ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಫೆಬ್ರವರಿ 6 ರಂದು ದೆಹಲಿಯನ್ನು ಹೊರತುಪಡಿಸಿ ದೇಶವ್ಯಾಪಿ ರಸ್ತೆ ದಿಗ್ಭಂಧನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ಅದರ ರಾಜನೇ ಬಂಧಿಯಾಗಿರುವುದರಿಂದ ಅಲ್ಲಿ ದಿಗ್ಭಂಧನ ಮಾಡುವ ಅತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಪ್ರತಿಭಟನೆಯ ಕುರಿತು ಮಾತನಾಡಿದ ಟಿಕಾಯತ್, “ಮೂರು ಗಂಟೆಗಳ ಕಾಲ ರಸ್ತೆ ದಿಗ್ಭಂಧನ ಮಾಡಲಾಗುವುದು. ಈ ದಿಗ್ಭಂಧನದಲ್ಲಿ ಸಿಲುಕುವ ವಾಹನಗಳಿಗೆ ನೀರು ಹಾಗೂ ಆಹಾರ ಒದಗಿಸಲಾಗುವುದು. ಜೊತೆಗೆ ಅಲ್ಲೇ ಜನರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿಕೊಡಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!
ಮೂರು ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಕೇಂದ್ರವು ಇದುವರೆಗೂ 11 ಬಾರಿ ಮಾತುಕತೆಗಳನ್ನು ರೈತರೊಂದಿಗೆ ನಡೆಸಿದ್ದರೂ ಅವರ ಬೇಡಿಕೆಗಳಿಗೆ ಮಣಿಯುತ್ತಿಲ್ಲ. ರೈತರು ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಯುಪಿ-ದೆಹಲಿ ಗಡಿಯಾದ ಗಾಜೀಪುರ್‌ನಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ನಂತರ ಪ್ರತಿಭಟನೆಗೆ ಹೊಸ ಹುಮ್ಮಸ್ಸು ಬಂದಿದೆ. ಅಲ್ಲಿ ರೈತರನ್ನು ಮುನ್ನಡೆಸುತ್ತಿರುವ ರಾಕೇಶ್ ಟೀಕಾಯತ್‌ಗೆ ಪೊಲೀಸರು ಕಿರುಕುಳ ನೀಡಿದ್ದು ರೈತ ಹೋರಾಟಗಾರರನ್ನು ಕೆರಳಿಸಿದೆ. ಇದೀಗ ಅವರು ರೈತರ ಐಕಾನ್ ಆಗಿದ್ದು ಹರಿಯಾಣ, ಉತ್ತರ ಪ್ರದೇಶದಲ್ಲಿ ರೈತ ಮಹಾಪಂಚಾಯತ್ ಸಮಾವೇಶವನ್ನು ಸಂಘಟಿಸುತ್ತಿದ್ದಾರೆ.
ಇದನ್ನೂ ಓದಿ: ರೈತರ ಮಹಾಪಂಚಾಯತ್‌ಗೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ



It is very bad to destroy formers movement and democracy