Homeಕರ್ನಾಟಕಜನವರಿ 1 ರಂದು ಭೀಮಾ ಕೊರೆಗಾಂವ್‌‌ ವಿಜಯೋತ್ಸವ ಆಚರಣೆ ಹಾಗೂ 'ಪ್ರತಿರೋಧ ಸಮಾವೇಶ'

ಜನವರಿ 1 ರಂದು ಭೀಮಾ ಕೊರೆಗಾಂವ್‌‌ ವಿಜಯೋತ್ಸವ ಆಚರಣೆ ಹಾಗೂ ‘ಪ್ರತಿರೋಧ ಸಮಾವೇಶ’

ಮೂವತ್ತು ಸಾವಿರ ಜಾತಿವಾದಿ ಪೇಶ್ವೆ ಸೈನಿಕರನ್ನು ಕೇವಲ ಐನೂರು ದಲಿತ ’ಮಹರ್‌’ ಸೈನಿಕರು ಸೇರಿಕೊಂಡು ಸೋಲಿಸಿದ ಯುದ್ದವಾಗಿದೆ ಭೀಮಾ ಕೊರೆಗಾಂವ್!

- Advertisement -
- Advertisement -

ಜಾತಿವಾದಿ ಪೇಶ್ವೆಗಳ ವಿರುದ್ದ ದಲಿತ ಮಹಾರ್‌ ಸೈನಿಕರು ನಡೆಸಿರುವ ಭೀಮಾ ಕೊರೆಗಾಂವ್ ಯುದ್ಧದ ವಿಜಯೋತ್ಸವದ ಅಂಗವಾಗಿ ಹಾಗೂ ಮಾನವ ಹಕ್ಕು ಹೋರಾಟಗಾರರ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನವರಿ 1 ರಂದು ’ಪ್ರತಿರೋಧ ಸಮಾವೇಶ’ ನಡೆಯಲಿದೆ.

ಭೀಮಾ ಕೊರೆಗಾಂವ್ ಹೋರಾಟ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮವು ಜನವರಿ 1 ರ ಬೆಳಿಗ್ಗೆ 10:30 ಕ್ಕೆ ಪ್ರಾರಂಭವಾಗಲಿದೆ. ಭೀಮಾ ಕೊರೆಗಾಂವ್ ಯುದ್ಧದ ವಿಜಯೋತ್ಸವ ಆಚರಣೆ, ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ವಿರೋಧಿಸಿ ’ಪ್ರತಿರೋಧ ಸಮಾವೇಶ’ ಕೂಡಾ ನಡೆಯಲಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದಲ್ಲಿ ತಮಟೆ, ನಗಾರಿ ವಾದನ, ಹಾಡುಗಾರಿಕೆ, ಕವಿಗೋಷ್ಟಿಯೂ ನಡೆಯಲಿದೆ.

ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!

2017 ರಂದು ಭೀಮಾ ಕೊರೆಗಾಂವ್‌ನ‌‌ಲ್ಲಿ ನಡೆದ ಎಲ್ಗಾರ್‌ ಪರಿಷತ್‌ನ ಭಾಗವಾಗಿದ್ದ, ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ಪಾಟಿಲ್ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇಡೀ ಕಾರ್ಯಕ್ರಮದ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.

ಭೀಮಾ ಕೊರೆಗಾಂವ್ ಯುದ್ದವು 1818 ರ ಜನವರಿ 1 ರಂದು ಮಹಾರಾಷ್ಟ್ರದ ಭೀಮಾ ಕೊರೆಗಾಂವ್‌ನಲ್ಲಿ ನಡೆಯಿತು. ಮೂವತ್ತು ಸಾವಿರ ಜಾತಿವಾದಿ ಪೇಶ್ವೆ ಸೈನಿಕರನ್ನು ಕೇವಲ ಐನೂರು ದಲಿತ ’ಮಹರ್‌’ ಸೈನಿಕರು ಸೇರಿಕೊಂಡು ಸೋಲಿಸಿದ ಯುದ್ದವಾಗಿದೆ ಇದು. ಭೀಮಾ ತೀರದಲ್ಲಿ ನಡೆದ ಈ ಯುದ್ದದ ಇತಿಹಾಸವನ್ನು ಮತ್ತೇ ಮುನ್ನಲೆಗೆ ತಂದವರು ಸಂವಿದಾನ ಶಿಲ್ಪಿ ಡಾ. ಬಿ.ಆ‌ರ್‌. ಅಂಬೇಡ್ಕರ್‌ ಆಗಿದ್ದಾರೆ. ಅವರು ಈ ಸ್ಥಳಕ್ಕೆ ತಾವು ಬದುಕಿರುವ ತನಕವು ಪ್ರತೀ ವರ್ಷ ಎಲ್ಲಿದ್ದರೂ ಭೇಟಿ ನೀಡಿ ವೀರ ಯೋಧರನ್ನು ಸ್ಮರಿಸುತ್ತಿದ್ದರು. ಭೀಮಾ ಕೊರೆಗಾಂವ್ ಹಾಗೂ ಪ್ರತಿರೋಧ ಸಮಾವೇಶದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

2017 ರಲ್ಲಿ ಭೀಮಾ ಕೊರೆಗಾಂವ್ ಯುದ್ದದ ನೂರನೇ ವರ್ಷದ ವಿಜಯೋತ್ಸವ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಬಲಪಂಥೀಯ ಗುಂಪೊಂದು ಗಲಭೆ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಆದರೆ ಸರ್ಕಾರವು ವಿಜಯೋತ್ಸವದ ಮುಂಚಿನ ದಿನ ’ಎಲ್ಗರ್‌ ಪರಿಷರ್‌‌’ ಸಮಾವೇಶದಲ್ಲಿ ಮಾಡಿದ ಭಾಷಣವೇ ಈ ಗಲಭೆಗೆ ಕಾರಣ ಎಂದು ಆರೋಪಿಸಿ ಸಮಾವೇಶದಲ್ಲಿ ಭಾಗವಹಿಸಿದ್ದ ಹೋರಾಟಗಾರರನ್ನು ಹೊಣೆಗಾರರನ್ನಾಗಿಸಿದೆ. ಈ ಪ್ರಕರಣದಲ್ಲಿ ಇದುವರೆಗೂ 16 ಜನರನ್ನು ಸರ್ಕಾರ ಬಂಧಿಸಿದೆ.

ಇದನ್ನೂ ಓದಿ: ಮಹರ್ ಸೈನಿಕರ ‘ಭೀಮಾ ಕೋರೆಗಾಂವ್’ ಹೋರಾಟ ನೆನಪಿಸುವ ಕನ್ನಡ ಹಾಡು 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...