ಪ್ರಖ್ಯಾತ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘ ಸದ್ಗುರು ಅಲಿಯಾಸ್ ವಾಸುದೇವ ಜಗ್ಗಿ ಎಂಬ ಸ್ವಘೋಷಿತ ಆಧ್ಯಾತ್ಮಿಯ ವಿರುದ್ಧ ತಮ್ಮ ಪ್ತಿಭಟನೆಯನ್ನು ದಾಖಲಿಸಿದ್ದಾರೆ ಎಂದು ದಿ ವೈರ್ ಪೋರ್ಟಲ್ ವರದಿ ಮಾಡಿದೆ.
ಇತ್ತೀಚೆಗೆ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ‘ಯುಥ್ ಅ್ಯಂಡ್ ಟ್ರುಥ್’ ವಿಷಯದ ಮೇಲೆ ಸದ್ಗುರು ಉಪನ್ಯಾಸವಿತ್ತು. ಉಪನ್ಯಾಸದ ನಂತರ ಅಲ್ಲಿನ ಮೂವರು ವಿದ್ಯಾರ್ಥಿಗಳ ಜೊತೆಗೆ ಚರ್ಚಿಸುವಾಗ, ‘ಜಗ್ಗಿ’ ಸದ್ಗುರು ಬಿಲಾಲ್ ಬಿನ್ ಸಾಖಿಬ್ ಎಂಬ ವಿದ್ಯಾರ್ಥಿಯನ್ನು ‘ತಾಲಿಬಾನಿ’ ಎಂದು ಕರೆದಿದ್ದರು.
ಅಲ್ಲಿನ ವಿದ್ಯಾರ್ಥಿ ಸಂಘವು ಈ ಹೇಳಿಕೆ ಕುರಿತು ಜಗ್ಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ, ‘ಇಸ್ಲಾಮಿಫೋಬಿಯಾ’ ಎಂಬ ಕಪೋಕಲ್ಪಿತ ಗುಮ್ಮವನ್ನು ಅಧಿಕೃತಗೊಳಿಸುವ ಹುನ್ನಾರ ಇದು’ ಎಂದು ಕಿಡಿ ಕಾರಿದೆ.
‘ನಾನು ಸುಮ್ಮನೇ ಜೋಕ್ ಮಾಡ್ತಾ ಇದ್ದೆ. ಅರೇಬಿಕ್‍ನಲ್ಲಿ ತಾಲಿಬಾನಿ ಎಂದರೆ ಉತ್ಕಟ ವಿದ್ಯಾರ್ಥಿ. ಆ ಅರ್ಥದಲ್ಲಿ ಮಾತಾಡಿದ್ದೆ’ ಎಂದೆಲ್ಲ ಜಗ್ಗಿ ಸಬೂಬು ನೀಡಿದ್ದಾರೆ. ಆದರೆ ಅಲ್ಲಿನ ವಿದ್ಯಾರ್ಥಿಗಳು ಕ್ಷಮಾಪಣೆಗೆ ಒತ್ತಾಯಿಸಿದ್ದಾರೆ ಎಂದು ವೈರ್ ಪೋರ್ಟಲ್ ವಿವರಿಸಿದೆ.


