- Advertisement -
- Advertisement -
ನ್ಯೂಸ್ in ನೂರುಪದ
-ಟೀಮ್‍ಗೌರಿ
ಕಳೆದ 2014ರ ಚುನಾವಣೆಯಲ್ಲಿ ಬೇಕಾಬಿಟ್ಟಿ ಸ್ಪರ್ಧಿಸಿದ್ದ ವಿನಯ ಕುಲಕರ್ಣಿ ಈ ಸಲ ಬಡಿದಾಡಿ ಟಿಕೆಟ್ ತಂದು ಪ್ರಹ್ಲಾದ ಜೋಶಿ ವಿರುದ್ಧ ಧಾರವಾಡದಲ್ಲಿ ಕಣಕ್ಕೆ ಇಳಿದಿದ್ದಾರೆ. ಹಾವೇರಿಯಲ್ಲಿ ಸಲೀಂ ಅಹ್ಮದ್ ಬದಲು ಕಣಕ್ಕಿಳಿದ ಡಿ.ಆರ್ ಪಾಟೀಲರು ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಕೊಪ್ಪಳದಲ್ಲಿ ಕರಡಿ ಸಂಗಣ್ಣರ ಮೇಲೆ ಬಿಜೆಪಿಗೇ ನಂಬಿಕೆಯಿಲ್ಲ. ರಾಯಚೂರು, ಕಲಬುರ್ಗಿ ಈ ಸಲವೂ ಕಾಂಗ್ರೆಸ್ ಮಡಿಲಿಗೆ ಮತ್ತೆ ಸೇರುವ ಸಾಧ್ಯತೆ ದಟ್ಟವಾಗಿವೆ.
ಬೀದರ್‍ನಲ್ಲಿ ಕಾಂಗ್ರೆಸ್‍ನ ಖಂಡ್ರೆ ಬಿಜೆಪಿಯ ಸಂಸದ ಖೂಬಾರಿಗೆ ಸವಾಲು ಒಡ್ಡಿ ಮುಂದಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಸಂಸದ ಗದ್ದಿಗೌಡರಿಗೆ ಕಾಂಗ್ರೆಸ್‍ನ ಜಿಪಂ ಸದಸ್ಯೆ ವೀಣಾ ಕಾಶಪ್ಪನವರ್ ನಡುಕ ಹುಟ್ಟಿಸಿದ್ದಾರೆ, ಇಲ್ಲಿ ಸಿದ್ದು ಆಟವೂ ಜೋರಾಗಿ ನಡೆಯಲಿದೆ.
ಈ ರೂಟ್‍ನಲ್ಲಿ ಕಲಬುರ್ಗಿ, ರಾಯಚೂರು ಉಳಿಸಿಕೊಂಡು, ಧಾರವಾಡ, ಹಾವೇರಿ, ಕೊಪ್ಪಳ, ಬೀದರ್, ಬಾಗಲಕೋಟೆ – 5 ಕ್ಷೇತ್ರಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ.


