Homeಮುಖಪುಟವಿದ್ಯುತ್ ಕಂಪನಿಯಿಂದ ಕಿರುಕುಳ: ಪ್ರಧಾನಿಗೆ ಪತ್ರ ಬರೆದು ಪ್ರಾಣತ್ಯಾಗ ಮಾಡಿದ ರೈತ

ವಿದ್ಯುತ್ ಕಂಪನಿಯಿಂದ ಕಿರುಕುಳ: ಪ್ರಧಾನಿಗೆ ಪತ್ರ ಬರೆದು ಪ್ರಾಣತ್ಯಾಗ ಮಾಡಿದ ರೈತ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಾಕಿ ಉಳಿಸಲಾಗಿದ್ದ 87,000 ರೂ. ವಸೂಲಿಗಾಗಿ ವಿದ್ಯುತ್ ಸರಬರಾಜು ಕಂಪೆನಿ (ಡಿಸ್ಕಾಂ) ಮುನೇಂದ್ರ ರಜಪೂತ್‌ಗೆ ಸೇರಿರುವ ಹಿಟ್ಟಿನ ಗಿರಣಿ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿತ್ತು.

- Advertisement -
- Advertisement -

ವಿದ್ಯುತ್ ಸರಬರಾಜು ಕಂಪೆನಿಯ ಕಿರುಕುಳ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುನೇಂದ್ರ ರಜಪೂತ್ ಡೆತ್ ನೋಟ್ ಬರೆದಿಟ್ಟಿದ್ದು, “ತನ್ನ ಮೃತದೇಹವನ್ನು ಸರ್ಕಾರಕ್ಕೆ ಹಸ್ತಾಂತರಿಸಿ. ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಸಾಲವನ್ನು ಮರುಪಾವತಿಸಿ” ಎಂದು ಪ್ರಧಾನಿ ಮೋದಿಯವರಲ್ಲಿ ವಿನಂತಿಸಿದ್ದಾರೆ.

“ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಾಕಿ ಉಳಿಸಲಾಗಿದ್ದ 87,000 ರೂ. ವಸೂಲಿಗಾಗಿ ವಿದ್ಯುತ್ ಸರಬರಾಜು ಕಂಪೆನಿ (ಡಿಸ್ಕಾಂ) ಮುನೇಂದ್ರ ರಜಪೂತ್‌ಗೆ ಸೇರಿರುವ ಹಿಟ್ಟಿನ ಗಿರಣಿ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿತ್ತು” ಎಂದು ಮೃತನ ಕುಟುಂಬ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಪದಕ ವಿಜೇತ ಐಪಿಎಸ್ ಡಿ. ರೂಪಾ: 20 ವರ್ಷದಲ್ಲಿ 40 ಸಲ ವರ್ಗಾ!

ತನ್ನ ಡೆತ್‌ ನೋಟ್‌ನಲ್ಲಿ, “ದೊಡ್ಡ ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಗರಣಗಳನ್ನು ನಡೆಸಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳವುದಿಲ್ಲ. ಅವರು ಪಡೆದ ಸಾಲದ ಮರು ಪಾವತಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಅಥವಾ ಸಾಲ ಮನ್ನಾ ಮಾಡಲಾಗುತ್ತದೆ. ಆದರೆ, ಬಡವನೊಬ್ಬ ಸಣ್ಣ ಮೊತ್ತದ ಸಾಲ ಪಡೆದರೆ, ಸಾಲ ತೀರಿಸಲು ಏಕೆ ಸಾಧ್ಯವಾಗಿಲ್ಲ ಎಂದು ಕೂಡ ಕೇಳುವುದಿಲ್ಲ. ಅದರ ಬದಲಿಗೆ ಸಾರ್ವಜನಿಕವಾಗಿ ಅವರಿಗೆ ಅವಮಾನ ಮಾಡಲಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ನಾವು ಬೆಳೆದಿದ್ದ ಬೆಳೆ ಹಾಳಾಗಿತ್ತು. ಇದರಿಂದಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ. ನಂತರ ಡಿಸ್ಕಾಂ 87,000 ವಸೂಲಿ ಮಾಡಲು ನೋಟಿಸ್ ನೀಡಿತ್ತು” ಎಂದು ರೈತನ ಕುಟುಂಬ ಎನ್‌ಡಿಟಿವಿಗೆ ತಿಳಿಸಿದೆ.


ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ವೀಸಾ ನಿರ್ಬಂಧಗಳನ್ನು ಮಾರ್ಚ್‌ವರೆಗೆ ವಿಸ್ತರಿಸಿದ ಟ್ರಂಪ್: ಜೋ ಬೈಡನ್ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...