Homeಮುಖಪುಟಸಾವಿತ್ರಿ ಬಾಯಿ ಫುಲೆ ಸ್ಥಾಪಿಸಿದ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯ ಸ್ಥಿತಿ ಹೇಗಿದೆ ಗೊತ್ತಾ?

ಸಾವಿತ್ರಿ ಬಾಯಿ ಫುಲೆ ಸ್ಥಾಪಿಸಿದ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯ ಸ್ಥಿತಿ ಹೇಗಿದೆ ಗೊತ್ತಾ?

ಮಹಿಳೆಯರ ಸಾಧನೆಗೆ ಮುನ್ನುಡಿ ಹಾಡಿದ್ದ, ಭಾರತದ ಪ್ರಪ್ರಥಮ ಹೆಣ್ಣುಮಕ್ಕಳ ಶಾಲೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಯಾವ ಸ್ಥಿತಿಗೆ ತಲುಪಿದೆ ಎನ್ನುವುದನ್ನು ನೋಡಿದರೆ, ನಿಜಕ್ಕೂ ಭಾರತೀಯರಾದ ನಮಗೆ ಅವಮಾನವಾಗುತ್ತದೆ. 

- Advertisement -
- Advertisement -

ವೈದಿಕಶಾಹಿಯ ಕಬಂದಬಾಹುವಿಗೆ ಸಿಲುಕಿದ್ದ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಶಿಕ್ಷಣದ ಮೂಲಕ ಬೆಳಕಿಗೆ ತಂದು ಇತಿಹಾಸ ಸೃಷ್ಟಿಸಿದ್ದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನ ಇಂದು. 1848 ಜನವರಿ 1 ರಂದು ಮಹಾರಾ‍ಷ್ಟ್ರದ ಭೀಡೆ ವಾಡದಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡಲು ಪ್ರಾರಂಭಿಸಿದ್ದರು. ಭಾರತದ ಇಂದಿನ ಹೆಣ್ಣುಮಕ್ಕಳು ಏನೇ ಸಾಧನೆ ಮಾಡಿದ್ದರೂ ಅವುಗಳ ಹಿಂದೆ ಸಾವಿತ್ರಿಬಾಯಿ ಫುಲೆಯವರ ತ್ಯಾಗ ಮತ್ತು ಆಶಯವಿದೆ. ಅಂದು ಇವರು ನೀಡಿದ ಶಿಕ್ಷಣದ ನೆರಳಿನಳಿಲ್ಲಿ ಬೆಳೆದ ಭಾರತದ ಹೆಣ್ಣು ಜೀವಗಳು ಅಡುಗೆ ಮನೆಯಿಂದ ಹೊರಬಂದು, ಇಂದು ಗಗನಕ್ಕೆ ಹಾರುವವರೆಗೆ ಸಾಧನೆ ಮಾಡಿದ್ದಾರೆ.

ಇಂತಹ ಸಾಧನೆಗೆ ಮುನ್ನುಡಿ ಹಾಡಿದ್ದ, ಭಾರತದ ಪ್ರಪ್ರಥಮ ಹೆಣ್ಣುಮಕ್ಕಳ ಶಾಲೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಯಾವ ಸ್ಥಿತಿಗೆ ತಲುಪಿದೆ ಎನ್ನುವುದನ್ನು ನೋಡಿದರೆ, ನಿಜಕ್ಕೂ ಭಾರತೀಯರಾದ ನಮಗೆ ಅವಮಾನವಾಗುತ್ತದೆ.

ಇದನ್ನೂ ಓದಿ: ಪ್ರತಿವರ್ಷ ಸಾವಿತ್ರಿ ಬಾಯಿ ಫುಲೆ ಉತ್ಸವ: ಮಹಾರಾಷ್ಟ್ರ ಸರ್ಕಾರ ಘೋಷಣೆ

ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ಈ ಶಾಲೆಯನ್ನು ಆರಂಭಿಸಲು ಫುಲೆ ದಂಪತಿಗಳು ಮಾಡಿದ ತ್ಯಾಗಕ್ಕೆ ಇಂದಿನ ನವ ಭಾರತ ನೀಡುತ್ತಿರುವ ಉಡುಗೊರೆ ಇದು. ಹೆಣ್ಣುಮಕ್ಕಳು ಮನೆಯಿಂದಲೇ ಹೊರಗೆ ಹೋಗಬಾರದು ಎಂದು ಕಟ್ಟಳೆ ವಿಧಿಸಿದ್ದ ಕಾಲದಲ್ಲಿ ತಾವೂ ಶಿಕ್ಷಣ ಪಡೆಯುವುದರೊಂದಿಗೆ ತಮ್ಮ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂದು ಆಶಿಸಿದ್ದರು ಫುಲೆ ದಂಪತಿಗಳು. ಆದರೆ, ಭಾರತದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಆರಂಭವಾದ ಶಾಲೆಯನ್ನು ಸಂರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು, ನಮ್ಮನ್ನಾಳುವ ಸರ್ಕಾರಗಳ ವೈದಿಕಶಾಹಿ ಧೋರಣೆಯನ್ನು ಎತ್ತಿ ತೋರಿಸುತ್ತವೆ.

ಪರಂಪರೆ ಎಂದರೆ ಕೇವಲ ಬ್ರಾಹ್ಮಣರ, ಸನಾತನದ ಪರಂಪರೆ ಎಂದು ಭಾವಿಸಿರುವ ಸನಾತನಿಗಳ ಪರಂಪರೆಯ ಪಟ್ಟಿಗೆ ಈ ಶಾಲೆ ಸೇರುವುದಿಲ್ಲ. ಮಂದಿರ ಕಟ್ಟಲು ಇರುವ ಉತ್ಸಾಹ, ಶಾಲೆಯನ್ನು ಸಂರಕ್ಷಿಸಲು ಬರುವುದಿಲ್ಲ. ಜಾತಿ-ಮಠಗಳಿಗೆ ನೀಡುವ ಅನುದಾನ ಈ ಶಾಲೆಯನ್ನು ಉದ್ಧಾರ ಮಾಡಲು ನೀಡುವುದಿಲ್ಲ. ಸರ್ಕಾರದ ಜಾಹೀರಾತುಗಳಿಗೆ ಖರ್ಚು ಮಾಡುವ ಹಣ, ಈ ಶಾಲೆಯ ಅಭಿವೃದ್ಧಿಗೆ ದೊರೆಯುವುದಿಲ್ಲ.

ಇದನ್ನೂ ಓದಿ: ನನ್ನ ಮಗ ರಾಜಾ ವೇಮುಲಾ ವಕೀಲನಾಗಿದ್ದು, ಜನರಿಗಾಗಿ ಹೋರಾಡಲಿದ್ದಾನೆ: ರಾಧಿಕ ವೇಮುಲಾ

ಮಹಿಳೆ ಎರಡನೇ ದರ್ಜೆಯ ಪ್ರಜೆ ಎನ್ನುವ ಹಿಂದೂ ಮತ, ದಲಿತರನ್ನು, ದಲಿತ ಮಹಿಳೆಯರನ್ನು ಮನುಷ್ಯರು ಎಂದೇ ಪರಿಗಣಿಸಿರಲಿಲ್ಲ. ಇಂತಹವರಿಗೆ ಶಿಕ್ಷಣ ನೀಡುವ ಮೂಲಕ ಮುನ್ನೆಲೆಗೆ ತರಬೇಕು ಎನ್ನುವ ಕ್ರಾಂತಿಕಾರಿ ನಿರ್ಧಾರದಿಂದ ಆರಂಭವಾದ ಶಾಲೆಯನ್ನು ರಕ್ಷಿಸಲು ಈ ಸನಾತನವಾದಿಗಳು ಹೇಗೆ ಮನಸ್ಸು ಮಾಡುತ್ತಾರೆ. ವಿಪರ್ಯಾಸವೆಂದರೆ ಇಂದಿನ ನವಬ್ರಾಹ್ಮಣವಾದಿಗಳಾಗಿ ಮಾರ್ಪಾಡಾಗಿರುವ ದಲಿತ ನಾಯಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಆದರೆ ಪ್ರಜ್ಞಾವಂತರು ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆ. ಈ ಮೂಲಕ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಿದೆ.


ಇದನ್ನೂ ಓದಿ: “ಪಿಂಜ್ರಾ ತೋಡ್ (ಪಂಜರ ಮುರಿ)” ಎಂಬ ಪುಟ್ಟ ಆಂದೋಲನಕ್ಕೆ ಬೆದರಿತೆ ಕೇಂದ್ರ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...