Homeಕರೋನಾ ತಲ್ಲಣಕೊರೊನಾ ವ್ಯಾಕ್ಸಿನೇಷನ್ ಡ್ರೈ ರನ್: ವದಂತಿಗಳಿಗೆ ಕಿವಿಗೊಡದಂತೆ ಆರೋಗ್ಯ ಸಚಿವ ಮನವಿ

ಕೊರೊನಾ ವ್ಯಾಕ್ಸಿನೇಷನ್ ಡ್ರೈ ರನ್: ವದಂತಿಗಳಿಗೆ ಕಿವಿಗೊಡದಂತೆ ಆರೋಗ್ಯ ಸಚಿವ ಮನವಿ

- Advertisement -
- Advertisement -

ಕೊರೊನಾ ವ್ಯಾಕ್ಸಿನೇಷನ್ ತಾಲೀಮು(ಡ್ರೈ ರನ್) ನಡೆಯುತ್ತಿರುವುದರಿಂದ ಯಾವುದೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಒಕ್ಕೂಟ ಸರ್ಕಾರದ ಆರೋಗ್ಯ ಸಚಿವ ಹರ್ಷ್‌ ವರ್ಧನ್ ಹೇಳಿದ್ದಾರೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ವ್ಯಾಕ್ಸಿನೇಷನ್ ತಾಲೀಮು ನಡೆಸಲು ಆಯ್ಕೆಯಾದ ದೆಹಲಿಯ ಮೂರು ಕೇಂದ್ರಗಳಲ್ಲಿ ಒಂದಾದ ಗುರು ತೇಜ್ ಬಹದ್ದೂರ್‌(GTB) ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, “ಪೋಲಿಯೊ ರೋಗನಿರೋಧಕ ಸಮಯದಲ್ಲಿ ಕೂಡಾ ವಿವಿಧ ರೀತಿಯಲ್ಲಿ ವದಂತಿಗಳು ಹರಡಿತ್ತು, ಆದರೆ ಜನರು ಲಸಿಕೆ ತೆಗೆದುಕೊಂಡಿದ್ದರಿಂದ ಭಾರತ ಈಗ ಪೋಲಿಯೊ ಮುಕ್ತವಾಗಿದೆ” ಎಂದು ಅವರು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ಡ್ರೈ ರನ್ ಎಂದರೇನು?: ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಮೂರು ಲೋಪಗಳು

 

ನಾಲ್ಕು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ತಾಲೀಮಿನ ನಂತರ ನೀಡಿದ ಹಲವು ಪ್ರತಿಕ್ರಿಯೆಗಳನ್ನು ವ್ಯಾಕ್ಸಿನೇಷನ್ ಮಾರ್ಗಸೂಚಿಗಳಲ್ಲಿ ಸೇರಿಸಲಾಗಿದೆ. ಅಲ್ಲದೆ ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ನಡೆಯುತ್ತಿರುವ ವ್ಯಾಕ್ಸಿನೇಷನ್ ತಾಲೀಮು ಈ ಹೊಸ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 15ರ ವರೆಗೆ ಫಾಸ್ಟ್ಯಾಗ್‌ ಗಡುವು ವಿಸ್ತರಣೆ

ಡಿಸೆಂಬರ್‌ 28 ಮತ್ತು 29 ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್‌ ಮತ್ತು ಪಂಜಾಬ್‌ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಿ ಈ ತಾಲೀಮು ನಡೆಸಲಾಗಿತ್ತು. ಇದೀಗ ಶನಿವಾರ ಭಾರತದಾದ್ಯಂತ ಈ ತಾಲೀಮು ನಡೆಸಲಾಗುತ್ತಿದೆ. ಜಗತ್ತಿನ್ಲಲೇ ಅತೀ ದೊಡ್ಡ ರೋಗ ನಿರೋಧಕ ಪ್ರಕ್ರಿಯೆ ಚಾಲನೆಗೆ ಭಾರತವು ಸಜ್ಜಾಗುತ್ತಿರುವುದರಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ.

ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...