ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ದೇಶದ ವಿವಿಧ ಮಹಿಳಾ ರೈತ ಸಂಘಟನೆಗಳು ಸೇರಿ ಇಂದು (ಜನವರಿ 18) ರೈತ ಮಹಿಳಾ ದಿನಾಚರಣೆ ಆಚರಿಸುತ್ತಿದ್ದು, ದೆಹಲಿಯ ಟಿಕ್ರಿ ಗಡಿಯಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವ ವ್ಯಾಪಾರ ಸಂಘಟನೆ (WTO) ಮತ್ತು ವಿಶ್ವ ಬ್ಯಾಂಕಿನ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಕುರಿತ ವೀಡಿಯೋವೊಂದನ್ನು ಕರ್ನಾಟಕದ AICCTU ಟ್ವೀಟ್ ಮಾಡಿದೆ.
Effigy of IMF, WTO and World Bank burnt at the #MahilaKisanDiwas at Tikri Border by @AllINDIAPROGRE2 pic.twitter.com/SmUi6m7CLJ
— AICCTU Karnataka (@aicctukar) January 18, 2021
ಸಾಮಾನ್ಯವಾಗಿ ಅಕ್ಟೋಬರ್ 15 ಅನ್ನು ಪ್ರತಿವರ್ಷ ರೈತ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಆದರೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಹಿನ್ನಲೆಯಲ್ಲಿ, ಇಂದೇ ಜಾಥ ನಡೆಸುವ ಮೂಲಕ ರೈತ ಮಹಿಳಾ ದಿನವನ್ನು ಆಚರಿಸಲಾಗಿದೆ.
ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!
ರೈತ ಹೋರಾಟವನ್ನು ಬೆಂಬಲಿಸಿ #WomenFarmersAgainstFarmLaws ಎನ್ನುವ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಇದನ್ನು ಬಳಸಿ ಸಾವಿರಾರು ಜನ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ವುಮೆನ್ ಕಲೆಕ್ಟೀವ್ ಟ್ವೀಟ್ ಮಾಡಿ, “ಭಾರತದ ರೈತ ಮಹಿಳೆಯರೊಂದಿಗೆ ಒಗ್ಗಟ್ಟನಿಂದ ನಿಂತಿದ್ದೇವೆ” ಎಂದು ಟ್ವೀಟ್ ಮಾಡಿದೆ.
Stand in Solidarity with Women Farmers of India on #MahilaKisanDiwas #WomenFarmersAgainstFarmLaws pic.twitter.com/quneFz2VKX
— Punjab Women Collective (@punjab_wc) January 17, 2021
ಮಂದೀಪ್ ಜಸ್ಸಿ ಟ್ವೀಟ್ ಮಾಡಿ, “ಇಂದು ನಮ್ಮ ತಾಯಂದಿರು ಮತ್ತು ಸಹೋದರಿಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನ ಕೊಡುಗೆ ನೀಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
Today our mothers and sisters are contributing equally in the fronts
#WomenFarmersAgainstFarmlaws pic.twitter.com/S53qfTnfRJ
— Mandeep jassi (@mandeepjassi1) January 18, 2021
ಇದನ್ನೂ ಓದಿ: ರೈತ ಮಹಿಳಾ ದಿನ: ‘ರೈತ ಮಹಿಳೆ’ಯ ಅಸ್ತಿತ್ವ, ಅಸ್ಮಿತೆಗಾಗಿ ಹೋರಾಟ ನಡೆಸುತ್ತಿರುವ ‘ಮಕಾಮ್’
ಸರ್ದಾರ್ ರಜಿಂದರ್ ಸಿಂಗ್ ಟ್ವೀಟ್ ಮಾಡಿ, “ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧದ ಈ ಯುದ್ಧದಲ್ಲಿ ಮಹಿಳೆಯರ ಶಕ್ತಿ ಮತ್ತು ಕೊಡುಗೆಯನ್ನು ಸಂಭ್ರಮಿಸೋಣ. ಮಹಿಳಾ ಕಿಸಾನ್ ದಿವಸ್ ಆಚರಿಸೋಣ” ಎಂದು ಬರೆದುಕೊಂಡಿದ್ದಾರೆ.
Let's Celebrate the power and contribution of women in this war against tyranny and injustice.
Let's Celebrate Mahila Kisan Divas.@irajinderdhiman
Use this hashtag today.#WomenFarmersAgainstFarmLaws pic.twitter.com/fzMp4hwahb— Sardar Rajinder Singh (@irajinderdhiman) January 18, 2021
“ದೆಹಲಿ ಗಡಿಯಲ್ಲಿರುವ 5 ಪ್ರತಿಭಟನಾ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಮತ್ತು ನೈರ್ಮಲ್ಯದ ಕೊರತೆಯು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. #WomenFarmersAgainstFarmlaws #MahilaKisanDiwas #Tractor2Twitter” ಎಂದು ಟ್ವೀಟ್ ಮಾಡಲಾಗಿದೆ.
Lack of clean drinking water, mobile toilets and sanitation at 5 protest sites at Delhi border where farmers have congregated pose a grave health hazard, #WomenFarmersAgainstFarmlaws #MahilaKisanDiwas #Tractor2Twitter @PHMglobal @jsa_india pic.twitter.com/eQN3vuOY1y
— Jsa_mumbai (@MumbaiJsa) January 18, 2021
ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿಯೂ ಮಹಿಳಾ ರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಜನವರಿ 26 ರಂದು ನಡೆಯಲಿರುವ ಟ್ಯ್ರಾಕ್ಟರ್ ಪರೇಡ್‌ನಲ್ಲಿಯೂ ರೈತ ಮಹಿಳೆಯರು ಭಾಗವಹಿಸಲು ತಾಲೀಮು ನಡೆಸಿದ್ದಾರೆ. ಈಗಾಗಲೇ ನೂರಾರು ರೈತ ಪುತ್ರಿಯರು ಟ್ರಾಕ್ಟರ್ ಚಲಾಯಿಸುವುದನ್ನು ಕಲಿಯುತ್ತಿದ್ದಾರೆ.
ಇದನ್ನೂ ಓದಿ: ಕ್ಷಮೆ ಕೇಳುತ್ತಲೇ ರೈತ ಮಹಿಳೆಯ ಮೇಲೆ ಆರೋಪಗಳ ಸುರಿಮಳೆಗೈದ ಮಾಧುಸ್ವಾಮಿ!
ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದು, ಸಾಲ ಮನ್ನಾ, ಆರೋಗ್ಯ ಸೇವೆಗಳು, ಕಿರು ಬಂಡವಾಳ ಸಂಸ್ಥೆಗಳ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತ ಹೋರಾಟಕ್ಕೆ ಬೆಂಬಲ ಸೂಚಿಸುವುದು ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ಇಂದು ಹೋರಾಟ ನಡೆಸುತ್ತಿದ್ದಾರೆ.
ಈ ಜಾಥದಲ್ಲಿ ಭಾರತೀಯ ಮಹಿಳಾ ಒಕ್ಕೂಟ (ಎನ್ಎಫ್ಐಡಬ್ಯೂ), ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ (ಎಐಡಿಡಬ್ಲ್ಯೂಎ), ಅಖಿಲ ಭಾರತ ಮಹಿಳಾ ಪ್ರಗತಿಶೀಲ ಸಂಘ (ಎಐಪಿಡಬ್ಲ್ಯೂಎ) ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಗಳು (ಎಐಎಂಎಸ್ಎಸ್) ಭಾಗವಹಿಸಿವೆ.
ಎಐಡಿಡಬ್ಲ್ಯೂಎ ಅಧ್ಯಕ್ಷರಾದ ಮರಿಯಂ ದವಾಲೆ ಅವರು, “ನಾವು ದೇಶದಾದ್ಯಂತ ಪ್ರತಿಭಟನೆಯನ್ನು ಆಯೋಜಸುತ್ತಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿದ್ದು, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಿಳಾ ಪ್ರತಿಭಟನಾಕಾರರು ರಾಜ್‌ಭವನದತ್ತ ಮೆರವಣಿಗೆ ನಡೆಸಲಿದ್ದಾರೆ” ಎಂದಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ಅಧ್ಯಕ್ಷರಾದ ಅಶೋಕ್ ದವಾಲೆ ಮಾತನಾಡಿ “ಇಂದು ನಡೆಯಲಿರುವ ಜಾಥದಲ್ಲಿ ಪುರುಷರು ಮತ್ತು ಮಹಿಳೆಯರೆಲ್ಲರೂ ಭಾವಹಿಸಲಿದ್ದು, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಲಿದ್ದಾರೆ” ಎಂದರು.
ರೈತ ಮಹಿಳಾ ದಿನದ ಕುರಿತು ದೆಹಲಿಯ ಸಿಂಘು ಗಡಿಯಲ್ಲಿನ ಹೋರಾಟಗಾರ್ತಿಯ ಮಾತುಗಳನ್ನು ಇಲ್ಲಿ ಕೇಳಿ…
ರೈತ ಮಹಿಳಾ ದಿನದ ಬಗ್ಗೆ ಸಿಂಘು ಗಡಿಯಲ್ಲಿನ ಹೋರಾಟಗಾರ್ತಿಯ ಮಾತುಗಳು…#MahilaKisanDiwas #WomenFarmersAgainstFarmlaws #NaanuGauri #FarmersProtests pic.twitter.com/jNCIr6WUi5
— Naanu Gauri (@naanugauri) January 18, 2021
ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ


