Homeಮುಖಪುಟಗುಜರಾತ್‌: ಕಳ್ಳರೆಂದು ಶಂಕಿಸಿ ಇಬ್ಬರು ವಲಸೆ ಕಾರ್ಮಿಕರ ಕೊಲೆ

ಗುಜರಾತ್‌: ಕಳ್ಳರೆಂದು ಶಂಕಿಸಿ ಇಬ್ಬರು ವಲಸೆ ಕಾರ್ಮಿಕರ ಕೊಲೆ

- Advertisement -
- Advertisement -

ಗುಜರಾತಿನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕಳ್ಳರೆಂದು ಶಂಕಿಸಿ ಕೊಲೆ ಮಾಡಿರುವ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕುಲ್ಮಾನ್ ಗಗನ್ ಎಂದು ಗುರುತಿಸಲಾದ 35 ವರ್ಷದ ನೇಪಾಳದ ಪ್ರಜೆಯನ್ನು ಭಾನುವಾರದಂದು ಅಹಮದಾಬಾದ್ ಜಿಲ್ಲೆಯ ಚಂಗೋದರ್ ಪ್ರದೇಶದಲ್ಲಿ ಗುಂಪೊಂದು ಹತ್ಯೆ ಮಾಡಿದೆ.

ಈ ಪ್ರದೇಶದಲ್ಲಿ ಬೀದಿನಾಯಿಗಳು ವಲಸೆ ಕಾರ್ಮಿಕನನ್ನು ಬೆನ್ನಟ್ಟಲು ಆರಂಭಿಸಿದ ನಂತರ ಸ್ಥಳೀಯರು ಕಳ್ಳನೆಂದು ಭಾವಿಸಿದ್ದಾರೆ. ಜನರ ಗುಂಪು ಅವರನ್ನು ಹಿಡಿದ ನಂತರ, ತನ್ನ ಬಗ್ಗೆ ಹೇಳಿಕೊಳ್ಳಲು ಗಗನ್ ಯತ್ನಿಸಿದ್ದಾರೆ. ಆದರೆ ಸ್ಥಳೀಯ ಭಾಷೆ ಮಾತನಾಡಲು ಬಾರದ ಕಾರಣ ತನ್ನ ಬಗ್ಗೆ ಮನವರಿಕೆ ಮಾಡಿಕೊಡಲು ಗಗನ್‌ ಅವರಿಗೆ ಸಾಧ್ಯವಾಗಿಲ್ಲ.

ಪೊಲೀಸರು ಗಗನ್ ಶವವನ್ನು ಕಾಲುವೆಯಲ್ಲಿ ಪತ್ತೆ ಹಚ್ಚಿದ್ದು, 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಮತ್ತೊಂದು ಪ್ರಕರಣ: ಗುಜರಾತ್‌ನ ಖೇಡಾ ಜಿಲ್ಲೆಯ ಮಹಮದಾಬಾದ್ ತಾಲೂಕಿನ ಸುಧಾವನ್‌ಸೋಲ್ ಗ್ರಾಮದ ಜನಸಮೂಹವು ಛತ್ತೀಸ್‌ಗಢದ ವಲಸೆ ಕಾರ್ಮಿಕನನ್ನು ಸೋಮವಾರ ಥಳಿಸಿ ಕೊಂದಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಸಂತ್ರಸ್ತರಾದ ರಮೇಶ್ ಕುಮಾರ್ ಖೇರಾವರ್ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸಬರಮತಿಯ ಹೈಸ್ಪೀಡ್ ರೈಲ್ವೇ ಟರ್ಮಿನಲ್‌ನಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿಹಾರ ಮೂಲದ ಮನೀಶ್ ಕುಮಾರ್ ಸಿಂಗ್ ಎಂಬವರು ಮೃತದೇಹವನ್ನು ಗುರುತಿಸಲು ಪೊಲೀಸ್ ಠಾಣೆಯಿಂದ ಕರೆ ಸ್ವೀಕರಿಸಿದ್ದಾರೆ.

ಇದನ್ನೂ ಓದಿರಿ: ದಲಿತರ ಮೇಲಿನ ದೌರ್ಜನ್ಯ: ನಾಲ್ಕು ವರ್ಷಗಳಲ್ಲಿ 1,89,945 ಪ್ರಕರಣ ದಾಖಲು

“ಕೆಲಸಕ್ಕಾಗಿ ಸುಮಾರು ಮೂರು ದಿನಗಳ ಹಿಂದೆ ಅವರು ನನ್ನ ಬಳಿಗೆ ಬಂದಿದ್ದರು, ಆದರೆ ನಂತರ ಅವರು ಇಲ್ಲಿ ಕೆಲಸ ಮಾಡಲು ಬಯಸಲಿಲ್ಲ. ತಮ್ಮ ಸ್ವಂತ ಸ್ಥಳಕ್ಕೆ ಮರಳಲು ಇಚ್ಛಿಸಿದ್ದರು” ಎಂದು ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. “ಅವರು ಸುಮಾರು ಒಂದು ದಿನದ ಹಿಂದೆ ಅಹಮದಾಬಾದ್‌ನಿಂದ ಬೆಳಿಗ್ಗೆ 10.30ಕ್ಕೆ ಹೊರಟು ಹೋಗಿದ್ದರು” ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ.

“ಗ್ರಾಮಸ್ಥರು ಈ ಕಾರ್ಮಿಕನನ್ನು ಕಳ್ಳನೆಂದು ಶಂಕಿಸಿ ಥಳಿಸಿದ್ದಾರೆ” ಎಂದು ಮಹಮದಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂಎನ್ ಪಾಂಚಾಲ್ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ. “ಆದರೂ ಅವರು ಅಲ್ಲಿಗೆ ಏಕೆ ಹೋದರು ಎಂಬುದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಆದರೆ ಅವರು ಕೆಲಸ ಹುಡುಕಿಕೊಂಡು ಅಲ್ಲಿಗೆ ಹೋಗಿರುವ ಸಾಧ್ಯತೆ ಇದೆ” ಎಂದು ಶಂಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...