ಇಲ್ಲಿ ಮೋದಿಗೆ ವ್ಯಂಗ್ಯ ಮಾಡಿದ್ದೇವೆಯೇ ಹೊರತು, ಇಂದಿಗೂ ವಿದ್ಯುತ್ ಕಾಣದ ಆ ಹಳ್ಳಿಯ ಜನರಿಗಲ್ಲ.
ಪ್ರಧಾನಿ ಆಗಾಗ ಟ್ವೀಟ್ ಮಾಡುತ್ತಲೇ ಇರುತ್ತಾರೆ: ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ತಲುಪಿಸಿದ್ದೇವೆ ಎಂದು. ಕಳೆದ ವರ್ಷ ಟ್ವೀಟ್ ಮಾಡಿದ್ದ ಅವರು, ಮಣಿಪುರದ ಲಿಸಂಗ್ (Leisang) ಗ್ರಾಮದ ವಿದ್ಯುದೀಕರಣದೊಂದಿಗೆ ಇಡೀ ಭಾರತವೇ ವಿದ್ಯುದೀಕರಗೊಂಡಿತು ಎಂದಿದ್ದರು.
ಯುಪಿಎ ಅವಧಿಯಲ್ಲಿ ಆದಷ್ಟು ಹಳ್ಳಿಗಳ ವಿದ್ಯುದೀಕರಣ ಆಗದೇ ಇದ್ದರೂ, ತಮ್ಮ ಅವಧಿಯಲ್ಲಿ ದೇಶಕ್ಕೆಲ್ಲ ಕರೆಂಟು ಕೊಟ್ಟೆವು ಎಂದು ಈ ಸರ್ಕಾರ ಹೇಳುತ್ತ ಬಂದಿದೆ. ಇವತ್ತಿಗೂ ಒಂದು ಹಳ್ಳಿ ಕರೆಂಟೇ ಕಂಡಿಲ್ಲವೆಂದರೆ ಎಲ್ಲ ಸರ್ಕಾರಗಳೂ, ಈ ಪ್ರಜಾಪ್ರಭುತ್ವ ವ್ಯವಸ್ಥೆಯೂ ಅದರ ಹೊಣೆ ಹೊರಲೇಬೇಕು.
ಮೋದಿ ಘೋಷಣೆ ನಂತರ ಮಾಧ್ಯಮಗಳೂ ಹಾಗೇ ಬರೆದವು. ಆದರೆ ಈ ಹಳ್ಳಿ ಜನ ಇವತ್ತಿಗೂ ಕರೆಂಟನ್ನೇ ಕಂಡಿಲ್ಲ. ದಿ. ವೈರ್‌ನ ರಿಯಾಲಿಟಿ ಚೆಕ್‌ನಲ್ಲಿ ಅಲ್ಲಿನ ಗ್ರಾಮಸ್ಥರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ಅಲ್ಲಿ ಈಗಲೂ ರಾತ್ರಿ ಕಂದಿಲು ಮತ್ತು ಮೋಬತ್ತಿಗಳೇ ಬೆಳಕಿನ ಮೂಲ. ಸೀಮೆಎಣ್ಣೆಯೇ ಅವರ ಬೆಳಕಿನ ಇಂಧನ. ಪಂಪ್‌ಸೆಟ್ ಓಡುವುದೂ ಸೀಮೆಎಣ್ಣೆಯಲ್ಲೇ.
ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:


