ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಆರೋಪ: ಸ್ವಯಂಘೋಷಿತ ದೇವಮಾನವನ ಬಂಧನ
PC: Newstrend

ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಲ್ಲಿ ಸ್ವಯಂಘೋಷಿತ ದೇವಮಾನವ ಯೋಗೇಂದ್ರ ಮೆಹ್ತಾ ಎಂಬಾತನನ್ನು ಜೈಪುರ ಪೊಲಿಸರು ಬಂಧಿಸಿದ್ದಾರೆ.

ಆರೋಪಿ ಯೋಗೇಂದ್ರ ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಸುಮಾರು ಮೂರು ವಾರಗಳ ನಂತರ ಪೊಲೀಸರು ಆರೋಪಿಯನ್ನು ಮಂಳವಾರ ಬಂಧಿಸಿದ್ದಾರೆ. ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಈ ಸ್ವಯಂಘೋಷಿತ ದೇವಮಾನವ ಮೆಹ್ತಾ (56) ವಿಸ್ತಾರವಾದ ಆಶ್ರಮವನ್ನು ಹೊಂದಿದ್ದಾರೆ.

2005 ಮತ್ತು 2017 ರ ಸಮಯದಲ್ಲಿ ತನ್ನ ಆಶ್ರಮದಲ್ಲಿ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮುಖ್ಯ ದೂರುದಾರರು ಮತ್ತು ಆಕೆಯ ಇಬ್ಬರು ಅತ್ತಿಗೆ ಮೇ 4 ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾದ ಒಂದು ದಿನದ ನಂತರ ಮತ್ತೊಬ್ಬ ಮಹಿಳೆ ಕೂಡ ಮುಂದೆ ಬಂದು ಅತ್ಯಾಚಾರದ ದೂರು ನೀಡಿದ್ದಾರೆ.

ಇದನ್ನೂ ಓದಿ:ಕೊರೊನಾ ವೈಫಲ್ಯ: ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ತಲೆದಂಡ?

“ನನ್ನ ಪತಿ 1998 ರಿಂದ ಆಶ್ರಮಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಯೋಗೇಂದ್ರ ಮೆಹ್ತಾ ಒಂದು ದಿನ ನನ್ನ ಗಂಡನನ್ನು ಅವರ ಇಡೀ ಕುಟುಂಬದೊಂದಿಗೆ ಬರಲು ಹೇಳಿದ್ದರು. ಹೀಗಾಗಿ 2005 ರಲ್ಲಿ ನಾನು ಆಶ್ರಮಕ್ಕೆ ಮೊದಲ ಬಾರಿ ಹೋಗಿದ್ದೆ. ನಂತರ ನಾನು ನಿಯಮಿತವಾಗಿ ಆಶ್ರಮಕ್ಕೆ ಭೇಟಿ ನೀಡಲು ಪ್ರಾರಂಭಿಸಿದೆ. ಆರಂಭದಲ್ಲಿ, ಎಲ್ಲವೂ ಸರಿಯಾಗಿತ್ತು. ನಾನು ಪ್ರತಿ ಆರು ತಿಂಗಳಿಗೊಮ್ಮೆ ಮೂರು-ನಾಲ್ಕು ದಿನಗಳ ಕಾಲ ಆಶ್ರಮದಲ್ಲಿಯೇ ಇರುತ್ತಿದ್ದೆ. 2005 ರಲ್ಲಿ ಅಲ್ಲಿ ತಂಗಿದ್ದ ಸಮಯದಲ್ಲಿ, ನನ್ನನ್ನು ಆರೋಪಿಗಳ ಸಹಾಯಕರು ಅವರ ಕೋಣೆಗೆ ಕರಕೊಂಡು ಹೋದರರು. ನನಗೆ ಸ್ವಲ್ಪ ಕುಡಿಯಲು ಪಾನೀಯ ನೀಡಿ, ಅತ್ಯಾಚಾರ ಮಾಡಲಾಯಿತು. 2017 ರವರೆಗೆ ಆಶ್ರಮದಲ್ಲಿ ಮೆಹ್ತಾ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ”ಎಂದು ಮುಖ್ಯ ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರ. ಆಕೆಯ ಅತ್ತಿಗೆಯರು ಕೂಡ ಇದೇ ರೀತಿ ಶೋಷಣೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

“ನಾನು ಆಕ್ಷೇಪಿಸಿದ ಪ್ರತಿ ಬಾರಿಯೂ, ಇದು ಒಂದು ಆಶೀರ್ವಾದ ಎಂದು ಮೆಹ್ತಾ ಹೇಳಿದ್ದರು. ಅವರು ಮಾಡುತ್ತಿದ್ದ ಲೈಂಗಿಕ ದುರುಪಯೋಗದ ಬಗ್ಗೆ ನಾನು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬ ಮಹಿಳೆ ಕೂಡ ಇದೇ ಅವಧಿಯಲ್ಲಿ ತಾನು ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.

ಸ್ವಯಂಘೋಷಿತ ದೇವಮಾನವ ಎಂದು ಹೇಳಿಕೊಂಡಿದ್ದ ಯೋಗೇಂದ್ರ ಮೆಹ್ತಾ ಬಮಧನ ಅಷ್ಟು ಸುಲಭದ್ದಾಗಿರಲಿಲ್ಲ. ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು ಇವರ ಒತ್ತಡದ ಕಾರಣ ತುಂಬಾ ಕಷ್ಟದ್ದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ತೇಜಸ್ವಿ ಸೂರ್ಯ ಪ್ರಚಾರ: ತರಾಟೆ ತೆಗೆದುಕೊಂಡ ಜನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here