kumar, Minister – Govt of Karnataka (@nimmasuresh) December 28, 2020
ಸುರೇಶ್ ಕುಮಾರ್ ಅವರ ಈ ಹೇಳಿಕೆಗೆ ಅವರನ್ನೇ ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು ರೀಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷ ಆಚರಣೆ ಮಾಡುವಂತಿಲ್ಲ – ಇಂದು ಮಾರ್ಗಸೂಚಿ ಬಿಡುಗಡೆ
ಸುಭಾಶ್ ಎಂಬುವವರು ಟ್ವೀಟ್ ಮಾಡಿ, “ಹಾಗಾದ್ರೆ ಹನುಮ ಜಯತಿಯಂದು ಮಾಂಸ ತಿನುವಾಗಿಲ್ಲ ಎಂದರೆ ಮಾಂಸದ ಅಂಗಡಿಗಳನ್ನು ಮುಚ್ಚುಬಹುದಿತ್ತು ಅಲ್ಲ ಸರ್… ಅವರಹಾಗೆ ಎಷ್ಟೋ ಜನ ಮನೆಯಲ್ಲಿ ಮಾಂಸದ ಊಟ ಮಾಡಿರುತ್ತಾರೆ…. ಇದು ಪ್ರಜಾಪ್ರಭುತ್ವದ ವ್ಯವಸ್ಥೆ ಪ್ರಕಾರ ಯಾರಿಗೆ ಯಾವ ಊಟ ಇಷ್ಟಾನೋ ಅದನ್ನು ತಿನ್ನಬಹುದು…” ಎಂದು ತಿರುಗೇಟು ನೀಡಿದ್ದಾರೆ.
ಹಾಗಾದ್ರೆ ಹನುಮ ಜಯತಿಯಂದು ಮಾಂಸ ತಿನುವಾಗಿಲ್ಲ ಎಂದರೆ ಮಾಂಸದ ಅಂಗಡಿಗಳನ್ನು ಮುಚ್ಚುಬಹುದಿತ್ತು ಅಲ್ಲ ಸರ್…
ಅವರಹಾಗೆ ಎಷ್ಟೋ ಜನ ಮನೆಯಲ್ಲಿ ಮಾಂಸದ ಊಟ ಮಾಡಿರುತ್ತಾರೆ….
ಇದು ಪ್ರಜಾಪ್ರಭುತದ ವ್ಯವಸ್ಥೆಪ್ರಕಾರ ಯಾರಿಗೆ ಯಾವ ಊಟ ಇಷ್ಟಾನೋ ಅದನ್ನು ತಿನಬಹುದು…
— ??????? ?????? (@MethreSubhash) December 28, 2020
ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತರ ಆಕ್ರೋಶ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ಪ್ರವೀಣ್ ಹುಲಿಕುಂಟೆ ಎಂಬುವವರು ಟ್ವೀಟ್ ಮಾಡಿ, “ಸುರೇಶ್ ಕುಮಾರ್ ಸರ್… ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ. ನಾನೂ ಒಬ್ಬ ಅಪ್ಪಟ ಹಿಂದೂ. ಆಸ್ತಿಕ ಪರಂಪರೆಯ ಹುಡುಗ, ಹಳ್ಳಿಯಿಂದ ಬಂದವನು. ಈಗ್ಗೆ ಎರಡು-ಮೂರು ದಶಕಗಳ ಹಿಂದೆ ನಮಗೆ ಹನುಮ ಜಯಂತಿ ಯಾವಾಗ ಎಂಬುದು ತಿಳಿದಿರುತ್ತಿರಲಿಲ್ಲ. ಅವರವರ ಆಹಾರ ಪದ್ದತಿಯಂತೆ ಸಸ್ಯಾಹಾರ ಅಥವಾ ಮಾಂಸಾಹಾರ ತಿನ್ನುತ್ತಿದ್ದರು. ಕೆಲವು ಕಡೆ ದೇವರಿಗೂ ಮಾಂಸಾಹಾರ ಮಾಡುತ್ತಾರೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್… ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ. ನಾನೂ ಒಬ್ಬ ಅಪ್ಪಟ ಹಿಂದೂ. ಆಸ್ತಿಕ ಪರಂಪರೆಯ ಹುಡುಗ, ಹಳ್ಳಿಯಿಂದ ಬಂದವನು. ಈಗ್ಗೆ ಎರಡು-ಮೂರು ದಶಕಗಳ ಹಿಂದೆ ನಮಗೆ ಹನುಮ ಜಯಂತಿ ಯಾವಾಗ ಎಂಬುದು ತಿಳಿದಿರುತ್ತಿರಲಿಲ್ಲ. ಅವರವರ ಆಹಾರ ಪದ್ದತಿಯಂತೆ ಸಸ್ಯಾಹಾರ ಅಥವಾ ಮಾಂಸಾಹಾರ ತಿನ್ನುತ್ತಿದ್ದರು. ಕೆಲವು ಕಡೆ ದೇವರಿಗೂ ಮಾಂಸಾಹಾರ ಮಾಡುತ್ತಾರೆ.
— ಪ್ರವೀಣ್ ಹುಲಿಕುಂಟೆ /Praveen Hulikunte (@praveen_sps7) December 28, 2020
ಇದನ್ನೂ ಓದಿ: ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಡೆದವರ ಹೆಸರು ಹೇಳಲಿ: ದೇವೇಗೌಡರಿಗೆ ಸಿದ್ದು ತಿರುಗೇಟು
ದಿಲೀಪ್ ಗೌಡ ಎಂಬುವವರು ಟ್ವೀಟ್ ಮಾಡಿ, “ಸಂಕುಚಿತ ಮನೋಭಾವನೆ ಇದು…… ಹೋಗ್ರಿ ನಮ್ ಕಡೆ ದೊಡ್ಡ ಹುಂಜನ ಬೆಟ್ಟದ ಆಂಜನೇಯನಿಗೆ ಬಲಿ ಕೊಟ್ಟು ನಾವು ತಿನ್ನೋದು…… ಏನ್ ಆಂಜನೇಯ ನಿಮ್ಮ rss ಅಥವ BJP ಮಾತ್ರ ಸ್ವತ್ತೆ…… ರಾಜ್ಯ ನಡೆಸ್ರಿ ಜನರ ಕಷ್ಟಗಳಿಗೆ ಸ್ಪಂದಿಸಿ. ಯಾರು ಏನು ತಿಂದರೆ ನಿಮಗೇನು. ಕೀಳುಮಟ್ಟದ ನಾಯಕರೂ, ಕೀಳುಮಟ್ಟದ ರಾಜಕಾರಣ” ಎಂದು ತರಾಟೆಗೆ ತಗೆದುಕೊಂಡಿದ್ದಾರೆ.
ಸಂಕುಚಿತ ಮನೋಭಾವನೆ ಇದು ಕನ್ನಡಿ…… ಹೋಗ್ರಿ ನಮ್ ಕಡೆ ದೊಡ್ಡ ಹುಂಜನ ಬೆಟ್ಟದ ಆಂಜನೇಯನಿಗೆ ಬಲಿ ಕೊಟ್ಟು ನಾವು ತಿನ್ನೋದು…… ಎನ್ ಆಂಜನೇಯ ನಿಮ್ಮ rss ಅಥವ BJP ಮಾತ್ರ ಸ್ವತ್ತೆ…… ರಾಜ್ಯ ನಡೆಸ್ರಿ ಜನರ ಕಷ್ಟಗಳಿಗೆ ಸ್ಪಂದಿಸಿ. ಯಾರು ಏನು ತಿಂದರೆ ನಿಮಗೇನು.
ಕೀಳುಮಟ್ಟದ ನಾಯಕರೂ, ಕೀಳುಮಟ್ಟದ ಅಮನವರು, ಕೀಳುಮಟ್ಟದ ರಾಜಕಾರಣ.— DILEEPGOWDA (@DILEEPBNAVILE) December 28, 2020
ಇದನ್ನೂ ಓದಿ: ರೈತಸಂಘದ ನೂರಾರು ಕಾರ್ಯಕರ್ತರೊಂದಿಗೆ ಸಾಮೂಹಿಕವಾಗಿ Jio ಸಿಮ್‌ನಿಂದ ಪೋರ್ಟ್ ಆಗಲು ಮುಂದಾದ ಎಚ್.ಆರ್ ಬಸವರಾಜಪ್ಪ
ಶ್ರೀಧರ್ ಗೌಡ ಟ್ವೀಟ್ ಮಾಡಿ, “ಸ್ವಾಮಿ ಅವರು ಮಾಂಸ ಆದ್ರು ತಿನ್ನಲಿ ಏನಾದ್ರು ಮಾಡ್ಲಿ ನಿಮಗೆ ಯಾಕೆ ಅದು ಅವರವರ ಸಂಪ್ರದಾಯ ಮೊದಲು ನೀವು ಶಿಕ್ಷಕರ ವಿದ್ಯಾರ್ಥಿಗಳ ಬಗ್ಗೆ ಗಮನ ಕೊಡಿ” ಎಂದು ಎಚ್ಚರಿಸಿದ್ದಾರೆ.
ಸ್ವಾಮಿ ಅವರು ಮಾಂಸ ಆದ್ರು ತಿನ್ನಲಿ ಏನಾದ್ರು ಮಾಡ್ಲಿ ನಿಮಗೆ ಯಾಕೆ ಅದು ಅವರವರ ಸಂಪ್ರದಾಯ ಮೊದಲು ನೀವು ಶಿಕ್ಷಕರ ವಿದ್ಯಾರ್ಥಿಗಳ ಬಗ್ಗೆ ಗಮನ ಕೊಡಿ
— sridhar gowda (@sridhar33166386) December 28, 2020
ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ಈರುಳ್ಳಿ ಬಿತ್ತನೆ: ಹೋರಾಟದಲ್ಲಿಯೂ ಕೃಷಿ ಬಿಡಲೊಪ್ಪದ ರೈತರು!
ಸಂಗಲಡ್ ಶೆಟ್ಟರ್ ಟ್ವೀಟ್ ಮಾಡಿ, “ವೈಕುಂಠ ಏಕಾದಶಿ ದಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳು ಚಿಕನ್ ಪಾರ್ಟಿ ಮಾಡಿಸಿ, ಹೆಂಡ ಸಾರಾಯಿ ಕುಡಿಸಿ, ಬೆಳಿಗ್ಗೆ ಕೇಸರಿ ಶಾಲ್ ಧರಿಸಿ ನಾವು ಹಿಂದೂಗಳು ಎಂದು ಹೇಳಿದ್ದರಂತೆ” ಎಂದು ಛೇಡಿಸಿದ್ದಾರೆ.
ವೈಕುಂಠ ಏಕಾದಶಿ ದಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳು ಚಿಕನ್ ಪಾರ್ಟಿ ಮಾಡಿಸಿ, ಹೆಂಡ ಸಾರಾಯಿ ಕುಡಿಸಿ, ಬೆಳಿಗ್ಗೆ ಕೇಸರಿ ಶಾಲ್ ಧರಿಸಿ ನಾವು ಹಿಂದೂಗಳು ಎಂದು ಹೇಳಿದ್ದರಂತೆ.
— P.V.Sangalad shettar. (@SangaladP) December 28, 2020
ಹೀಗೆ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡಲು ಹೋಗಿ ಸುರೇಶ್ ಕುಮಾರ್ ಅವರೇ ತಗಲುಹಾಕಿಕೊಂಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯನವರು ಮಾಂಸ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಆಗಲೂ ಇದೇ ರೀತಿಯ ವಿವಾದ ಎದ್ದಿತ್ತು. ಇದಕ್ಕೆ ಸಿದ್ದರಾಮಯ್ಯನವರು ಸ್ಪಷ್ಟವಾಗಿಯೇ ಉತ್ತರ ನೀಡಿದ್ದರು.
ಇನ್ನು ಸುರೇಶ್ ಕುಮಾರ್ ಅವರ ಅಭಿಪ್ರಾಯದ ಪರವಾಗಿಯೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ಹೋಗಾರ್ ಎಂಬುವವರು ಟ್ವೀಟ್ ಮಾಡಿ, “ಅದಕ್ಕಾಗಿ ತಾನೆ ಜನ ಅವರನ್ನ ಸೋಲಿಸಿದ್ದು. ಜನರ ನಂಬಿಕೆಗಳನ್ನು ಗೌರವಿಸದ ವ್ಯಕ್ತಿ ಒಳ್ಳೆ ನಾಯಕನಾಗಲಾರ. ಈ ವೈಚಾರಿಕತೆ ಕೇವಲ ಹಿಂದು ಧರ್ಮದ ಆಚರಣೆಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ” ಎಂದು ಹೇಳಿದ್ದಾರೆ.
ಅದಕ್ಕಾಗಿ ತಾನೆ ಜನ ಅವರನ್ನ ಸೋಲಿಸಿದ್ದು. ಜನರ ನಂಬಿಕೆಗಳನ್ನು ಗೌರವಿಸದ ವ್ಯಕ್ತಿ ಒಳ್ಳೆ ನಾಯಕನಾಗಲಾರ. ಈ ವೈಚಾರಿಕತೆ ಕೇವಲ ಹಿಂದು ಧರ್ಮದ ಆಚರಣೆಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ.
— ಪ್ರಶಾಂತ್ ಹೂಗಾರ್ Prashant Hugar (@Prashant7Hugar) December 28, 2020
ಇದನ್ನೂ ಓದಿ: ತಟ್ಟೆ ಚಳವಳಿ: ಮೋದಿಯವರ ‘ಮನ್ ಕಿ ಬಾತ್’ ವೇಳೆ ರಾಜ್ಯಾದ್ಯಂತ ತಟ್ಟೆ ಬಡಿದು ಪ್ರತಿಭಟನೆ


