Homeಕರ್ನಾಟಕಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ

ಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ

’ಐ ಆಮ್ ದಿ ಮಿನಿಸ್ಟರ್, ನಾನೇಳಿದ್ದು ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಿ’ ಎಂದು ಸಚಿವ ಮಾಧುಸ್ವಾಮಿ ಸೌಜನ್ಯ ಮೀರಿದ್ದರು.

- Advertisement -
- Advertisement -

ಪ್ರಶ್ನೆ ಮಾಡುವ ರೈತರ ಮೇಲೆ ರೇಗುವ ಪರಿಪಾಠ ಬೆಳೆಸಿಕೊಂಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಿಂದೆ ಕೋಲಾರ ರೈತ ಮಹಿಳೆಯೊಬ್ಬರನ್ನು ರ್‍ಯಾಸ್ಕಲ್ ಬಾಯ್ಮುಚ್ಚು ಎಂದು ಧಮಕಿ ಹಾಕಿದ್ದ ಕಾನೂನು ಸಚಿವರು ಇದೀಗ ತುಮಕೂರಿನಲ್ಲಿ ಹಿರಿಯ ಹೋರಾಟಗಾರರಿಗೆ ’ಐ ಆಮ್ ದಿ ಮಿನಿಸ್ಟರ್, ನಾನೇಳಿದ್ದು ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಿ’ ಎಂದು ಸೌಜನ್ಯ ಮೀರಿದ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದದ್ದು ಇಷ್ಟು. ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಸಿಸಿ ಮತ್ತು ಎಐಕೆಎಸ್ ಮತ್ತು ದಲಿತ ಸಂಘಟನೆಗಳು ಜೂನ್ 29ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಪ್ರತಿಭಟನಾನಿರತ ರೈತ ಮುಖಂಡರು ಕಾದರು. ಅರ್ಧ ಗಂಟೆಯ ನಂತರ ಸಚಿವರು ಡಿಸಿ ಕಚೇರಿಯ ಎಡ ಭಾಗದ ಗೇಟಿನಿಂದ ಹೊರಕ್ಕೆ ಬಂದರು. ಪ್ರತಿಭಟನಾಕಾರರು ಬಲಭಾಗದ ಗೇಟಿನಲ್ಲಿ ಕಾಯುತ್ತಿದ್ದರು. ಸಚಿವರು ಬಲಭಾಗದ ಗೇಟ್ ಗೆ ಬಂದು ಮನವಿ ಸ್ವೀಕರಿಸುವಂತೆ ರೈತರು ಒತ್ತಾಯಿಸಿ ಸಚಿವರ ಕಾರನ್ನು ತಡೆದು ಘೋಷಣೆ ಕೂಗಿದರು.

ಪ್ರತಿಭಟನಾ ನಿರತರ ಬಳಿಗೆ ಬಂದು ಅಧಿಕಾರಿಗಳು ಸಚಿವರು ಮನವಿ ಸ್ವೀಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.( ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿ) ಸಚಿವರು ಬಲ ಭಾಗದ ಗೇಟ್ ಗೆ ಬರಲು ಒಪ್ಪಲಿಲ್ಲ. ತಾನಿರುವಲ್ಲಿಗೇ ಬಂದು ಕೊಡಿ ಎಂದರು. ರೈತರು ಸಿಟ್ಟಿಗೆದ್ದರು. ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಇದು ಮಿನಿಸ್ಟರ್ ಅವರನ್ನು ಕೆರಳಿಸಿತು. ಮತ್ತೆ ಕಾರಿನಲ್ಲಿ ಕೂತರು. ಅಧಿಕಾರಿಗಳು ಸಮಾಧಾನ ಪಡಿಸಿ ಸಚಿವರನ್ನು ಕರೆತಂದರು.

ಎರಡನೇ ಅಂಕ: ರೈತರ ಒತ್ತಾಯಕ್ಕೆ ಮಣಿದು ಪ್ರತಿಭಟನಾ ನಿರತರ ಬಳಿಗೆ ಬಂದರು. ಪ್ರಾಂತ ರೈತ ಸಂಘ ಮುಖಂಡ ಬಿ.ಉಮೇಶ್ ಸಚಿವರೊಂದಿಗೆ ಸರ್ಕಾರದ ತೀರ್ಮಾಗಳಿಂದ ರೈತರಿಗಾಗುವ ಅನ್ಯಾಯವನ್ನು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಸಚಿವರು ಉಮೇಶ್ ಅವರನ್ನು ದಬಾಯಿಸಲು ಮುಂದಾದರು. ಕೂಡಲೆ ಬಡವರ ಭೂಮಿ ವಸತಿ ಹಕ್ಕಿಗಾಗಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವ ಹಿರಿಯರಾದ ಸಿ. ಯತಿರಾಜು ಅವರು ಸಚಿವರನ್ನು ಪ್ರಶ್ನಿಸತೊಡಗಿದರು.

ಸಿ.ಯತಿರಾಜ್ ರವರು ನಾಡಿನ ಹಿರಿಯ ಹೋರಾಟಗಾರರು. ಸದಾ ರೈತರು ,ಪರಿಸರದ ಕುರಿತು ಕಾಳಿಜಿಯಿಂದ ಹೋರಾಟ ನಡೆಸುತ್ತಿರುವವರು. ಇಂತಹ ಹಿರಿಯರ ಜೊತೆ ಸಚಿವ ಮಾಧುಸ್ವಾಮಿಯವರು ಇತ್ತಿಚಿಗೆ ನಡೆದ ಭೂ ಸುಧಾರಣಾ ಕಾಯ್ದೆ ವಿರುದ್ಧದ ಹೋರಾಟದ ಸಮಯದಲ್ಲಿ ಮನವಿಪತ್ರ ನೀಡುವ ವೇಳೆ ದುರಂಹಕಾರದಿಂದ ನಡೆದುಕೊಂಡಿದ್ದಾರೆ.#NaanuGauri #LawMinister #maduswamy

Posted by Naanu Gauri on Tuesday, June 30, 2020

ಭೂಸ್ವಾದೀನ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುತ್ತದೆ. ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಹೊಂದಬಹುದು. ಈಗಿರುವ ಕಾನೂನಿನಂತೆ 10 ಯೂನಿಟ್ ಗೆ 5.4 ಎಕರೆಯಂತೆ 54 ಎಕರೆ ಜಮೀನು ಹೊಂದಲು ಅವಕಾಶವಿದೆ. ತಿದ್ದುಪಡಿ ಮಾಡಿದರೆ 4 ಮಂದಿ ಸದಸ್ಯರಿರುವ ಕುಟುಂಬಕ್ಕೆ 20 ಯೂನಿಟ್ ಮಾಡಿದ್ದೀರಿ. ಇದರಿಂದ 108 ಎಕರೆ ಹೊಂದಬಹುದು. 5 ಮಂದಿ ಸದಸ್ಯರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ 216 ಎಕರೆ ಹೊಂದಬಹುದು ಎಂದು ಹಿರಿಯ ಹೋರಾಟಗಾರ ಯತಿರಾಜು ಅವರು ಸಚಿವರನ್ನು ಪ್ರಶ್ನಿಸುತ್ತಾ ಹೋದರು.

ಇದರಿಂದ ಕೆರೆಳಿ ಕೆಂಡವಾದ ಸಚಿವ ಮಾಧುಸ್ವಾಮಿ, ’ಐ ಆಮ್ ಮಿನಿಸ್ಟರ್, ನಾನು ಹೇಳಿದ್ದು ಮೊದಲು ಕೇಳಿ. ನನಗೆ ಮಾತಾಡಲು ಮೊದಲು ಬಿಡಿ ನಿಮ್ಮ ಭಾಷಣ ಕೇಳಲು ನಾನಿಲ್ಲಿ ಬಂದಿಲ್’ ಎಂದು ಕೋಪಗೊಂಡರು. ಒಂದು ಹಂತದಲ್ಲಿ ನನ್ನ ಮಾತನ್ನು ಕೇಳುವುದಾದರೆ ಕೇಳಿ ಇಲ್ಲಾಂದ್ರೆ ಇಲ್ಲಿಂದ ಹೊರಡಿ ಎಂದು ಕೂಗಾಡಿದರು ಸಚಿವರು. ಸರ್ಕಾರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಆಗ ಯತಿರಾಜು ಅವರು ‘ಮೊದಲು ರೈತರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ರೈತರ ಬೇಡಿಕೆಗಳ ಗಂಭೀರತೆ ತಿಳಿದುಕೊಳ್ಳಿ ಸರ್. ನಮಗೂ ಮಾತನಾಡಲು ಅವಕಾಶ ಕೊಡಿ. ಆಮೇಲೆ ನೀವು ಸರ್ಕಾರದ ನಡೆಯನ್ನು ಬೇಕಾಧರೆ ಸಮರ್ಥಿಸಿಕೊಳ್ಳಿ ಎಂದು ಅತ್ಯಂತ ಗೌರವಯುತವಾಗಿಯೇ ಸಚಿವರಿಗೆ ಹೇಳಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಚಿವರು ಟೆಕ್ಕಿಗಳು ಸರ್ಕಾರಕ್ಕೆ ಭೂಮಿ ಬೇಕೆಂದು ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ಭೂಸುಧಾರಣೆಗೆ ತಿದ್ದುಪಡಿ ತರುತ್ತಿದ್ದೇವೆ ಎಂದು ಸಚಿವರು ಹೇಳತೊಡಗಿದರು. ಇದರಿಂದ ರೈತರಿಗೆ ದೊಡ್ಡಮಟ್ಟದ ಲಾಭವಾಗುತ್ತದೆ ಎಂದರು. ಇದರಿಂದ ಸಿಟ್ಟುಗೊಂಡ ಯತಿರಾಜು ಅವರು ತಲೆತಲಾಂತರದಿಂದ ಕೃಷಿಯನ್ನೇ ನಂಬಿಕೊಂಡು ಬಂದಿರುವರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರನ್ನು ಬಿಟ್ಟು ಸಂಡೇ ಕೃಷಿಕರಿಗೆ ಭೂಮಿ ನೀಡುವುದರಿಂದ ಅನ್ನದ ಅಭದ್ರತೆ ಸೃಷ್ಟಿಯಾಗುತ್ತದೆ ಎಂದು ಹೇಳಿದಾಗ ಸಚಿವರು ಕೆರಳಿ ಕೆಂಡವಾದರು.

ನಿಮ್ಮ ಮಾತು ನಿಲ್ಲಿಸಿ, ನೀವು ಹೇಳುತ್ತಿರುವುದು ಸರಿಯಲ್ಲ.  5 ಜನರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ ಕೇವಲ 84 ಎಕರೆ ಭೂಮಿ ಹೊಂದಲು ಈಗಿನ ಕಾನೂನಿನಲ್ಲಿ ಅವಕಾಶವಾಗಲಿದೆ ಎಂದು ಸಚಿವರ ಹೇಳಿಕೆ ಸುಳ್ಳಿನಿಂದ ಕೂಡಿದೆ ಈಗಿನ ಕಾನೂನಿನಂತ ಒಂದು ಕುಟುಂಬ 216 ಎಕರೆ ಹೊಂದಬಹುದು. ಇದು ಭೂಮಿಯನ್ನೇ ನಂಬಿರುವ ರೈತರಿಗೆ ತೊಂದರೆಯಾಗುತ್ತದೆ ಎಂದು ವಿವರಿಸಲು ಯತಿರಾಜು ಮುಂದಾದರು.

ಹೀಗಾಗಿ ತನಗೆ ಪ್ರಶ್ನಿಸಲು ಬರುತ್ತಾರೆ ಎಂದುಕೊಂಡ ಸಚಿವರು ಹಿರಿಯ ಹೋರಾಟಗಾರರಿಗೆ ಗೌರವ ಕೊಡದೆ ನಡೆದುಕೊಂಡರು ಎಂದು ಆಡಿಕೊಳ್ಳುವಂತಾಗಿದೆ. ಕೇವಲ ಬಂದು ಮನವಿ ಪಡೆದು ಹೋಗಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಚಿವರ ಅಹಂಗೆ ಇದು ಉದಾಹರಣೆಯಾಗಿದೆ. ಇಂತಹ ಧೋರಣೆಯನ್ನು ಸಚಿವರು ತಿದ್ದಿಕೊಳ್ಳಬೇಕು ಎಂದು ಹಿರಿಯ ಜೀವಗಳು ಆಗ್ರಹಿಸಿವೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಹಿರಿಯ ಹೋರಾಟಗಾರ ಸಿ.ಯತಿರಾಜು, “ರೈತರ ಆತಂಕವನ್ನು ಸಚಿವರ ಮುಂದೆ ಹೇಳಿದ್ದೇ ತಪ್ಪಾ? ಸದನ ಶೂರ ಎಂದು ಕರೆಸಿಕೊಳ್ಳುವ ಸಚಿವರು ಹೀಗೆ ವರ್ತಿಸಿರುವುದು ಬೇಸರ ಮೂಡಿಸಿದೆ. ಟಿಕ್ಕಿಗಳಿಗೆ ಭೂಮಿ ನೀಡಿದರೆ ನ್ಯಾಚುರಲ್ ಫಾರಂ ಹೆಚ್ಚಾಗುತ್ತದೆ.  ಕೃಷಿ ಉತ್ತೇಜನ ಸಿಗುವುದಿಲ್ಲ. ಶೇ.85ರಷ್ಟು ಸಣ್ಣ ಮಧ್ಯಮ ರೈತರು ಇದ್ದು ಭೂಮಿ ನಂಬಿ ಬದುಕುತ್ತಿದ್ದಾರೆ. ಈಗ ಭೂಮಿಯನ್ನೂ ಕಳೆದುಕೊಂಡರೆ ಅವರ ಬದುಕು ಬರ್ಬರವಾಗುತ್ತದೆ. ಒಂದಿಷ್ಟು ದುಡ್ಡು ಬರಬಹುದು. ರೈತರ ಸ್ವಾಭಿಮಾನ ಮತ್ತು ಘನತೆಯುತ ಬದುಕಿಗೆ ಧಕ್ಕೆ ಬರುತ್ತದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು. ತಾನೇ ಸರ್ವಜ್ಞ ಎಂಬ ಮನೋಭಾವ ಬಿಟ್ಟರೆ ಒಳ್ಳೆಯದು” ಎಂದು ಹೇಳಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಾರ್ಪೋರೇಟ್ ಕುಳಗಳು ಸಂಡೇ ಕೃಷಿಕರ ಪಾಲಾಗುತ್ತದೆ ಕಂಪನಿಗಳು, ಬಂಡವಾಳಗಾರರು ಭೂಮಿ ಹೊಂದಿ ನಿಜವಾದ ರೈತರು ಜೀತದಾಳುಗಂತೆ ದುಡಿಮೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ರೈತ ಮುಖಂಡರದ್ದು.

79 ಎ ಬಿ ಕಲಂಗಳಿಂದ ಹೆಚ್ಚು ಭೂಮಿ ಹೊಂದಲು ಅವಕಾಶವಿಲ್ಲ. ಇವುಗಳನ್ನು ತೆಗೆದುಹಾಕಿದರೆ ಕೃಷಿಕರಿಗೆ ತೊಂದರೆಯಾಗಲಿದೆ. ನೈಸರ್ಗಿಕ ಕೃಷಿ ಹೋಗಿ ರಫ್ತು ಆಧಾರಿತ ಕೃಷಿ ಸಂಸ್ಕೃತಿ ಬರುತ್ತದೆ. ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ರೈತರ ಆಧಾಯ ಖೋತಾ ಆಗುತ್ತದೆ. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬಾರದು. ರೈತರ ಪರವಾಗಿ ಧ್ವನಿ ಎತ್ತಬೇಕಾಗಿದ್ದ ಸಚಿವ ಮಾಧುಸ್ವಾಮಿ ಬಂಡವಾಳಿಗರು ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿರುವುದಕ್ಕೆ ರೈತ ಸಂಘಟನೆಗಳು ಸಿಡಿದೇಳುವಂತೆ ಮಾಡಿದೆ.


ಓದಿ: ಭೂಸುಗ್ರೀವಾಜ್ಞೆ ವಿರೋಧಿಸಿ ಪ್ರತಿಭಟನೆ: ರೈತಮುಖಂಡರೊಂದಿಗೆ ಮಾಧುಸ್ವಾಮಿ ಮಾತಿನ ಚಕಮಕಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...