ಏನಾಯ್ತು ನಿಮ್ಮ ಭರವಸೆ?
ಪ್ರಧಾನಿ ಮೋದಿ, ಗಂಗಾ ನದಿ ಪುನರುಜ್ಜೀವನಗೊಳಿಸುವ ನಿಮ್ಮ ಭರವಸೆ ಏನಾಯ್ತು?
ಪ್ರಧಾನಿ ಮೋದಿ ಈಗ ಮತ್ತೆ ವಾರಣಾಸಿಯಲ್ಲಿ ಮರುಆಯ್ಕೆ ಬಯಸಿದ್ದಾರೆ. 2014ರಲ್ಲಿ ಗಂಗಾ ಸ್ವಚ್ಛಗೊಳಿಸುವ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಚುನಾವಣೆ ಪ್ರಚಾರ ಮತ್ತು ಗೆಲುವಿನ ನಂತರ ಅವರು, ‘ ವಾರಣಾಸಿಗೆ ನಾನಾಗಿಯೇ ಬರಲಿಲ್ಲ. ಗಂಗಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಭಾವನಾತ್ಮಕವಾಗಿ ಮಾತಾಡಿದ್ದರು.
ಗಂಗಾ ನದಿಯ ಪುನರುಜ್ಜಿವನಕ್ಕಾಗಿ 5 ವರ್ಷಗಳ ‘ಗಂಗಾ ನಮಾಮಿ ಮಿಷನ್’ ಎಂಬ ಯೋಜನೆಯನ್ನು ಮೋದಿ ಆರಂಭಿಸಿದರು. 2014-15ರಿಂದ 2018-19ರ ಅವಧಿಗೆ ಈ ಯೋಜನೆಗೆ 20,000 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಲಾಯಿತು. ಈಗ ಡೆಡ್‍ಲೈನ್ ಮುಗಿಯುತ್ತ ಬಂದಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು, ‘ಏನಾಯ್ತು ನಿಮ್ಮ ಭರವಸೆ?’ ಎಂದು ಪ್ರಶ್ನಿಸುತ್ತಿದ್ದಾರೆ.
ಗಂಗಾ ಉಳಿವಿಗೆ ಹೋರಾಟ ನಡೆಸಿದ್ದ ಪ್ರೊ. ಜೆ.ಬಿ, ಅಗರವಾಲ್ ಅವರ ಶಿಷ್ಯ 26 ವರ್ಷದ ಬ್ರಹ್ಮಾಚಾರ್ಯ ಆತ್ಮಬೋಧಾನಂದ ಸ್ವಾಮಿಯವರು, ಗಂಗೆಯ ನಿರ್ನಾಮದ ವಿರುದ್ಧ 155 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
‘ಮೋದಿ ಸರ್ಕಾರವು ಪನಾಮಾ-ಸೂಯೆಜ್ ಕಾಲುವೆ ಮಾದರಿಯನ್ನು ಇಲ್ಲಿ ಅಳವಡಿಸಲು ಯತ್ನಿಸುತ್ತಿದೆ. ನದಿಪಾತ್ರದಲ್ಲಿ 5 ವರ್ಷಗಳಲ್ಲಿ ಗಣಿಗಾರಿಕೆ ಗರಿಷ್ಠ ಮಟ್ಟವನ್ನು ತಲುಪಿದೆ’ ಎಂದು ಆತ್ಮಬೋಧಾನಂದ ಟೀಕಿಸುತ್ತಾರೆ.
ಇದರ ಕುರಿತಾಗಿ ‘ದಿ ಕ್ವಿಂಟ್’ ಒಂದು ವಿಡಿಯೋ ವರದಿ ಮಾಡಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು ಕಿಡಿಕಾರಿದ್ದಾರೆ. ವಿವರಕ್ಕಾಗಿ ಈ ವಿಡಿಯೋ ನೋಡಿ:
ವಿಡಿಯೊ
ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಳು ಎಂದು 5 ವರ್ಷದ ಹಿಂದೆ ಹೇಳಿದ ಮೋದಿ, ಗಂಗೆಯಿಂದ ನಾನು ಪಡೆಯುವುದೇನೂ ಇಲ್ಲ…ಕೊಡುವುದಷ್ಟೇ ಅದೆ ಇದೆ ಎನ್ನುತ್ತ ಮೋದಿ ಗಂಗಾ ಪುನಶ್ಚೇತನದ ಮಾತು ಆಡಿದ್ದರು. ಈ 5 ವರ್ಷಗಳಲ್ಲಿ ಗಂಗೆಗೆ ಈ ಹಿಂದೆ ಎಂದೂ ಆಗದಷ್ಟು ಹಿಂಸೆ, ಕಿರುಕುಳ ನೀಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಹೆಡ್ ಆದರೆ ಇನ್ನೊಂದು ಟೇಲ್. ಇವರೆಲ್ಲ ಗಂಗೆ ಹೆಸರಲ್ಲಿ ಅಧಿಕಾರ ಗಳಿಸುತ್ತಾರೆ, ನಂತರ ಗಂಗೆಯನ್ನೇ ಮಾರಲು ಶುರು ಮಾಡುತ್ತಾರೆ…
– ಬ್ರಹ್ಮಾಚಾರ್ಯ ಆತ್ಮಬೋಧಾನಂದ, ಗಂಗಾ ಆ್ಯಕ್ಟಿವಿಸ್ಟ್ ಮತ್ತು ಸ್ವಾಮೀಜಿ
ಅವರು (ಬಿಜೆಪಿ)ಹೀಗೆಲ್ಲ ಜನರ ನಂಬಿಕೆ ಜೊತೆ ಆಟವಾಡಿದರೆ ಮತ್ತೆ ಜನ ಅವರಿಗೆ ವೋಟ್ ಹಾಕಲ್ಲ. ಗಂಗಾ ಪುನಶ್ಚೇತನದ ಬಗ್ಗೆ ಸುಳ್ಳು ಭರವಸೆ ನೀಡುವ ಬದಲು, ಸೀರಿಯಸ್ ಆಗಿ ಕೆಲಸ ಮಾಡಲಿ. ಇದು ಧಾರ್ಮಿಕ ವಿಷಯ, ಜನರ ನಂಬಿಕೆಯ ಭಾವನಾತ್ಮ ವಿಷಯ….. – ರಾಮೇಶ್ವರ್ ಗೌರ್
-ಗಂಗಾ ಆ್ಯಕ್ಟಿವಿಸ್ಟ್
ಗಂಗಾನದಿಯಲ್ಲಿ ಕಲ್ಲು, ಬಂಡೆಗಳಿಗಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನದಿಗಳ ನೈಸರ್ಗಿಕ ನಿಯಮದ ಪ್ರಕಾರ, ಯಾವುದನ್ನು ಮರುಸೃಷ್ಟಿಸಲು ಸಾಧ್ಯವೋ ಅಂಥವನ್ನಷ್ಟೇ ಗಣಿಗಾರಿಕೆ ಮಾಡಬೇಕು…ಕಲ್ಲು, ಬಂಡೆಗಳನ್ನು ಸೃಷ್ಟಿಸಲಾಗಲ್ಲ…. ನಲವತ್ತು ಅಡಿ ಆಳದ ಗುಂಡಿಗಳನ್ನು ತೆಗೆಯಲಾಗಿದೆ…ಜನ ಇಲ್ಲಿ ಮುಳುಗಿ ಸಾಯೂತ್ತಲೂ ಇದ್ದಾರೆ….
ಅವರು ಬರೀ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ. ಅವರು ಅಭಿವೃದ್ಧಿಗಾಗಿ ಕಲ್ಲು, ಜಲ್ಲಿ, ಮರಳನ್ನು ಬೇರೆ ಎಲ್ಲಿಂದಲಾದರೂ ಪಡೆಯಬಹುದು. ಆದರೆ ಬೇರೆಲ್ಲೂ ಗಂಗಾನದಿಯನ್ನು ಪಡೆಯಲು ಸಾಧ್ಯವಿಲ್ಲ… – ಸ್ವಾಮಿ ಶಿವಾನಂದ


