ಸರ್ಕಾರದ ಇಲಾಖೆಗಳಲ್ಲಿ ಬಳಸಲಾಗುತ್ತಿರುವ ಎಲ್ಲಾ ಅರ್ಜಿ ನಮೂನೆಗಳ ಲಿಂಗ ಸೂಚಕ ಆಯ್ಕೆಯಲ್ಲಿ “ಲೈಂಗಿಕ ಅಲ್ಪಸಂಖ್ಯಾತ” ಸೇರಿಸುವುದಾಗಿ ಕೇರಳದ ಎಡರಂಗ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಗ್ಗೆ ಅರ್ಜಿಗಳನ್ನು ಪರಿಷ್ಕರಿಸುವುದಾಗಿ ಕೇರಳ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ. ಶೈಲಜಾ ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಜೈಲಿನ ಅಂಕಿಅಂಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವರ್ಗ
“ಸ್ತ್ರೀ, ಪುರುಷರ ಆಯ್ಕೆಗಳ ಜೊತೆಗೆ, ಲೈಂಗಿಕ ಅಲ್ಪಸಂಖ್ಯಾತ ಟ್ರಾನ್ಸ್‌ವುಮನ್, ಟ್ರಾನ್ಸ್‌ಮ್ಯಾನ್ ಸೇರಿಸಲು ಆದೇಶ ಹೊರಡಿಸಲಾಗಿದೆ. ಇದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉನ್ನತಿಗೆ ಸಹಾಯ ಮಾಡುತ್ತದೆ” ಎಂದು ಶೈಲಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2014 ರಲ್ಲಿ ಸುಪ್ರೀಂಕೋರ್ಟ್ ರಾಜ್ಯ ನೀತಿಯು ವ್ಯಕ್ತಿಯನ್ನು ಲೈಂಗಿಕ ಅಲ್ಪಸಂಖ್ಯಾತರಾಗಿ ಸ್ವಯಂ ಗುರುತಿಸಲು ಅನುಮತಿಸುವ ತೀರ್ಪನ್ನು ಪ್ರಕಟಿಸಿತ್ತು. ಈ ಮೂಲಕ ಈ ನೀತಿಯನ್ನು ಘೋಷಿಸಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.
ಗುರುತಿನ ಚೀಟಿಗಳನ್ನು ನೋಂದಾಯಿಸಲು ಮತ್ತು ವಿತರಿಸಲು ಜಿಲ್ಲಾ ಮಟ್ಟದ ಲೈಂಗಿಕ ಅಲ್ಪಸಂಖ್ಯಾತ ಮಂಡಳಿಗಳನ್ನು ಸ್ಥಾಪಿಸಲು ಈ ನೀತಿಯು ಶಿಫಾರಸು ಮಾಡುತ್ತದೆ.
ಇದನ್ನೂ ಓದಿ: ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಸಮಾಜದ ದೃಷ್ಠಿಕೋನ ಬದಲಿಸಲು ಹೋರಾಡುತ್ತಿರುವ ಅಕ್ಷತಾ ಮೇಡಂ


