Homeಮುಖಪುಟಎಡಪಕ್ಷಗಳ ವಿರುದ್ಧ ಮಾತಾಡುವುದಿಲ್ಲ; ಐಕ್ಯತೆಯ ಸಂದೇಶ ಸಾರಲು ಬಂದಿದ್ದೇನೆ – ರಾಹುಲ್‍ಗಾಂಧಿ

ಎಡಪಕ್ಷಗಳ ವಿರುದ್ಧ ಮಾತಾಡುವುದಿಲ್ಲ; ಐಕ್ಯತೆಯ ಸಂದೇಶ ಸಾರಲು ಬಂದಿದ್ದೇನೆ – ರಾಹುಲ್‍ಗಾಂಧಿ

- Advertisement -
- Advertisement -

ನಿನ್ನೆ ಕೇರಳದ ವಯನಾಡ್‍ನಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್‍ಗಾಂಧಿ ಹೇಳಿದ ಮಾತಿದು, ‘ನನಗೆ ಗೊತ್ತು, ಸಿಪಿಎಂ ನನ್ನ ಮೇಲೆ ವಾಗ್ದಾಳಿ ನಡೆಸಬೇಕಾಗುತ್ತದೆ. ಆದರೆ ನಾನು ಅವರ ವಿರುದ್ಧ ಒಂದು ಒಂದು ಪದವನ್ನೂ ಆಡುವುದಿಲ್ಲ’. ಕೇರಳದಲ್ಲಿ ಸ್ಪರ್ಧಿಸುವ ತೀರ್ಮಾನ ಘೋಷಣೆ ಮಾಡಿದ ನಂತರ ಎಡಪಕ್ಷಗಳು ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ನಾಯಕ ರಾಹುಲ್‍ರನ್ನು ಕಟುವಾಗಿ ಟೀಕಿಸಿದ್ದರು. ಆದರೆ, ರಾಹುಲ್‍ರ ಈ ಘೋಷಣೆ ಆಶ್ಚರ್ಯ ಹುಟ್ಟಿಸಿದೆ.
ತಾನು ಕೇರಳದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದರ ಉದ್ದೇಶದ ಕುರಿತು ರಾಹುಲ್ ಹೀಗೆ ಹೇಳಿದರು. ‘ಕೇರಳವಿರಲಿ, ದಕ್ಷಿಣ (ಭಾರತ)ವಿರಲಿ, ಈಶಾನ್ಯ ರಾಜ್ಯಗಳಿರಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯ ಮೇಲೆ ಬಿಜೆಪಿ ಹಾಗೂ ಆರೆಸ್ಸೆಸ್ ದಾಳಿ ನಡೆಸುತ್ತವೆ. ಆದರೆ, ದಕ್ಷಿಣದಲ್ಲಿ ಸ್ಪರ್ಧಿಸುವ ಮೂಲಕ ನಾನು ಇಡೀ ದೇಶ ಒಂದು ಎಂಬ ಸಂದೇಶವನ್ನು ಕೊಡಲು ಬಯಸಿದ್ದೇನೆ’.
ದಕ್ಷಿಣ ಭಾರತದಲ್ಲಿ ಮೋದಿ ಜನಪ್ರಿಯರಲ್ಲ  ಮತ್ತು ತಮಿಳುನಾಡಿನಲ್ಲಿ ಮೋದಿಯ ಪರ ಕೇವಲ ಶೇ.2 ಮತ್ತು ಕೇರಳದಲ್ಲಿ ಶೇ.7ರಷ್ಟು ಮಾತ್ರ ಒಲವು ಇದೆ (ಸಿ-ವೋಟರ್ ಸಮೀಕ್ಷೆಯ ಪ್ರಕಾರ) ಎಂಬ ಹಿನ್ನೆಲೆಯಲ್ಲಿ ರಾಹುಲ್‍ರ ಈ ನಡೆ ಕುತೂಹಲ ಮೂಡಿಸಿದೆ.
ಕಳೆದ ಒಂದು ವರ್ಷದಲ್ಲಿ ಮೋದಿಯವರು ತಮಿಳುನಾಡಿಗೆ ಹೋದ ಅಷ್ಟೂ ಸಾರಿ #ಗೋ ಬ್ಯಾಕ್ ಮೋದಿ ಹ್ಯಾಷ್‍ಟ್ಯಾಗ್ ಟ್ರೆಂಡಿಂಗ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.
ವಯನಾಡು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಜಂಟಿ ಗಡಿಯಲ್ಲಿ ಬರುತ್ತದಾದರೂ, ಈ ಸ್ಪರ್ಧೆಯ ಪರಿಣಾಮ ಉಳಿದ ರಾಜ್ಯಗಳಲ್ಲಿ ಇರುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಇದೀಗ ರಾಹುಲ್‍ಗಾಂಧಿಯ ಈ ಸಂದೇಶವು ಸ್ಥಳೀಯ ಭಾವನೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...