Homeಮುಖಪುಟಪಶ್ಚಿಮ ಬಂಗಾಳದಲ್ಲಿ 200 ಸ್ಥಾನ ಗೆಲ್ಲುತ್ತೇವೆ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ 200 ಸ್ಥಾನ ಗೆಲ್ಲುತ್ತೇವೆ: ಅಮಿತ್ ಶಾ

ಬಂಗಾಳದಲ್ಲಿ ರಥಯಾತ್ರೆ ಮಾಡಲು ಬಿಜೆಪಿಯವರೇನು ದೇವರೇ? ನಾನು ಗಟ್ಟಿಗಿತ್ತಿ. ಎಂದಿಗೂ ಬಿಜೆಪಿಗೆ ತಲೆಬಾಗುವುದಿಲ್ಲ. ಬಂಗಾಳದ ಹುಲಿ ನಾನು - ಮಮತಾ ಬ್ಯಾನರ್ಜಿ

- Advertisement -
- Advertisement -

ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 294 ಕ್ಷೇತ್ರಗಳಲ್ಲಿ 200 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು “ಇದು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ರಾಜಕಾರಣ ಮತ್ತು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ವಿಭಜಕ ರಾಜಕಾರಣದ ನಡುವಿನ ಹೋರಾಟವಾಗಿದೆ. ಇದು ಬಿಜೆಪಿ ಸಿಗುವ ಅತಿದೊಡ್ಡ ಬಹುಮಾನವಾಗಲಿದೆ” ಎಂದು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಜೈ ಶ್ರೀರಾಂ ಘೋಷಣೆಯನ್ನು ಭಾರತದಲ್ಲಿ ಕೂಗದೇ ಪಾಕಿಸ್ತಾನದಲ್ಲಿ ಕೂಗಲಾಗುತ್ತದೆಯೇ? ಜೈ ಶ್ರೀರಾಂ ಘೋಷಣೆಗೆ ಮಮತಾ ಬ್ಯಾನರ್ಜಿ ಉರಿದು ಬೀಳುತ್ತಿದ್ದಾರೆ. ಆದರೆ ವಿಧಾನಸಭಾ ಚುನಾವಣೆಗಳು ಮುಗಿದ ತಕ್ಷಣ ಅವರು ಸಹ ಜೈ ಶ್ರೀರಾಂ ಘೋಷಣೆ ಕೂಗುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜನವರಿ 23 ರಂದು ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿಯವರು ಭಾಗವಹಿಸಿದ್ದ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದ್ದರು. ಆ ವೇಳೆ ಸಿಟ್ಟಿಗೆದ್ದ ಮಮತಾ ಬ್ಯಾನರ್ಜಿ ಸ್ಥಳೀಯ ಸರ್ಕಾರವನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಕನಿಷ್ಠ ಪರಿಜ್ಞಾನ ಇಲ್ಲ ಎಂದು ಭಾಷಣ ಮಾಡದೇ ವಿರೋಧ ವ್ಯಕ್ತಪಡಿಸಿದ್ದರು.

ಬಂಗಾಳದಲ್ಲಿ ಬಿಜೆಪಿ ಮಾಡುತ್ತಿರುವ ರಥಯಾತ್ರೆಯನ್ನು ಮಮತಾ ಬ್ಯಾನರ್ಜಿ ಕಟು ಶಬ್ದಗಳಲ್ಲಿ ವಿರೋಧಿಸಿದ್ದಾರೆ. ಬಂಗಾಳದಲ್ಲಿ ರಥಯಾತ್ರೆ ಮಾಡಲು ಬಿಜೆಪಿಯವರೇನು ದೇವರೇ? ನಾನು ಗಟ್ಟಿಗಿತ್ತಿ. ಎಂದಿಗೂ ಬಿಜೆಪಿಗೆ ತಲೆಬಾಗುವುದಿಲ್ಲ. ಬಂಗಾಳದ ಹುಲಿ ನಾನು. ಗುಜರಾತಿನವರು ಬಂಗಾಳವನ್ನು ಆಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.


ಇದನ್ನೂ ಓದಿ: ಬಿಜೆಪಿಯು ಮಾವೋವಾದಿಗಳಿಗಿಂತ ಅಪಾಯಕಾರಿಯಾಗಿದೆ – ಮಮತಾ ಬ್ಯಾನರ್ಜಿ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...