Homeಮುಖಪುಟಮತಾಂತರ ನಿಷೇಧ ಕಾಯ್ದೆ: ಉತ್ತರಪ್ರದೇಶ ತೊರೆಯುತ್ತಿರುವ ಅಂತರ್‌ಧರ್ಮೀಯ ಸಂಗಾತಿಗಳು!

ಮತಾಂತರ ನಿಷೇಧ ಕಾಯ್ದೆ: ಉತ್ತರಪ್ರದೇಶ ತೊರೆಯುತ್ತಿರುವ ಅಂತರ್‌ಧರ್ಮೀಯ ಸಂಗಾತಿಗಳು!

"ನಮ್ಮ ರಾಜ್ಯದಲ್ಲಿ ಈ ಕಾನೂನು ಜಾರಿಯಾದ ಬಳಿಕ ತೊಂದರೆಗಳು ಹೆಚ್ಚುವುದು ಬೇಡ ಎಂದು ನಾವು ರಾಜ್ಯವನ್ನೇ ಬಿಟ್ಟಿದ್ದೇವೆ. ಅವಶ್ಯಕತೆ ಬಂದರೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲೂ ಸಿದ್ಧನಿದ್ದೇನೆ. ನಮಗೆ ಧರ್ಮ ಒಂದು ಪ್ರಶ್ನೆಯೇ ಅಲ್ಲ"

- Advertisement -
- Advertisement -

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಈ ಕಾಯ್ದೆಯ ಮೇಲಿನ ಭಯದಿಂದ ಹಲವಾರು ಅಂತರ್‌ಧರ್ಮೀಯ ಜೋಡಿಗಳು ಉತ್ತರಪ್ರದೇಶದಿಂದ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.

ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಒಂದು ತಿಂಗಳಿನಲ್ಲಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲವು ಜೋಡಿಗಳನ್ನು ಬಲವಂತವಾಗಿ ಬೇರ್ಪಡಿಸಿ ಬಂಧನಕ್ಕೊಳಪಡಿಸಲಾಗಿದೆ. ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕ ಮತಾಂತರ ನಿಷೇಧ ಕಾಯ್ದೆಯಡಿ ಜೈಲಿಗೆ!

“ನಾನು ಇಕ್ಬಾಲ್‌ನನ್ನು ಪ್ರೀತಿಸುತ್ತಿದ್ದೇನೆ ಎಂದು ನನ್ನ ಮನೆಯಲ್ಲಿ ತಿಳಿದ ಕೂಡಲೇ ನನ್ನನ್ನು ಮನೆಯೊಳಗೆ ಕೂಡಿಹಾಕಿದರು. ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದರು. ನನಗೆ ಆತ ಹಿಪ್ನಾಟಿಸಂ ಮಾಡಿದ್ದಾನೆಯೇ ಎಂದು ತಿಳಿಯಲು ಮನೋವೈದ್ಯರ ಬಳಿಯೂ ಕರೆದೊಯ್ದರು. ಹಲವಾರು ರೀತಿಯಲ್ಲಿ ಕಿರುಕುಳ ನೀಡಿದರು. ಕೊನೆಗೆ ನಾವಿಬ್ಬರೂ ಅಲ್ಲಿಂದ ದೆಹಲಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದೇವೆ. ಮುಂದೇನಾಗಬಹುದು ಎಂದು ನಮಗೆ ತಿಳಿದಿಲ್ಲ” ಎಂದು ಸ್ಮೃತಿ ಎಂಬುವವರು ಹೇಳಿದ್ದಾರೆ.

ಮೊಹಮ್ಮದ್ ಶದಾಬ್ ಮತ್ತು ಅನಮಿಕ ಎಂಬುವವರು ಕಾಲೇಜಿನಲ್ಲಿ ಭೇಟಿಯಾದ ಬಳಿಕ ಪ್ರೀತಿಸಲು ಪ್ರಾರಂಭಿಸಿದ್ದರು. ಈ ವಿಚಾರವನ್ನು ತಿಳಿದ ಕೆಲ ಬಲಪಂಥೀಯ ಸಂಘಟನೆಗಳು ನಮ್ಮನ್ನು ಕೊಲ್ಲಲು ಬಂದಿದ್ದವು ಎಂದು ಯುವಕ ಹೇಳುತ್ತಾನೆ.

ಇದನ್ನೂ ಓದಿ: ಉತ್ತರ ಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿ ಮತ್ತೊಬ್ಬರ ಬಂಧನ

“ಅವರು ನನ್ನ ಹೆತ್ತವರಿಗೆ ತೊಂದರೆ ಕೊಡಬಹುದೆಂಬ ಭಯ ನನಗಿತ್ತು. ನಾನು ಎಲ್ಲವನ್ನೂ ನಿಲ್ಲಿಸುತ್ತೇನೆ ಎಂದು ಆ ಸಂಘಟನೆಗಳಿಗೆ ಮಾತು ನೀಡಿದ್ದೆ. ಆದರೆ ನಾವಿಬ್ಬರು ಸಂಪರ್ಕದಲ್ಲೇ ಇದ್ದೆವು. ನಮ್ಮ ರಾಜ್ಯದಲ್ಲಿ ಈ ಕಾನೂನು ಜಾರಿಯಾದ ಬಳಿಕ ತೊಂದರೆಗಳು ಹೆಚ್ಚುವುದು ಬೇಡ ಎಂದು ನಾವು ರಾಜ್ಯವನ್ನೇ ಬಿಟ್ಟಿದ್ದೇವೆ. ಅವಶ್ಯಕತೆ ಬಂದರೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲೂ ಸಿದ್ಧನಿದ್ದೇನೆ ನಮಗೆ ಧರ್ಮ ಒಂದು ಪ್ರಶ್ನೆಯೇ ಅಲ್ಲ” ಎಂದು ಶದಾಬ್ ಹೇಳಿದ್ದಾರೆ.

ಇತ್ತೀಚೆಗೆ ಹಿಂದೂ ಸಂಘಟನೆಗಳು ಈ ಕಾಯ್ದೆಯನ್ನು ಸ್ವೇಚ್ಚೆಯಾಗಿ ಬಳಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಅನ್ಯಧರ್ಮೀಯರು ಗೆಳೆಯರಾಗಿದ್ದರೂ ಸಹ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ.


ಇದನ್ನೂ ಓದಿ: ಮಾಧ್ಯಮಗಳ ಪ್ರಕಾರ ಹೇಳುವುದಾದರೆ ಅಲ್ಲಿ ಹೋರಾಡುತ್ತಿರುವವರು ರೈತರೇ ಅಲ್ಲ: ಪೇಜಾವರ ಮಠದ ಸ್ವಾಮೀಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...