ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ-ಹರಿಯಾಣ ಗಡಿಗಳಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದು, ಜನವರಿ 26ರ ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿಯನ್ನು ನಡೆಸಲಾಗುವುದು ಎಂದು ರೈತರು ಘೋಷಿಸಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದು, ಈಗ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಲುವಾಗಿ ಈ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಇದುವರೆಗೂ ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಅವುಗಳೆಲ್ಲಾ ವಿಫಲವಾಗಿವೆ. ಜನವರಿ 4 ರಂದು ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ. ಇಲ್ಲಿಯೂ ತಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ ದೇಶದಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ವಿದ್ಯುತ್ ಕಂಪನಿಯಿಂದ ಕಿರುಕುಳ: ಪ್ರಧಾನಿಗೆ ಪತ್ರ ಬರೆದು ಪ್ರಾಣತ್ಯಾಗ ಮಾಡಿದ ರೈತ
“ಜನವರಿ 23 ರಂದು ನಾವು ವಿವಿಧ ರಾಜ್ಯಗಳಲ್ಲಿನ ರಾಜ್ಯಪಾಲರ ಮನೆಗಳತ್ತ ಮೆರವಣಿಗೆ ನಡೆಸುತ್ತೇವೆ. ಮತ್ತು ‘ಟ್ರ್ಯಾಕ್ಟರ್ ಕಿಸಾನ್ ಪೆರೇಡ್’ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಹೇಳಿದ್ದಾರೆ” ಎಂಬುದಾಗಿ ಎಎನ್‌ಐ ವರದಿ ಮಾಡಿದೆ.
On 23rd January, we will hold marches towards Governors' Houses in different States, and 'tractor Kisan Parade' will be held on 26th January in Delhi: Krantikari Kisan Union President Darshan Pal#FarmLaws pic.twitter.com/y9h3oPmL0Z
— ANI (@ANI) January 2, 2021
ಇದನ್ನೂ ಓದಿ: ಡ್ರೈ ರನ್ ಎಂದರೇನು?: ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಮೂರು ಲೋಪಗಳು


