ಕೇಂದ್ರ ಸರ್ಕಾರವು ಟ್ವಿಟರ್ ಜೊತೆ ಅಸಮಧಾನಗೊಂಡಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಜಾಲತಾಣವಾದ ’ಕೂ’ ಆಪ್‌ಗೆ ಪ್ರೋತ್ಸಾಹಿಸಿದೆ. ಈ ಹಿನ್ನಲೆಯಲ್ಲಿ ಈ ಆಪ್ ಅನ್ನು ಹಲವಾರು ಜನರು ಡೌನ್‌ಲೋಡ್ ಮಾಡಿದ್ದಾರೆ. ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 30 ಲಕ್ಷ ಡೌನ್‌ಲೋಡ್‌ಗಳಾಗಿದೆ ಎನ್ನಲಾಗಿದೆ. ಆದರೆ ಈ ಆಪ್ ಬಗ್ಗೆ ಹಲವಾರು ಅಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಆಪ್ ಸುರಕ್ಷಿತ ಅಲ್ಲ ಎಂದು ಫ್ರೆಂಚ್ ಸಂಶೋಧಕರು ಬಹಿರಂಗ ಪಡಿಸಿರುವುದ ಜೊತೆಗೆ, ಆಪ್‌ಗೆ ಚೀನಾದೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳ ಭದ್ರತಾ ಸಂಶೋಧಕರು, ’ಕೂ’ ಆಪ್ ಹೆಚ್ಚು ಸುರಕ್ಷಿತವಲ್ಲ, ಅದು ಬಳಕೆದಾರರ ಇಮೇಲ್ ಐಡಿ, ಫೋನ್ ಸಂಖ್ಯೆಗಳು, ಹುಟ್ಟಿದ ದಿನಾಂಕ ಸೇರಿದಂತೆ ಬಹಳಷ್ಟು ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಎಲಿಯಟ್ ಆಂಡರ್ಸನ್ ಎಂದು ಜನಪ್ರಿಯವಾಗಿರುವ ಫ್ರೆಂಚ್ ಸೈಬರ್ ಸೆಕ್ಯುರಿಟಿ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್, ’ಕೂ’ ಅಪ್ಲಿಕೇಷನ್‌ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತದೆ ಎಂದು ಕಂಡು ಹಿಡಿದಿದ್ದಾರೆ. ಬ್ಯಾಪ್ಟಿಸ್ಟ್ ಈ ಹಿಂದೆ ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ಎತ್ತಿ ತೋರಿಸಿದ್ದು, ಇದರ ನಂತರ ಅವರು ಜನಪ್ರಿಯರಾಗಿದ್ದರು. ಇಷ್ಟೇ ಅಲ್ಲದೆ, ಇತರ ತಂತ್ರಜ್ಞಾನಗಳಲ್ಲಿನ ಹಲವಾರು ಭದ್ರತಾ ದೋಷಗಳು ಅವರು ಎತ್ತಿ ತೋರಿಸಿದ್ದರು.
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ಯ್ರ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಸದಾ ಬದ್ಧ: ಟ್ವಿಟರ್ ಬೆಂಬಲಕ್ಕೆ ಅಮೆರಿಕ
ಕಳೆದ ರಾತ್ರಿ ಬ್ಯಾಪ್ಟಿಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ, “ಹೊಸ ‘ಕೂ’ ಅಪ್ಲಿಕೇಶನ್ ಜೊತೆ ನಾನು ಕೇವಲ 30 ನಿಮಿಷ ಕಳೆದೆ. ಈ ಅಪ್ಲಿಕೇಷನ್ ತನ್ನ ಬಳಕೆದಾರರ, ಇಮೇಲ್, ಹುಟ್ಟಿದ ದಿನಾಂಕ, ಹೆಸರು, ಅವರ ವೈವಾಹಿಕ ಮಾಹಿತಿ, ಲಿಂಗ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುತ್ತದೆ. ನೀವು ಕೇಳಿದ್ದರಿಂದ ಇದನ್ನು ಮಾಡಿದ್ದೇನೆ” ಎಂದು ಬರೆದಿದ್ದಾರೆ.
ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳನ್ನು ನೋಡಿದರೆ, ‘ಕೂ’ ಆಪ್ ಕೆಲವು ಸೂಕ್ಷ್ಮ ವಿವರಗಳನ್ನು ಸೋರಿಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈಗಾಗಲೆ ‘ಕೂ’ ಆಪ್‌ನಲ್ಲಿ ಖಾತೆಗಳನ್ನು ಸೃಷ್ಟಿಸಿರುವ ಭಾರತ ಸರ್ಕಾರದ ಇಲಾಖೆಗಳು, ಮಂತ್ರಿಗಳು ಸೇರಿದಂತೆ ಲಕ್ಷಾಂತರ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿರಬಹುದು ಎನ್ನಲಾಗಿದೆ.
You asked so I did it. I spent 30 min on this new Koo app. The app is leaking of the personal data of his users: email, dob, name, marital status, gender, … https://t.co/87Et18MrOg pic.twitter.com/qzrXeFBW0L
— Elliot Alderson (@fs0c131y) February 10, 2021
ಬ್ಯಾಪ್ಟಿಸ್ಟ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ‘ಕೂ’ ಸಂಸ್ಥಾಪಕ ಅಪ್ರಮೇಯ, “ಕೂ ಪ್ರೋಫೈಲ್‌ನಲ್ಲಿ ಬಳಕೆದಾರರು ತಾವಾಗಿಯೆ ಈ ಮಾಹಿತಿಯನ್ನು ಬಹಿರಂಗ ಪಡಿಸಿದರಷ್ಟೇ ಅದು ಬಹಿರಂಗವಾಗುತ್ತದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಬ್ಯಾಷ್ಟಿಸ್ಟ್, ಸೋನಾಲ್ ಗೋಯಲ್ ಎಂಬ ಐಎಎಸ್ ಅಧಿಕಾರಿಯ ‘ಕೂ’ ಫ್ರೋಫೈಲ್ ಒಂದರ ಸ್ಕ್ರೀನ್ ಶಾರ್ಟ್ ಹಾಕಿ ಉತ್ತರಿಸಿದ್ದಾರೆ. ಅದರಲ್ಲಿ “ಮೊದಲಿಗೆ ಕಂಡು ಹಿಡಿದ ಫ್ರೋಫೈಲ್ ಇದು. ಈ ಪ್ರೋಫೈಲ್‌ನಲ್ಲಿ ಇವರು ಯಾವುದೆ ಹುಟ್ಟಿದ ದಿನಾಂಕ, ಅವರ ಲಿಂಗ, ಅವರ ವೈವಾಹಿಕ ಸ್ಥಿತಿಯ ಬಗ್ಗೆ ಬಹಿರಂಗಪಡಿಸಿದ್ದಾರೆಯೆ ಎಂದು” ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳ ಡಬಲ್‌ಸ್ಟ್ಯಾಂಡರ್ಡ್ ಅನ್ನು ಸಹಿಸಲ್ಲ: ಕೇಂದ್ರ ಸರ್ಕಾರ
@aprameya the screenshots of the 1st tweet has been done on this profile. Where do you see her dob? Her gender? Her marital status? pic.twitter.com/RCkTfJU1Vw
— Elliot Alderson (@fs0c131y) February 11, 2021
ಆದರೆ ಬ್ಯಾಪ್ಟಿಸ್ಟ್ ಅವರು ಎತ್ತಿದೆ ಪ್ರಶ್ನೆಗೆ ಕೂ ಸಂಸ್ಥಾಪಕ ಉತ್ತರಿಸದೆ, “ನಾವು ನಮ್ಮ ದೇಶ, ಭಾರತಕ್ಕಾಗಿ ಏನಾದರೂ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಈ ಪ್ರಯಾಣದಲ್ಲಿ ನೀವು ಸಹಾಯ ಮಾಡಲು ಬಯಸಿದರೆ ದಯವಿಟ್ಟು ನನಗೆ ಪತ್ರ ಬರೆಯಿರಿ. ನಿಮ್ಮ ಎಲ್ಲಾ ಪ್ರತಿಕ್ರಿಯೆಯನ್ನು ನಾವು ನೋಡುತ್ತೇವೆ” ಎಂದು ಹೇಳಿದ್ದಾರೆ. ಅಪ್ರಮೇಯ ಅವರ ಈ ಉತ್ತರಕ್ಕೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
We're attempting to do something for our country, India. All help is appreciated. If you want to help out in this journey of ours please write to me on [email protected] and we can take a look at all the feedback you have. Thanks!
— Aprameya R (@aprameya) February 11, 2021
ರೈತರ ಹೋರಾಟದ ಬಗ್ಗೆ ಟ್ವೀಟ್ ಮಾಡುವ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ನಿರಾಕರಿಸಿದ ನಂತರ, ಕೇಂದ್ರ ಸರ್ಕಾರ ಸೇರಿದಂತೆ ಲಕ್ಷಾಂತರ ಜನರು ‘ಕೂ’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಪ್ರಸ್ತುತ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳ ಹ್ಯಾಂಡಲ್‌ಗಳನ್ನು ‘ಕೂ’ ವೇರಿಫೈ ಮಾಡಿದೆ. ನಾನು ಈಗ ‘ಕೂ’ ಆಪ್‌ನಲ್ಲಿದ್ದೇನೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್‌ಗೆ ಕೇಂದ್ರ ತಾಕೀತು
‘ಕೂ’ ಆಪ್‌ನಲ್ಲಿನ ದೋಷವನ್ನು ಬ್ಯಾಪ್ಟಿಸ್ಟ್ ಮಾತ್ರವಲ್ಲದೆ ಬೇರೊಬ್ಬರೂ ಕಂಡು ಹಿಡಿದಿದ್ದಾರೆ. ಪ್ರಣವ್ ಎಂಬವರು, ಈ ಆಪ್‌ನಲ್ಲಿ ತಾನು ಯಾವುದೆ ಖಾತೆಯನ್ನು ಮಾಡದೆ ಪೋಸ್ಟ್ ಮಾಡಿದೆ ಎಂದು ಹೇಳಿದ್ದಾರೆ.
It's storing user tokens as frontend global variables, if you know the token info of a user. go to /create you can directly put values in here, with inspect mode. which I think will enable the compose button and you can remotely tweet to that account with the token info. https://t.co/jvRfu5UsB1 pic.twitter.com/CFP1TiqIuT
— ☕︎︎ (@pranaww_) February 10, 2021
ಚೀನೀ ಸಂಪರ್ಕ?
ಬ್ಯಾಪ್ಟಿಸ್ಟ್ ‘ಕೂ’ ಆಪ್‌ಗೆ ಚೀನಾ ಸಂಪರ್ಕವಿದೆ ಎಂಬ ಟ್ವೀಟ್ ಅನ್ನು ಕೂಡಾ ಹಂಚಿಕೊಂಡಿದ್ದಾರೆ. ಆದರೆ ಅದು ಅಷ್ಟೊಂದು ನಿಖರವಾಗಿಲ್ಲ ಎನ್ನಲಾಗಿದೆ. ‘ಕೂಆಪ್.ಕಾಮ್’ ಡೊಮೇನ್ ಅನ್ನು ನಾಲ್ಕು ವರ್ಷಗಳ ಹಿಂದೆ ರಚಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಇದರ ಮಾಲಿಕತ್ವ ಹಲವು ಬಾರಿ ಬದಲಾಗಿದೆ ಎಂದು ಈ ದಾಖಲೆ ತಿಳಿಸುತ್ತದೆ. ಅದರ ಇತ್ತೀಚೆನ ಮಾಲಿಕರು ಬಾಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಆಗಿದೆಯಾದರೂ, ಅದು ಅದನ್ನು 2019 ರಲ್ಲಷ್ಟೇ ಸ್ವಾಧೀನ ಪಡಿಸಿಕೊಂಡಿದೆ.
— Elliot Alderson (@fs0c131y) February 10, 2021
ಆದರೆ ಕೂ ಅಪ್ಲಿಕೇಶನ್‌ನಲ್ಲಿ ಚೀನೀ ಹೂಡಿಕೆ ಇದ್ದು, ಚೀನಾ ಮೂಲದ ಶಿಯೋಮಿ ಕಂಪೆನಿಯೊಂದಿಗೆ ಸಂಬಂಧವಿರುವ ಶುನ್‌ವೇಯು ಇದರಲ್ಲಿ ಹಣವನ್ನು ಹೂಡಿಕೆ ಮಾಡಿದೆ. ಆದರೆ ಕೂವನ್ನು ಸಂಪೂರ್ಣ ಸ್ವದೇಶಿ ಅಪ್ಲಿಕೇಶನ್ ಮಾಡುತ್ತಿದ್ದು ಅಲ್ಪ ಪಾಲಷ್ಟೆ ಶುನ್‌ವೆ ಅವರಲ್ಲಿದೆ, ಅವರು ಅದನ್ನು ಶೀಘ್ರದಲ್ಲೇ ಮಾರಾಟ ಮಾಡಲಿದ್ದಾರೆ ಎಂದು ‘ಕೂ’ ಸಿಇಒ ಅಪ್ರಮೇಯ ಹೇಳಿದ್ದಾರೆ.
ಇದನ್ನೂ ಓದಿ: ‘ರೈತರ ನರಮೇಧ ನಡೆಸುತ್ತಿರುವ ಮೋದಿ’ – ಟ್ವಿಟರ್‌ನಲ್ಲಿ ಭುಗಿಲೆದ್ದ ಆಕ್ರೋಶ



ನನ್ನಲ್ಲಿ ಇತ್ತು.
ಅದು ಒಂದು ಪಕ್ಷದ ಪರವಾಗಿದೆ ಎಂದು ಅಲ್ಲಿಂದ ವರ್ಷಗಳ ಹಿಂದೆ ತೊರೆದಿದ್ದೇನೆ