ಜಾಹೀರಾತಿನಲ್ಲಿ

“ನೀವು ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಅವರ ಇತ್ತೀಚಿನ ಫೋಟೋ ನೋಡಿದ್ದೀರಾ? ಪಿಯೂಷ್ ಗೋಯಲ್ ರವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ? ನಿಮಗೆ ಸಾಧ್ಯವಾದರೆ ಈ ಜಾಹೀರಾತಿನಲ್ಲಿ ಪಿಯೂಷ್ ಗೋಯಲ್ ರವರನ್ನು ಕಂಡುಹಿಡಿಯಿರಿ.. ನಿಮಗೆ 15 ಲಕ್ಷ ರೂ ಬಹುಮಾನ ನೀಡಲಾಗುವುದು” ಎಂಬ ಶೀರ್ಷಿಕೆಗಳಲ್ಲಿ ಇಂದು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಫೋಟೊವೊಂದು ವೈರಲ್ ಆಗುತ್ತಿದೆ. ಏಕೆಂದರೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಲಿರುವ ಕಾರ್ಯಕ್ರಮವೊಂದರೆ ಮುಖಪುಟ ಜಾಹೀರಾತಿನಲ್ಲಿ ಅವರ ಫೋಟೊನೇ ಇಲ್ಲ… ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಏಕೈಕ ಭಾವಚಿತ್ರವಿದೆ..

ಇಂದು ಸಂಜೆ 6 ಗಂಟೆಗೆ ದುಬೈನಲ್ಲಿ “ಎಕ್ಸ್‌ಪೋ 2020 ದುಬೈ” ಎಂಬ ವಿಶಿಷ್ಟ ಜಾಗತಿಕ ಆಹಾರ ಮೇಳವೊಂದು ಉದ್ಘಾಟನೆಯಾಗಲಿದೆ. ಅದರ ಭಾರತದ ವಿಭಾಗವನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಕುರಿತ ಪ್ರಮುಖ ಆಂಗ್ಲ ದೈನಿಕಗಳಲ್ಲಿ ಜಾಹೀರಾತೊಂದನ್ನು ನೀಡಲಾಗಿದೆ. ಆದರೆ ಅದರಲ್ಲಿ ಪಿಯೂಷ್ ಗೋಯಲ್ ಹೆಸರಿದೆ.. ನರೇಂದ್ರ ಮೋದಿಯವರ ಭಾವಚಿತ್ರವಿದೆ! ಹಾಗಾಗಿ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಲಾಗುತ್ತಿದೆ.

ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಾಗಲೂ ಸಹ ಕ್ರೀಡಾಪಟುಗಳ ಫೋಟೊದ ಬದಲು ಮೋದಿಯವರ ದೊಡ್ಡ ಭಾವಚಿತ್ರಗಳನ್ನು ಹಾಕಲಾಗಿತ್ತು. ಆಗಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಎಲ್ಲರ ಹುಟ್ಟು ಹಬ್ಬದ ಅಥವಾ ಸಾಧನೆಯ ಸಂದರ್ಭದಲ್ಲಿ ಸಾಧಕರ ಚಿತ್ರವನ್ನು ಅತಿ ಚಿಕ್ಕದಾಗಿ ಮತ್ತು ಮೋದಿಯವರ ಫೋಟೊವನ್ನು ಬಹಳ ದೊಡ್ಡದಾಗಿ ಹಾಕಿ ವ್ಯಂಗ್ಯ ಮಾಡಲಾಗಿತ್ತು.

ಇಂದಿನ ಮೋದಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಭಾವನೆಗಳು ಈ ಕೆಳಗಿನಂತಿವೆ.

https://twitter.com/asgarhid/status/1443777548597424136/photo/1


ಇದನ್ನೂ ಓದಿ: ಬಜರಂಗದಳದ ‘ಮೋರಲ್ ಪೊಲೀಸಿಂಗ್’ ಅನ್ನು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕಿಗೆ ಬಹಿರಂಗ ಬೆದರಿಕೆ

LEAVE A REPLY

Please enter your comment!
Please enter your name here