ಮೈಸೂರಿನಲ್ಲಿ ನಿನ್ನೆ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶಕ್ಕೆ ಸಾಕ್ಷಾತ್ ಪ್ರಧಾನ ಮಂತ್ರಿಗಳೇ ಬಂದಿದ್ದರು. ಪ್ರಧಾನಿಗಳು ತಮ್ಮ ಭಾಷಣದಲ್ಲಿ ಎಂದಿನಂತೆಯೇ ದೇಶದ ಜನಸಾಮನ್ಯರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಹೋಗಲಿಲ್ಲ. ಬದಲಿಗೆ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಆಶ್ಚರ್ಯಕರವೆಂಬಂತೆ ದೇವೆಗೌಡರು ಮತ್ತು ಕುಮಾರಸ್ವಾಮಿಯವರ ಮೇಲೆ ಹೆಚ್ಚಿನ ದಾಳಿ ನಡೆಸಲು ಹೋಗಲಿಲ್ಲ. ಬದಲಿಗೆ ಅವರು ಕುಮಾರಸ್ವಾಮಿಯವರು ಕಾಂಗ್ರೆಸ್‍ನಿಂದ ಬಾಧಿತರಾಗಿದ್ದೆಂಬ ಮಾತುಗಳನ್ನು ಆಡಿದರು. ರಾಹುಲ್ ಗಾಂಧಿ ದೇವೇಗೌಡರಿಗೆ ಹೆದರಿಕೊಂಡು ಕರ್ನಾಟಕದಲ್ಲಿ ಸ್ಪರ್ಧಿಸುತ್ತಿಲ್ಲವೆಂದೂ ಹೇಳಿದರು.
ಆದರೆ ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿ ಏನೆಂದರೆ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಅಭ್ಯರ್ಥಿಗಳ ಕುರಿತಾಗಿ ಮತ್ತು ಅಲ್ಲಿನ ಚುನಾವಣೆಯ ಬಗ್ಗೆ ಬಿಜೆಪಿಯ ಕುರಿತು ಅವರು ಮಾತನಾಡಿದರು. ಆದರೆ ಭಾಷಣ ಮುಗಿಯುತ್ತಾ ಬಂದಂತೆ ಅವರು ಅಂಬರೀಶ್‍ರವರನ್ನು ನೆನೆಸಿಕೊಂಡು ಅವರ ಪತ್ನಿ ಸುಮಲತಾ ಪರ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು. ಆದರೆ ಪ್ರತಾಪ್ ಸಿಂಹ ಮತ್ತು ಶ್ರೀನಿವಾಸ್ ಪ್ರಸಾದ್‍ರ ಕುರಿತು ಪ್ರಸ್ತಾಪ ಮಾಡಲೇ ಇಲ್ಲ. ಇದು ಹಲವರ ಹುಬ್ಬೇರಿಸಿದೆ 
ಏಕೆಂದರೆ ಸಾಮಾನ್ಯವಾಗಿ ರಾಷ್ಟ್ರೀಯ ನಾಯಕರು ಬಂದಾಗ ಸ್ಥಳೀಯ ಅಭ್ಯರ್ಥಿಗಳನ್ನು ಮುಂದೆ ನಿಂತು ಪರಿಚಯಿಸಿ ಅವರ ಪರ ಮತ ಹಾಕಿ ಎಂದು ಅವರ ಬಾಯಲ್ಲಿ ಹೇಳಿಸುವುದು ಸಾಮಾನ್ಯ. ಆದರೆ ಇಲ್ಲಿ ವೇದಿಕೆಯ ಮೇಲೆ ಇದ್ದ ಪ್ರತಾಪ್ ಸಿಂಹ ಮತ್ತು ಶ್ರೀನಿವಾಸ್ ಪ್ರಸಾದ್‍ರನ್ನು ಮರೆತು ವೇದಿಕೆಯ ಮೇಲೆ ಇಲ್ಲದ ಸುಮಲತಾ ಅವರ ಪಕ್ಷದ ಅಭ್ಯರ್ಥಿಯು ಅಲ್ಲದೇ ಬಿಜೆಪಿ ಬೆಂಬಲಿಸಿರುವ ಸುಮಲತಾರವರ ಪರ ಮೋದಿ ಬ್ಯಾಟಿಂಗ್ ಮಾಡಿದ್ದಾರೆ.
ಮಂಡ್ಯದ ಚುಣಾವಣೆಯ ಕುರಿತು ಬಿಜೆಪಿ ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಂಡಿದೆ ಎಂಬುದಕ್ಕೆ ಇದು ಕೂಡ ಸಾಕ್ಷಿ. ಮೋದಿಯವರಿಗೆ ಬಹುಶಃ ವೇದಿಕೆಯ ಮೇಲೆ ಮಾತನಾಡುತ್ತಿರುವಾಗ ತಮಗೆ ಸಂಬಂಧಿಸಿದ ಬಿಜೆಪಿ ಅಭ್ಯರ್ಥಿಗಳಿಗಿಂತ ಸುಮಲತಾರನ್ನೇ ಗೆಲ್ಲಿಸುವ ಕುರಿತು ಹೆಚ್ಚು ಕಾಳಜಿಯಿರುವಂತೆ ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಮಂಡ್ಯ ಕ್ಷೇತ್ರದ ರಾಜಕೀಯದ ಕುರಿತು ಬಿಜೆಪಿ ನಿಲುವನ್ನು ಅರ್ಥೈಸಿಕೊಳ್ಳಬಹುದಾಗಿದೆ.


