ಕುಟುಂಬ ಯೋಜನೆಯೊಂದರ ಘೋಷಣೆಯಾದ ’ನಾವಿಬ್ಬರು ನಮಗಿಬ್ಬರು’ ಎಂಬ ಆಧಾರದಲ್ಲಿ, ದೇಶವನ್ನು ನಾಲ್ಕು ಜನರು ನಡೆಸುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿಗಳಾದ ಅಂಬಾನಿ-ಅದಾನಿಯ ಹೆಸರನ್ನು ಉಲ್ಲೇಖಿಸದೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಿನ್ನೆ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರತಿಪಕ್ಷಗಳು ರೈತರ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಿವೆ ಆದರೆ ಕೃಷಿ ಕಾನೂನುಗಳ ವಿಷಯ ಮತ್ತು ಉದ್ದೇಶದ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಇಂದು ನಾನು ಅವರನ್ನು ಸಂತೋಷಪಡಿಸಬೇಕು ಮತ್ತು ಕಾನೂನುಗಳ ವಿಷಯ ಮತ್ತು ಉದ್ದೇಶದ ಬಗ್ಗೆ ಮಾತನಾಡಬೇಕು ಭಾವಿಸಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ
“ಮೊದಲ ಕಾನೂನು ದೇಶದಲ್ಲಿ ಎಲ್ಲಿ ಬೇಕಾದರೂ ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬಹುದು ಎಂದು ಹೇಳುತ್ತದೆ. ದೇಶದಲ್ಲಿ ಎಲ್ಲಿಯಾದರೂ ಖರೀದಿ ಮಾಡಬಹುದಾಗಿದ್ದರೆ, ಮಂಡಿಗಳಿಗೆ ಯಾರು ಹೋಗುತ್ತಾರೆ? ಮೊದಲ ಕಾನೂನಿನ ವಿಷಯವೇನೆಂದರೆ ಮಂಡಿಗಳನ್ನು ಮುಗಿಸುವುದು” ಎಂದು ರಾಹುಲ್ ಗಾಂಧಿ ಹೇಳಿದರು.
There was a slogan for family planning 'Hum do hamare do'. Like Corona comes back in a different form, this slogan has come back in a different form. Nation is run by 4 people – 'Hum do hamare do'. Everyone knows their names. Whose govt is it, of 'hum do, hamare do': Rahul Gandhi pic.twitter.com/hFp1ipkOu7
— ANI (@ANI) February 11, 2021
ಇದನ್ನೂ ಓದಿ: ಜಗತ್ತಿನ ಸರ್ವಾಧಿಕಾರಿಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ
“ಎರಡನೆಯ ಕಾನೂನಿನ ವಿಷಯವೆಂದರೆ ದೊಡ್ಡ ಉದ್ಯಮಿಗಳು ತಮಗೆ ಬೇಕಾದಷ್ಟು ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಅವರು ಬಯಸಿದಷ್ಟು ಸಂಗ್ರಹಿಸಬಹುದು. ಈ ಮೂಲಕ ಅಗತ್ಯ ಸರಕುಗಳ ಕಾಯ್ದೆಯನ್ನು ಕೊನೆಗೊಳಿಸಿ, ಭಾರತದಲ್ಲಿ ಅನಿಯಂತ್ರಿತ ಸಂಗ್ರಹಣೆ ಪ್ರಾರಂಭಿಸುವುದು ಎರಡನೆ ಕಾನೂನಿನ ವಿಷಯವಾಗಿದೆ
ಮೂರನೆಯ ಕಾನೂನಿನ ವಿಷಯವೆಂದರೆ, ಒಬ್ಬ ರೈತ ತನ್ನ ಬೆಳೆಗಳಿಗೆ ಸರಿಯಾದ ಬೆಲೆ ನೀಡುವಂತೆ ಭಾರತದ ದೊಡ್ಡ ಉದ್ಯಮಿ ಮುಂದೆ ಹೋದಾಗ, ಅವನನ್ನು ನ್ಯಾಯಾಲಯಕ್ಕೆ ಹೋಗದಂತೆ ತಡೆಯುವುದಾಗಿದೆ” ಎಂದು ರಾಹುಲ್ ಗಾಂಧಿ ಸದನದಲ್ಲಿ ಹೇಳಿದರು.
“ಕುಟುಂಬ ಯೋಜನೆಗಾಗಿ ‘ನಾವಿಬ್ಬರು ನಮಗಿಬ್ಬರು’ ಎಂಬ ಘೋಷಣೆ ಇತ್ತು. ಕೊರೊನಾ ಮತ್ತೊಂದು ರೂಪದಲ್ಲಿ ಬಂದಂತೆ ಈ ಘೋಷಣೆಯು ಬೇರೆ ರೂಪದಲ್ಲಿ ಬಂದಿದೆ. ’ನಾವಿಬ್ಬರು ನಮಗಿಬ್ಬರು’ ಎಂಬಂತೆ ದೇಶವನ್ನು 4 ಜನರು ನಡೆಸುತ್ತಿದ್ದಾರೆ. ಎಲ್ಲರಿಗೂ ಅವರ ಹೆಸರು ತಿಳಿದಿದೆ, ಇದು ‘ನಾವಿಬ್ಬರು ನಮಗಿಬ್ಬರು’ ಸರ್ಕಾರ” ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ಈ ಸರ್ಕಾರದಿಂದ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ – ರಾಹುಲ್ ಗಾಂಧಿ


