Homeಮುಖಪುಟಸಿಎಎಯಿಂದ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವುದಿಲ್ಲ: ಅಮಿತ್ ಶಾ

ಸಿಎಎಯಿಂದ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವುದಿಲ್ಲ: ಅಮಿತ್ ಶಾ

ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸುವಂತೆ ನಾನು ಜನರಿಗೆ ಕರೆ ನೀಡುತ್ತೇನೆ. ಆಗ ನಾವು ನಿಮಗಾಗಿ ಸುವರ್ಣ ಬಾಂಗ್ಲಾವನ್ನು ರಚಿಸುತ್ತೇವೆ...

- Advertisement -
- Advertisement -

ಯಾವುದೇ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಯಾವುದೇ ನಿಬಂಧನೆಯನ್ನು ಸಿಎಎ ಹೊಂದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿರುವ ಅವರು “ಕಳೆದ 70 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ಪೌರತ್ವ ನೀಡಲು ನಾವು ಬಯಸುತ್ತೇವೆ. ಅದಕ್ಕಾಗಿ ಸಿಎಎ ಜಾರಿಗೊಳಿಸಿದ್ದೇವೆ. ವದಂತಿಯನ್ನು ಹರಡುವವರಿಗೆ ಬಲಿಯಾಗಬೇಡಿ” ಎಂದು ತಿಳಿಸಿದ್ದಾರೆ.

ನಾವು ಠಾಕೂರ್‌ನಗರ ರೈಲ್ವೆ ನಿಲ್ದಾಣವನ್ನು ಶ್ರೀಧಮ್ ಠಾಕೂರ್‌ನಗರ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಲು ಬಯಸುತ್ತೇವೆ. ಆದರೆ ಮಮತಾ ಸರ್ಕಾರವು ಇದಕ್ಕಾಗಿ ನಮಗೆ ಅನುಮತಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರವನ್ನು 2019 ರಲ್ಲಿ ಆಯ್ಕೆ ಮಾಡಿದರೆ ನಾವು ಪೌರತ್ವ ತಿದ್ದುಪಡಿ ಕಾನೂನು ತರುತ್ತೇವೆ ಎಂದು ಹೇಳಿದ್ದೆವು. ಅದು ಮಾತುವಾ ಸಮಾಜದ ಜನರಿಗೆ ಭಾರತದ ಪೌರತ್ವವನ್ನು ನೀಡುತ್ತದೆ. ನಾವು 2020 ರಲ್ಲಿ ಸಿಎಎ ತಂದಿದ್ದೇವೆ ಮತ್ತು ಇಂದು ಕಾನೂನು ಅಸ್ತಿತ್ವಕ್ಕೆ ಬಂದಿದೆ. ಇದು ಸಂಸತ್ತು ರಚಿಸಿದ ಕಾನೂನು ಮತ್ತು ಅದನ್ನು ತಡೆಯಲು ಮಮತಾ ಬ್ಯಾನರ್ಜಿಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಮುಂಬರುವ ಚುನಾವಣೆಗಳಲ್ಲಿ ಅವರು ಸೋಲಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ನಾವು ಸಿಎಎ ಅನ್ನು ರೂಪಿಸತ್ತಿದ್ದೇವೆ ಮತ್ತು ದೇಶಾದ್ಯಂತ ಕೊರೊನಾ ಲಸಿಕೆ ಪೂರ್ಣಗೊಳಿಸಿದ ಕೂಡಲೇ ನಿಮಗೆಲ್ಲರಿಗೂ ಪೌರತ್ವವನ್ನು ನೀಡುತ್ತೇವೆ ಎಂದು ನಾನು ನಿಮ್ಮೆಲ್ಲರಿಗೂ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಂತೆ ನಾನು ಜನರಿಗೆ ಕರೆ ನೀಡುತ್ತೇನೆ. ಆಗ ನಾವು ನಿಮಗಾಗಿ ಸುವರ್ಣ ಬಾಂಗ್ಲಾವನ್ನು ರಚಿಸುತ್ತೇವೆ ಎಂದು ಶಾ ಹೇಳಿದ್ದಾರೆ.

ಗುರುಚಂದ್ ಠಾಕೂರ್ ಮತ್ತು ಹರಿಶ್ಚಂದ್ರ ಠಾಕೂರ್ ಹೇಳಿದ ಮಾರ್ಗ, ಮೋದಿ ಸರ್ಕಾರ ಆ ಹಾದಿಯಲ್ಲಿ ಸಾಗಿದೆ. ಮೋದಿ ಸರ್ಕಾರ ದಲಿತರ, ಶೋಷಿತ, ಹಿಂದುಳಿದವರ ಕಲ್ಯಾಣಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ.

ಸಿಎಎಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವವರಿಗೆ ನಾನು ಖಂಡಿತವಾಗಿಯೂ ಕಠಿಣ ಉತ್ತರ ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ. ಆದ್ದರಿಂದ ಇಂದು ನಾನು ಈ ಪವಿತ್ರ ಭೂಮಿಗೆ ಬಂದಿದ್ದೇನೆ. ಕೆಲವು ಸಂದರ್ಭಗಳಿಂದಾಗಿ ನನ್ನ ಪ್ರವಾಸವನ್ನು ರದ್ದುಗೊಳಿಸಿದಾಗ ಮಮತಾ ದೀದಿ ತುಂಬಾ ಸಂತೋಷಪಟ್ಟರು. ಆದರೆ ಅವರು ಚುನಾವಣೆಯಲ್ಲಿ ಸೋಲುವವರೆಗೂ ನಾನು ಮತ್ತೆ ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಶಾ ತಿಳಿಸಿದ್ದಾರೆ.


ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 200 ಸ್ಥಾನ ಗೆಲ್ಲುತ್ತೇವೆ: ಅಮಿತ್ ಶಾಅಮಿತ್ ಶಾ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಲು ಪ್ರಯತ್ನಿಸುತ್ತಿದ್ದಾರೆ: ಟಿಎಂಸಿ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read