ಇಂದು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯಲ್ಪಡುವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ. 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್‌ನಲ್ಲಿ ಹುಟ್ಟಿದ ಸಾವಿತ್ರಿ ಬಾಯಿಯವರು ಎರಡು ಶತಮಾನಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ. ಗೆಳತಿ ಫಾತಿಮಾ ಶೇಕ್‌ರೊಂದಿಗೆ ಸೇರಿ ಬಾಲಕಿಯರ ಸಾಕ್ಷರತೆಗೆ ಅವಿಸ್ಮರಣೀಯ ಕೊಡುಗೆ ನೀಡಿದ ಸಾವಿತ್ರಿ ಬಾಯಿ ಅವರ 190 ನೇ ಜನ್ಮ ದಿನ ಇಂದು. ಈ ಹಿನ್ನಲೆಯಲ್ಲಿ ಅವರ ಜನ್ಮ ದಿನಕ್ಕೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್, “ಭಾರತದ ಮೊದಲ ಶಿಕ್ಷಕಿ, ಮನುವಾದದ ವಿರುದ್ಧ ಹೋರಾಡಿದ ಕ್ರಾಂತಿಜ್ಯೋತಿ ತಾಯಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯಂದು ಅವರಿಗೆ ಕೋಟಿ ನಮನಗಳು. ಜೈ ಸಾವಿತ್ರಿ, ಜೈ ಭೀಮ್” ಎಂದು ಶುಭಾಶಯ ಕೋರಿದ್ದಾರೆ.
भारत की प्रथम शिक्षिका, मनुवाद के खिलाफ ताउम्र संघर्षरत रहीं क्रान्तिज्योति माता सावित्री बाई फुले जी की जयंती पर उन्हें कोटि – कोटि नमन। जय सावित्री, जय भीम। pic.twitter.com/l3SvTtqKU8
— Chandra Shekhar Aazad (@BhimArmyChief) January 3, 2021
ಇದನ್ನೂ ಓದಿ: ಪ್ರತಿವರ್ಷ ಸಾವಿತ್ರಿ ಬಾಯಿ ಫುಲೆ ಉತ್ಸವ: ಮಹಾರಾಷ್ಟ್ರ ಸರ್ಕಾರ ಘೋಷಣೆ
ಖ್ಯಾತ ನಟಿ ತಾಪ್ಸಿ ಪನ್ನು, “ಹೆಣ್ಣೊಬ್ಬಳು ಕಲಿತರೆ, ಕುಟುಂಬವೊಂದು ಕಲಿತಂತೆ; ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ, ನೀವು ಭವಿಷ್ಯಕ್ಕೆ ಶಿಕ್ಷಣ ನೀಡಿದಂತೆ” ಎಂದು ಟ್ವೀಟ್ ಮಾಡಿದ್ದಾರೆ.
Educate a Woman and You Educate a Family; Educate a Girl and You Educate the Future! #SavitriBaiPhuleJayanti ????
— taapsee pannu (@taapsee) January 3, 2021
ಊನಾ ಚಳುವಳಿಯ ನಾಯಕ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, “ಇಂದು ತಾಯಿ ಸಾವಿತ್ರಿಬಾಯಿ ಫುಲೆ ಜನ್ಮದಿನ. ಬಾಲಕಿಯರಿಗಾಗಿ ಮೊದಲ ಶಾಲೆಯನ್ನು ತೆರೆದ ಭಾರತದ ಮೊದಲ ಮಹಿಳಾ ಶಿಕ್ಷಕಿ. ಸಾವಿತ್ರಿ ಅಮ್ಮನಿಗೆ ನನ್ನ ಶುಭಾಶಯಗಳು. ಹಾಗೆಯೇ ಸುಧಾ, ಗುಲ್ಫಿಶಾ, ದೇವಂಗಾನ ಮತ್ತು ಇಂದು ಜೈಲಿನಲ್ಲಿದ್ದ ಎಲ್ಲ ಮಹಿಳೆಯರಿಗೆ ನನ್ನ ವಂದನೆ. ಯಾಕೆಂದರೆ ಅವರು ಕೂಡ ಸಾವಿತ್ರಿ ಬಾಯಿ ಅವರಂತೆಯೆ ಅನ್ಯಾಯದ ವಿರುದ್ಧ ಹೋರಾಡಿದವರು” ಎಂದು ಬರೆದಿದ್ದಾರೆ.
आज माता सावित्रीबाई फुले जयंती है। भारत की पहली महिला शिक्षिका जिसने लड़कियों के लिए पहला स्कूल खोला। सावित्रीमाई को मेरा शत शत नमन, और साथ ही साथ सुधा, गुलफिशा, देवांगना और उन सभी औरतों को मेरा सलाम, जो आज जेल में कैद हैं क्यूंकि वे भी सावित्रीबाई की तरह अन्याय के ख़िलाफ़ लड़ी। pic.twitter.com/K90BRrggPj
— Jignesh Mevani (@jigneshmevani80) January 3, 2021
ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಾವಿತ್ರಿ ಬಾಯಿ ಅವರ ಚಿತ್ರಕ್ಕೆ ನಮನ ಸಲ್ಲಿಸಿದರು.
क्रांतीज्योती सावित्रीबाई फुले यांना जयंतीनिमित्त मुख्यमंत्री उद्धव बाळासाहेब ठाकरे यांनी विनम्र अभिवादन केले.
•
CM Uddhav Balasaheb Thackeray paid humble tributes to the Krantijyoti Savitribai Phule on her birth anniversary. pic.twitter.com/TSDyfSzVDc— Office of Uddhav Thackeray (@OfficeofUT) January 3, 2021
ಇತಿಹಾಸಕಾರ ಇರ್ಫಾನ್ ಹಬೀಬ್, “ಸಾವಿತ್ರಿ ಬಾಯಿ ಮಹಿಳೆಯರಿಗೆ ಮತ್ತು ನಮ್ಮ ಸಮಾಜದಿಂದ ಬಹಿಷ್ಕಾರಕ್ಕೊಳಗಾದವರಿಗೆ ಶಿಕ್ಷಣವನ್ನು ಒದಗಿಸಿದವರಲ್ಲಿ ಮೊದಲಿಗರು. ಸಮಾನತೆಗಾಗಿ ಹೋರಾಡಿದ ತನ್ನ ಪತಿ ಜ್ಯೋತಿಬಾ ಫುಲೆಗೆ ಸಹಾಯ ಮಾಡಿದ್ದರು. ಸಾವಿತ್ರಿ ಬಾಯಿ ಫುಲೆ ಇಂದು 1831 ರಲ್ಲಿ ಜನಿಸಿದರು. ಭಾರತದ ಮೊದಲ ಮಹಿಳಾ ಶಿಕ್ಷಕರಲ್ಲಿ ಒಬ್ಬರು, ಜೀವನದುದ್ದಕ್ಕೂ ಶಿಕ್ಷಣಕ್ಕೆ ಬದ್ಧರಾಗಿದ್ದರು. ಅವರು ಸಮರ್ಥ ಬರಹಗಾರ ಮತ್ತು ಕವಯಿತ್ರಿಯೂ ಆಗಿದ್ದರು” ಎಂದು ಸಾವಿತ್ರಿ ಬಾಯಿಯನ್ನು ನೆನಪಿಸಿಕೊಂಡಿದ್ದಾರೆ.
Savitribai was a trailblazer for providing education to women and to the ostracised sections of our society. She helped her husband Jyotiba Phule to strengthen his Satyashodhak Samaj, which fought for equality for all classes. #SavitribaiPhule
— S lrfan Habib (@irfhabib) January 3, 2021
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಪ್ರಮುಖ ಸಾಮಾಜಿಕ ಸುಧಾರಕಿ ಮತ್ತು ಶಿಕ್ಷಣ ತಜ್ಞರಾದ ಸಾವಿತ್ರಿ ಬಾಯಿ ಫುಲೆ ಅವರಿಗೆ ಅವರ ಜನ್ಮ ದಿನದಂದು ನನ್ನ ವಿನಮ್ರ ಗೌರವ. ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟ ಅವರು, ಮಹಿಳೆಯರ ಜೀವನ ಮತ್ತು ಹಕ್ಕುಗಳಿಗಾಗಿ ತಮ್ಮ ಜೀವನಪರ್ಯಂತ ಕೆಲಸ ಮಾಡಿದರು. ಮಹಿಳೆಯರ ಉನ್ನತಿಗಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದು ಟ್ವೀಟ್ಟರ್‌ನಲ್ಲಿ ಬರೆದಿದ್ದಾರೆ.
Humble tributes to #SavitriBaiPhule ji, prominent social reformer & educationist on her birth anniversary. Regarded as the first female teacher of India, she worked all her life for women’s education & rights. Her contribution to upliftment of women can never be forgotten.
— Ashok Gehlot (@ashokgehlot51) January 3, 2021
ಇದನ್ನೂ ಓದಿ: ಸಾವಿತ್ರಿ ಬಾಯಿ ಫುಲೆ ಸ್ಥಾಪಿಸಿದ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯ ಸ್ಥಿತಿ ಹೇಗಿದೆ ಗೊತ್ತಾ?
ಆಂಧ್ರಪ್ರದೇಶದ ವಿಪಕ್ಷ ನಾಯಕ ಚಂದ್ರಬಾಬು ನಾಯ್ದು, “ಕ್ರಾಂತಿಕಾರಿ ಸಾವಿತ್ರಿ ಬಾಯಿ ಅವರ ಜನ್ಮ ದಿನದಂದು ಅವರಿಗೆ ನನ್ನ ನಮನ. ಭಾರತದಲ್ಲಿ ಮಹಿಳಾ ಸಬಲೀಕರಣದ ಪ್ರವರ್ತಕಿಯಾಗಿದ್ದ ಅವರು ದೂರದೃಷ್ಟಿಯಿದ್ದ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಅವರ ಪರಂಪರೆ ನಮಗೆ ಸ್ಫೂರ್ತಿ ನೀಡಲಿ” ಎಂದು ಬರೆದಿದ್ದಾರೆ.
Tributes to the revolutionary icon, Savitribai Phule on her birth anniversary today. A pioneer of women empowerment in India, she was a path-breaking visionary & activist who was centuries ahead of her time. May her legacy continue to inspire us. #SavitribaiPhule pic.twitter.com/18iLuUMhbN
— N Chandrababu Naidu #StayHomeSaveLives (@ncbn) January 3, 2021
Remembering #SavitribaiPhule India's first lady teacher …who fought against all social evils just to uplift women .
Girls never let her down . Be brave ??#सावित्रीबाई_फुले_जयंती #प्रथम_महिला_शिक्षिका_सावित्रीबाई_फुले pic.twitter.com/4rSeudFQEe— sid sayings ? (@SiddhiTarmale) January 3, 2021
ಇದನ್ನೂ ಓದಿ: “ಪಿಂಜ್ರಾ ತೋಡ್ (ಪಂಜರ ಮುರಿ)” ಎಂಬ ಪುಟ್ಟ ಆಂದೋಲನಕ್ಕೆ ಬೆದರಿತೆ ಕೇಂದ್ರ?


