ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ವಿರುದ್ದ ಅಲ್ಲಿನ ಕಾರ್ಮಿಕರು ನಡೆಸುತ್ತಿರುವ ಹೋರಾಟ ಇಂದಿಗೆ 81 ನೇ ದಿನ ತಲುಪಿದೆ. ಹೋರಾಟ ಪ್ರಾರಂಭವಾಗಿ ಮೂರನೇ ತಿಂಗಳು ಕಾಲಿಟ್ಟರೂ ರಾಜ್ಯ ಸರ್ಕಾರವಾಗಲಿ, ಆಡಳಿತ ಮಂಡಳಿಯಾಗಲಿ ಯಾವುದೆ ರೀತಿಯಲ್ಲಿ ಸ್ಪಂದಿಸುತ್ತಿಲ್ಲವಾದ್ದರಿಂದ ಕಂಪೆನಿಯ ಕಾರ್ಮಿಕರು ಇಂದು ಕಂಪೆನಿಗೆ ಮುತ್ತಿಗೆ ಹಾಕಿದ್ದಾರೆ.
ಗೌರವಯುತ ಬದುಕಿಗಾಗಿ ಹೋರಾಟ ಎಂಬ ಘೋಷವಾಕ್ಯದಡಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕರು, ಇಂದು ಬೆಳಿಗ್ಗೆ ಬಿಡದಿಯಿಂದ ಟೊಯೋಟಾ ಕಂಪನಿಯವರೆಗೆ ತಮ್ಮ ಕುಟುಂಬ ಹಾಗೂ ಸ್ಥಳೀಯ ಜನ ಪ್ರತಿನಿದಿಗಳ ಜತೆಗೂಡಿ ಬೃಹತ್ ಪಾದಯಾತ್ರೆ ನಡೆಸಿದರು. ಅಲ್ಲಿ ಕಂಪೆನಿಯನ್ನು ಮುತ್ತಿಗೆ ಹಾಕಿರುವ ಕಾರ್ಮಿಕರು, ಕಂಪೆನಿಯ ವಿರುದ್ದ ಬಹಿರಂಗ ಸಭೆ ನಡೆಸಿದರು.
ಬಹಿರಂಗ ಸಭೆಯ ಫೇಸ್‌ಬುಕ್ ಲೈವ್ ವೀಡಿಯೋ ನೋಡಿ
ಕಾರ್ಮಿಕರನ್ನು ಬೆಂಬಲಿಸಿ ಸ್ಥಳೀಯ ಸಂಸದರಾದ ಡಿ.ಕೆ ಸುರೇಶ್, ಎಮ್‌ಎಲ್‌ಸಿ ಲಿಂಗಪ್ಪಾಜಿ ಹಾಗೂ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರೆ ಸೇರಿದಂತೆ ಬಹಿರಂಗ ಸಭೆಯಲ್ಲಿ ಸಾವಿರಾರು ಕಾರ್ಮಿಕರು ಸೇರಿದ್ದರು.
ಇದನ್ನೂ ಓದಿ: ಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು


