ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ-ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ 34 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ನಡೆದ ಹರಿಯಾಣದ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಗೆ ಭಾರೀ ಹಿನ್ನಡೆ ಅನುಭವಿಸಿದ್ದು, ಮುಖಭಂಗಕ್ಕೆ ಒಳಗಾಗಿವೆ.
ಹರಿಯಾಣ ವಿಧಾನಸಭಾ ಚುನಾವಣೆಯ ಒಂದು ವರ್ಷದ ನಂತರ ನಡೆದ ಸೋನಿಪತ್ ಮತ್ತು ಅಂಬಾಲಾ ಮುನ್ಸಿಪಾಲಿಟಿ ಚುನಾವಣೆಯನ್ನು ಪ್ರತಿಷ್ಠಿತ ರಾಜಕೀಯ ಕಾಳಗ ಎಂದು ಪರಿಗಣಿಸಲಾಗಿತ್ತು. ಈ ಪುರಸಭಾ ಪಾಲಿಕೆಗಳಲ್ಲಿ ಆಡಳಿತಾರೂಢ ಮೈತ್ರಿಯು ಸೋಲನ್ನು ಅನುಭವಿಸಿದೆ. ಅಲ್ಲದೆ, ಉಪಮುಖ್ಯಮಂತ್ರಿ ದುಶ್ಯಂತಯ್ ಚೌತಲಾ ನೇತೃತ್ವದ ಜನನಾಯಕ್ ಜನತಾ ಪಕ್ಷ(ಜೆಜೆಪಿ)ವು ಪ್ರಾಬಲ್ಯ ಹೊಂದಿದ್ದ ಹಿಸಾರ್‌ನ ಉಕಲಾನಾ ಮತ್ತು ರೇವಾರಿಯ ಧರುಹೆರಾದಲ್ಲಿ ಸೋಲನ್ನು ಅನುಭವಿಸಿದೆ.
ಇದನ್ನೂ ಓದಿ: ಕಂಗಾನಾ ಮುಂಬೈಗೆ ಮರಳಿದ್ದಾರೆಂದು ಎನ್‌ಸಿಬಿಗೆ ನೆನಪಿಸಿದ ಕಾಂಗ್ರೆಸ್- ಕಾರಣವೇನು ಗೊತ್ತೇ?
ಅಲ್ಲದೆ ಸಿಂಘು ಗಡಿಯಲ್ಲಿರುವ ಸೋನಿಪತ್‌ನಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಗೆದ್ದಿದೆ. ಪಂಚಕುಲದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಬಲವಾದ ನೆಲೆ ಹೊಂದಿದ್ದ ಬಿಜೆಪಿಯ ಮಿತ್ರಪಕ್ಷ ಜೆಜೆಪಿಯು ರೇವಾರಿಯ ಧರುಹೆರಾ ಮತ್ತು ಹಿಸಾರ್‌ನ ಉಕ್ಲಾನಾದಲ್ಲಿ ಸೋತಿದೆ.
ಅಂಬಾಲಾ, ಪಂಚಕುಲ, ಸೋನಿಪತ್, ರೇವಾರಿಯ ಧರುಹೆರಾ, ರೋಹ್ಟಕ್‌ನ ಸಂಪ ಮತ್ತು ಹಿಸಾರ್‌ನ ಉಕ್ಲಾನಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಭಾನುವಾರ ನಡೆದಿತ್ತು. ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿತ್ತು. ಹೊಸ ಕೃಷಿ ಕಾನೂನುಗಳ ವಿರುದ್ಧದ ರೈತರ ಅಸಮಾಧಾನವೇ ಬಿಜೆಪಿಯ ಸೋಲಿಗೆ ಕಾರಣ ಎಂದು ಪ್ರತಿಸ್ಪರ್ಧಿ ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಬೆನ್ನು ನೋವು ಮತ್ತು ಕುತ್ತಿಗೆ ನೋವಿನ ಉಚಿತ ಚಿಕಿತ್ಸೆಗಾಗಿ ಸಂಸದನಾಗಿ ಮುಂದುವರೆಯುತ್ತೇನೆಂದ BJP ಸಂಸದ


