Homeಮುಖಪುಟಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ - ಮೈಕೆಲ್ ಹಾನೆಕೆ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

- Advertisement -
- Advertisement -

ಸಿನಿಯಾನ: 04

ರಾಜಶೇಖರ್ ಅಕ್ಕಿ

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ. ಆ ಕಥೆಯಲ್ಲಿ ಒಬ್ಬ ಹೀರೋ ಇರ್ತಾನೆ, ಒಬ್ಳು ಹೀರೋಯಿನ್ ಇರ್ತಾಳೆ, ಒಬ್ಬ ಖಳನಾಯಕ ಇರ್ತಾನೆ, ಪೋಷಕ ಪಾತ್ರಗಳಿರ್ತಾವೆ ಎಂತೆಲ್ಲಾ ನಾವು ಅಂದುಕೊಂಡಿದ್ದು. ನಂತರ ಸಿನೆಮಾ ಅಭ್ಯಸಿಸುತ್ತ ಹೋದತ್ತ ಡ್ರಾಮಾ, ಸ್ಟ್ರಕ್ಚರ್ ಎನ್ನುವ ಅಂಶಗಳು ನಮಗೆ ತಿಳಿದವು. ಯಾವುದೇ ಒಂದು ಕಥೆಯಲ್ಲಿ ಆರಂಭ, ಮಧ್ಯ, ಮುಕ್ತಾಯ ಇರುತ್ತವೆ ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಸಿನೆಮಾದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಸೆಟ್‍ಅಪ್ ಅಂದರೆ ಪಾತ್ರಗಳು, ಆ ಪಾತ್ರಗಳ ಇರುವ ಸನ್ನಿವೇಶ ಇವೆಲ್ಲ ವೀಕ್ಷಕರಿಗೆ ತಿಳಿಯುತ್ತವೆ ಮುಂದಿನ ಸುಮಾರು ಒಂದು ಗಂಟೆಯ ವರೆಗೆ ಆ ಪಾತ್ರಗಳ ನಡುವಿನ ಸಂಘರ್ಷ ವ್ಯಕ್ತವಾಗಿ, ಆಯಾ ಪಾತ್ರಗಳು, ಮುಖ್ಯವಾಗಿ ನಾಯಕ(ಕಿ)ಯ ಪಾತ್ರ ಆ ಸಂಘರ್ಷವನ್ನು, ತನ್ನ ಗುರಿಗೆ ಇರುವ ತೊಡಕುಗಳನ್ನು ಹೇಗೆ ಎದುರಿಸುತ್ತವೆ ಎಂದೂ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಆ ಸಂಘರ್ಷ ಹೇಗೆ ನಿಷ್ಕರ್ಷವಾಗುತ್ತದೆ ಎಂದು ತಿಳಿಯುತ್ತದೆ. ಅನೇಕ ಚಿತ್ರಗಳಲ್ಲಿ ಸಂಘರ್ಷ ಬಾಹ್ಯವಾಗಿದ್ದರೆ ಕೆಲವು ಚಿತ್ರಗಳಲ್ಲಿ ಆಂತರಿಕವಾಗಿರುತ್ತದೆ ಅಂದರೆ ಆ ಪ್ರಮುಖ ಪಾತ್ರಕ್ಕೆ ತಾನೇ, ತನ್ನ ದೌರ್ಬಲ್ಯಗಳೇ ಮುಖ್ಯ ಶತ್ರುವಾಗಿದ್ದಾಗಿರುವಾಗ ಸಂಘರ್ಷ ಹುಟ್ಟಿಕೊಳ್ಳುತ್ತವೆ.

ನಮ್ಮಲ್ಲರಲ್ಲೂ ಅನೇಕ ಕಥೆಗಳಿರುತ್ತವೆ. ನಾವೆಲ್ಲರೂ ನಮ್ಮ ಸುತ್ತಮುತ್ತ ಆಗುತ್ತಿರುವ ಅನ್ಯಾಯ, ಸೋಜಿಗ, ಹೋರಾಟ, ಸಾಹಸಗಳನ್ನು ನೋಡಿ ಅನೇಕ ಕಥೆಗಳನ್ನು ಕಟ್ಟಿಕೊಂಡಿರುತ್ತೇವೆ, ಆಯಾ ಚಿತ್ರಗಳು ಮತ್ತು ಅದರಲ್ಲಿಯ ನಮ್ಮ ಒಳ್ಳೆಯತನ, ಕೆಟ್ಟತನ ಮುಂತಾದವುಗಳ ವ್ಯಾಖ್ಯೆಯ ಪರಿಧಿಯಲ್ಲಿ ಬರುತ್ತವೆ.

ಮೈಕೆಲ್ ಹಾನೆಕೆಯ ಚಿತ್ರಗಳನ್ನು ನೋಡಿದಾಗ ಇವೆಲ್ಲವುಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಕಥೆ ಎಂದರೇನು, ಅದರ ಪರಿಭಾಷೆ ಏನು, ನಾಯಕನ ಪಾತ್ರ ಹೇಗಿರಬೇಕು, ಅವನು ಏನಾದರೂ ಒಳ್ಳೆಯದನ್ನು ಬಿಂಬಿಸಬೇಕಲ್ಲವೇ ಅಥವಾ ಅದಕ್ಕಾಗಿ ಹೋರಾಡಬೇಕಲ್ಲವೇ, ನಾಯಕ ಕೆಟ್ಟವನಾಗಿದ್ದರೂ ಅವನೊಳಗೇ ಏನಾದರೂ ತುಮುಲಗಳಿರಬೇಕಲ್ಲವೇ, ಅವನ/ಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಲ್ಲವೇ, ಪ್ರಮುಖ ಪಾತ್ರ ಕೆಟ್ಟವನಾಗಿದ್ದರೆ ಇತರ ಪಾತ್ರಗಳಾದರೂ ಅದರ ವಿರುದ್ಧ ಮನಸ್ಥಿತಿಯನ್ನು ಹೊಂದಿ ಸಂಘರ್ಷ ನಿರ್ಮಾಣವಾಗನೇಕಲ್ಲವೇ, ಕೆಟ್ಟದ್ದು ಮತ್ತು ಒಳ್ಳೇದು ಎನ್ನುವವುದೇನಾದರೂ ಕಥೆಯಲ್ಲಿ ಇರಬೇಕಲ್ಲವೇ, ಚಿತ್ರಕ್ಕೆ ನೈತಿಕ ಸ್ಪಷ್ಟತೆ ಇರಬೇಕಲ್ಲವೇ? ಮೈಕೆಲ್ ಹಾನೆಕೆಯ ಸಿನೆಮಾ ನೋಡಿದರೆ ಇವಕ್ಕೆ ಯಾವುದೇ ಉತ್ತರ ಸಿಗುವುದಿಲ್ಲ; ಸಿಗುವುದು ಪ್ರಶ್ನೆಗಳಷ್ಟೆ.

ಮೈಕೆಲ್ ಹಾನೆಕೆ ಒಬ್ಬ ಆಸ್ಟ್ರಿಯಾದ ಚಿತ್ರನಿರ್ದೇಶಕ. ಇವರು 1942 ರಲ್ಲಿ ಜರ್ಮನಿಯಲ್ಲಿ ಹುಟ್ಟಿ ಆಸ್ಟ್ರಿಯಾದಲ್ಲಿ ತಮ್ಮ ಶಿಕ್ಷಣ ಮುಗಿಸಿದರು. ನಟನಾಗಿ ಯಶಸ್ಸು ಸಿಗದಾಗ ವಿಮರ್ಶಕರಾಗಿ, ಸಂಕಲನಕಾರರಾಗಿ ಕೆಲಸ ಮಾಡಿ ನಂತರ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮೊದಲ ಚಿತ್ರ ‘ದಿ ಸೆವೆಂತ್ ಕಾಂಟಿನೆಂಟ್’. ಈ ಚಿತ್ರ ಅವರು ಮುಂದು ನಿರ್ದೇಶಿಸಲಿರುವ ಚಿತ್ರಗಳಲ್ಲಿಯ ಹಿಂಸೆ ಮತ್ತು ಬೋಲ್ಡ್ ಶೈಲಿಯ ಒಂದು ಝಲಕ್ ತೋರಿಸಿಕೊಟ್ಟಿತು. (ಸ್ಪಾಯ್ಲರ್ ಅಲರ್ಟ್) ಆಸ್ಟ್ರಿಯಾದ ಒಂದು ಮಧ್ಯಮ ವರ್ಗದ ಕುಟುಂಬ. ಜಾರ್ಜ್, ಒಬ್ಬ ಇಂಜಿನೀಯರ್, ಅವನ ಹೆಂಡತಿ ಆನಾ ಮತ್ತು ಅವರ ಮಗಳು ಈವಾ. ಆಸ್ಟ್ರಿಯಾದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಬೇಕೆಂದು ಕನಸು ಕಂಡ ಈ ಕಟುಂಬ, ಹಳ್ಳಿಯಲ್ಲಿರುವ ಜಾರ್ಜ್‍ನ ತಂದೆಯನ್ನು ಭೇಟಿ ಮಾಡಿ ಬಂದ ನಂತರ ತಮ್ಮ ಕಾರನ್ನು ಮಾರಿ, ಬ್ಯಾಂಕ್ ಖಾತೆಯಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು, ಖಾತೆಯನ್ನು ಮುಚ್ಚಿ, ತಮ್ಮ ಮನೆಯಲ್ಲಿಯ ಎಲ್ಲಾ ವಸ್ತುಗಳನ್ನು ನಾಶಪಡಿಸಿ, ಇದ್ದ ದುಡ್ಡನ್ನೆಲ್ಲ ಹರಿದು ಹಾಕಿ, ಹರಿದ ತುಣುಕಗಳನ್ನೆಲ್ಲ ಟಾಯ್ಲೆಟ್‍ನಲ್ಲಿ ಫ್ಲಷ್ ಮಾಡಿ, ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಮಗಳು ಸತ್ತ ನಂತರ ಗೋಡೆಯ ಮೇಲೆ ಅವರ ಹೆಸರು, ಅವರು ಸತ್ತ ದಿನಾಂಕ ಮತ್ತು ಸಮಯವನ್ನು ಬರೆದು ತನ್ನ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿ, ತಾನೂ ಸಾಯುತ್ತಾನೆ. ಆತ್ಮಹತ್ಯೆಗೂ ಮುಂಚೆ ಬರೆದ ಪತ್ರದಲ್ಲಿ ತಾವು ತಮ್ಮ ಕೆಲಸವನ್ನು ಬಿಟ್ಟಿರುವುದಾಗಿ, ತಾವೆಲ್ಲ ಹೋಗುತ್ತಿರುವುದಾಗಿ ಹಾಗೂ ಮಗಳನ್ನೂ ತಮ್ಮೊಂದಿಗೆ ಒಯ್ಯುವುದು ಕಷ್ಟದ ನಿರ್ಧಾರವಾಗಿತ್ತೆಂದು ಆದರೆ ಮಗಳು ಈವಾ ಬರಲು ಸಿದ್ಧವಾಗಿದ್ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗುವದಾಗಿ ಹೇಳುತ್ತಾನೆ.

ಇವರುಗಳ ಆತ್ಮಹತ್ಯೆ, ಅದರ ತಯ್ಯಾರಿ, ತಮ್ಮೆಲ್ಲ ವಸ್ತುಗಳನ್ನು ನಾಶಪಡಿಸುವುದೇ ಈ ಚಿತ್ರ.

1997 ರಲ್ಲಿ ಮೈಕೆಲ್ ಫನಿ ಗೇಮ್ಸ್ ಎನ್ನುವ ಚಿತ್ರವನ್ನು ಮಾಡಿದರು. ಇದೇ ಚಿತ್ರವನ್ನು ಹತ್ತು ವರ್ಷಗಳ ನಂತರ ಹಾಲಿವುಡ್‍ನಲ್ಲಿಯೂ ಇವರೇ ಮತ್ತೊಮ್ಮೆ ನಿರ್ದೇಶಿಸಿದರು. ಒಂದು ಉಚ್ಚ ಮಧ್ಯಮಗ ವರ್ಗದ ಕುಟುಂಬ, ಗಂಡ, ಹೆಂಡತಿ, ಮಗ ಮತ್ತು ಅವರ ನಾಯಿ ತಾವು ರಜಾದಿನಗಳಿಗಾಗಿಯೇ ನಗರದಿಂದ ದೂರದಲ್ಲಿ ನಿರ್ಮಸಿದ ತಮ್ಮ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಸಿಗುವವರು ಪಾಲ್ ಮತ್ತು ಪೀಟರ್ ಎನ್ನುವ ಯುವಕರು. ಈ ಇಬ್ಬರು ಕುಟುಂಬದ ಸ್ನೇಹ ಸಂಪಾದಿಸಿ, ನಂತರ ಅವರ ಪೋನ್ ಲೈನ್ ಅನ್ನು ಕಿತ್ತು ಹಾಕಿ ಇಡೀ ಕುಟುಂಬವನ್ನು ಬಂಧಿತರನ್ನಾಗಿಸಿ, ಅವರೊಂದಿಗೆ ನೋವು ಸಾವಿನ ಆಟವಾಡಿ, ಪಾರಾಗಲು ಅವಕಾಶ ಕೊಟ್ಟಂತೆ ಮಾಡಿ ಮರುದಿನ ಬೆಳಗ್ಗೆಯ ತನಕ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಕೊಂದು ಹಾಕುವುದು ಈ ಚಿತ್ರದ ಸಾರಾಂಶ. ಇವರನ್ನು ಮುಗಿಸಿದ ನಂತರ ಇದೇ ಆಟವನ್ನು ಮುಂದುವರೆಸಲು ಪಾಲ್ ಮತ್ತು ಪೀಟರ್ ಇನ್ನೊಂದು ಕುಟುಂಬದ ಸ್ನೇಹ ಸಂಪಾದಿಸುವ ದೃಶ್ಯದಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರ ನೋಡಿದಾಗ ವೀಕ್ಷಕರ ಮನದಲ್ಲಿ ಪ್ರಶ್ನೆಗಳು ಏಳುವುದು ಸಹಜ. ಏಕೀ ಸಿನೆಮಾ? ಮೈಕೆಲ್ ಹೇಳುವಂತೆ ಅವರ ಸಿನೆಮಾಗಳು ವೀಕ್ಷಕರ ಕಲ್ಪನೆಗೆ ಅವಕಾಶ ಮಾಡಿಕೊಡುತ್ತವೆ ಹಾಗೂ ವೀಕ್ಷಕರು ತಮ್ಮನ್ನು ತಾವು ಪ್ರಶ್ನಿಸುವಂತೆ ಮಾಡುತ್ತವೆ. ಖಂಡಿತವಾಗಿಯೂ ಈ ಎರಡೂ ಉದ್ದೇಶಗಳು ಇವರ ಸಿನೆಮಾಗಳಲ್ಲಿ ಸಾಕಾರಗೊಳ್ಳುತ್ತವೆ ಆದರೂ ಹಲವಾರೂ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಒಂದು ಪತ್ರಿಕೆ ಫನಿ ಗೇಮ್ಸ್ ಚಿತ್ರವನ್ನು ಕಲಾತ್ಮಕ ಚಿತ್ರಹಿಂಸೆ ಎಂದು ಕರೆದು ಅತಿ ಕಟ್ಟ ಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಹಲವಾರು ವೀಕ್ಷಕರು ಮತ್ತು ವಿಮರ್ಶಕರು ಈ ಚಿತ್ರಗಳನ್ನು ವೀಕ್ಷಿಸುವದು ಒಂದು ವಿಶಿಷ್ಟ ಅನುಭವ, ನಮ್ಮ ಆಳದ ಹಿಂಸೆಯನ್ನು ಹೊರಗೆ ತರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಿದೆ.

2001 ರಲ್ಲಿ ಬಂದ ಫ್ರೆಂಚ್ ಸಿನೆಮಾ ‘ದಿ ಪಿಯಾನೋ ಟೀಚರ್’ ಇವರ ಇನ್ನೊಂದು ಚಿತ್ರ. ಒಬ್ಬ ಮಧ್ಯವಯಸ್ಕ ಪಿಯಾನೋ ಶಿಕ್ಷಕಿ ಎರಿಕಾ ಕೊಹಟ್‍ಯ ಕಥೆ. ಎರಿಕಾಳ ಲೈಂಗಿಕ ತುಮುಲಗಳು, ತನ್ನ ವಿದ್ಯಾರ್ಥಿಗಳೊಂದಿಗಿನ ಕ್ಲಿಷ್ಟಕರ ಸಂಬಂಧಗಳನ್ನು ಎಲ್ಲಿಯೂ ಜಜ್‍ಮೆಂಟಲ್ ಆಗದೇ ತೋರಿಸುತ್ತ ಹೋಗುತ್ತದೆ. ಕ್ಯಾಷೆ(2005), ದಿ ವೈಟ್ ರಿಬನ್(2009), ಅಮೋರ್(2012) ಮುಂತಾದವುಗಳು ಮೈಕೆಲ್ ಹಾನೆಕೆ ನಿರ್ದೇಶಿಸಿದ ಖ್ಯಾತ ಚಿತ್ರಗಳು. ಮನುಷ್ಯನ ಆಳಕ್ಕಿಳಿದು ಅಲ್ಲಿಯ ಹಿಂಸೆ, ನೋವು, ಲೈಂಗಿಕತೆಯ ತುಮುಲಗಳನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಇವರ ಚಿತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮೈಕಲ್ ಹಾನೆಕೆ ಸದ್ಯಕ್ಕೆ ವಿಯೆನ್ನಾದ ಫಿಲ್ಮ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ದೇಶನ ಕಲಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...