Homeಮುಖಪುಟ’ಟ್ವಿಟರ್‌ ಬಿಡಿ, ಅದು ಉತ್ತಮ ಸ್ಥಳವಾಗಿಯೆ ಉಳಿಯಲಿ’- ‘ಕೂ’ ಸೇರುತ್ತಿರುವ ಬಿಜೆಪಿಗರ ಕಾಲೆಳೆದ ನೆಟ್ಟಿಗರು

’ಟ್ವಿಟರ್‌ ಬಿಡಿ, ಅದು ಉತ್ತಮ ಸ್ಥಳವಾಗಿಯೆ ಉಳಿಯಲಿ’- ‘ಕೂ’ ಸೇರುತ್ತಿರುವ ಬಿಜೆಪಿಗರ ಕಾಲೆಳೆದ ನೆಟ್ಟಿಗರು

- Advertisement -
- Advertisement -

ತಾನು ನಿರ್ದೇಶಿಸಿರುವ ಸಾವಿರಾರು ಖಾತೆಯನ್ನು ತಡೆಹಿಡಿಯದೆ ಇರುವುದರಿಂದ ಕೇಂದ್ರ ಸರ್ಕಾರವು ಟ್ವಿಟರ್ ವಿರುದ್ದ ತಿರುಗಿ ಬಿದ್ದಿದೆ. ಈ ಹಿನ್ನಲೆಯಲ್ಲಿ ಟ್ವಿಟರ್‌ ಮಾದರಿಯ ಸಾಮಾಜಿಕ ಜಾಲತಾಣವಾದ ‘ಕೂ’ ಅಪ್ಲಿಕೇಷನನ್ನು ಬಳಸುವಂತೆ ಕೇಂದ್ರ ಸರ್ಕಾರವು ಕೇಳಿಕೊಂಡಿದೆ. ಹೊಸ ಅಪ್ಲಿಕೇಷನ್‌ ಅನ್ನು ಬಿಜೆಪಿ ಹಾಗು ಅದರ ಬೆಂಬಲಿಗರು ಹೆಚ್ಚಾಗಿ ಬೆಂಬಲಿಸುತ್ತಿದ್ದು, ಅದಕ್ಕಾಗಿ ಹಲವಾರು ಜನರು ಟ್ವಿಟ್ಟರ್‌‌ನಲ್ಲಿ ವ್ಯಂಗ್ಯವಾಡಿದ್ದಾರೆ.

” ‘ಕೂ’ ತೆರಳುವವರು ಬೇಗ ತೆರಳಿದರೆ ಟ್ವಿಟರ್‌ ಹೆಚ್ಚು ಒಳ್ಳೆಯ ಸ್ಥಳವಾಗಲಿದೆ” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಬಿಜೆಪಿಯು ಪ್ರಬಲ ಐಟಿ ಸೆಲ್‌ ತಂಡವನ್ನು ಹೊಂದಿದ್ದು ತಮ್ಮ ಪರವಾಗಿ ಹಲವಾರು ಟ್ರೆಂಡ್‌ಗಳನ್ನು ಸೃಷ್ಟಿ ಮಾಡುತ್ತದೆ ಹಾಗೂ ಹಲವು ನಕಲಿ ಖಾತೆಗಳ ಮೂಲಕ ತನ್ನ ಪ್ರೊಪಗಾಂಡವನ್ನು ಹರಡುತ್ತಿದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ಪರವಾಗಿ ಬಿಜೆಪಿಯು 85 ಸಾವಿರ ನಕಲಿ ಖಾತೆಯನ್ನು ಸೃಷ್ಟಿ ಮಾಡಿತ್ತು ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು.

ಇದನ್ನೂ ಓದಿ: ‘ಕೂ’ ಆಪ್ ಸುರಕ್ಷಿತವೆ? ಪ್ರಶ್ನೆಗೆ ’ರಾಷ್ಟ್ರೀಯತೆ’ ಹೆಸರು ಹೇಳಿ ತಪ್ಪಿಸಿಕೊಂಡ ’ಕೂ’ ಸಂಸ್ಥಾಪಕ!

ಸಾಮಾಜಿಕ ಕಾರ್ಯಕರ್ತ ಶ್ರೀವತ್ಸ ಅವರು, “KOO ಗೆ ಚೀನಾ ಹಣ ಹೂಡಿಕೆ ಮಾಡಿದೆ ಮತ್ತು ಅದನ್ನು ಅಲ್ಲಿಯೆ ನೋಂದಾಯಿಸಲಾಗಿದೆ. ರಾಮ್‌ದೇವ್‌ ತಮ್ಮ ಪತಂಜಲಿ ಜೇನಿಗೆ ಚೀನೀ ಸಕ್ಕರೆ ಪಾಕವನ್ನು ಸೇರಿಸುತ್ತಾರೆ. ಜಯ್ ಶಾ ಬಿಸಿಸಿಐನಲ್ಲಿ ಚೀನೀ ಹಣವನ್ನು ತೆಗೆದುಕೊಳ್ಳುತ್ತಾರೆ. ಅರ್ನಾಬ್ ಅವರ ರಿಪಬ್ಲಿಕ್ ಟಿವಿ ಚೀನೀ ಕಂಪನಿಗಳಿಂದ ಜಾಹೀರಾತುಗಳನ್ನು ತೆಗೆದುಕೊಳ್ಳುತ್ತದೆ, ಇವರೆಲ್ಲರೂ ‘ರಾಷ್ಟ್ರೀಯವಾದಿಗಳು’. ಆದರೆ ನೀವು ಕ್ಯಾಮ್‌ಸ್ಕಾನರ್ ಅಪ್ಲಿಕೇಶನ್ ಬಳಸುತ್ತಿದ್ದರೆ ಅಥವಾ PUBG ವಿಡಿಯೋ ಗೇಮ್ ಆಡಿದರೆ ‘ದೇಶ ವಿರೋಧಿ’ ಆಗಿರುತ್ತೀರಿ” ಎಂದು ಬಿಜೆಪಿಯನ್ನು ಹಾಗೂ ಬಿಜೆಪಿ ಬೆಂಬಲಿಗರನ್ನು ಕುಕ್ಕಿದ್ದಾರೆ.

ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೂ ಆಪ್‌ನಿಂದ ಬಳಕೆದಾರರ ಮಾಹಿತಿ ಸೋರಿಕೆಯಾಗುವ ಬಗ್ಗೆ ವ್ಯಂಗ್ಯವಾಗಿ ಬಿಜೆಪಿ ಬೆಂಬಲಿಗರನ್ನು ಕಾಲೆಳೆದಿದ್ದಾರೆ.

ಇದನ್ನೂ ಓದಿ: ನಿಜಕ್ಕೂ ’ಕೂ’ ಸುರಕ್ಷಿತವೆ? ಸಾಮಾಜಿಕ ಜಾಲತಾಣಗಳ ಭದ್ರತಾ ಸಂಶೋಧಕರು ಹೇಳುತ್ತಿರುವುದೇನು?

ಪರಿಸರ ಹೋರಾಟಗಾರ್ತಿ ಲಿಸಿಪ್ರಿಯ ಅವರು, “ಕೂ ಅಮೇರಿಕಾದಲ್ಲಿ ಹುಟ್ಟಿದ ಆಪ್ ಆಗಿದೆ. ಚೀನಾದಲ್ಲಿ ರಿಜಿಸ್ಟರ್‌ ಆಗಿದೆ. ಹಾಗಾದರೆ ನಿಜವಾಗಿಯು ಇದು ಆತ್ಮನಿರ್ಭರ್‌ ಭಾರತ ಅಲ್ಲವೆ” ಎಂದು ಪ್ರಶ್ನಿಸಿದ್ದಾರೆ.

ಕೂ ಆಪ್‌ನಲ್ಲಿ ನಾಲ್ಕನೇ ಮೂರರಷ್ಟು ಪಾಲನ್ನು ಇನ್ಪೋಸಿಸ್ ಮಾಜಿ ನಿರ್ದೇಶಕ, ಬಿಜೆಪಿ ಬೆಂಬಲಿಗ ಉದ್ಯಮಿ ಮೋಹನ್ ದಾಸ್ ಪೈ ಹೊಂದಿದ್ದಾರೆ. ಉಳಿದಂತೆ ಚೀನಾದ ಕಂಪೆನಿ ಕೂಡಾ ಇದರಲ್ಲಿ ಹೂಡಿಕೆಯನ್ನು ಹೊಂದಿದೆ.

ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ಯ್ರ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಸದಾ ಬದ್ಧ: ಟ್ವಿಟರ್‌ ಬೆಂಬಲಕ್ಕೆ ಅಮೆರಿಕ

ಅಷ್ಟೇ ಅಲ್ಲದೆ ಈ ಆಪ್‌ ಬಗ್ಗೆ ಹಲವಾರು ಅಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಆಪ್‌ ಸುರಕ್ಷಿತ ಅಲ್ಲ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಎಲಿಯಟ್ ಆಂಡರ್ಸನ್ ಎಂದು ಜನಪ್ರಿಯವಾಗಿರುವ ಫ್ರೆಂಚ್ ಸೈಬರ್‌ ಸೆಕ್ಯುರಿಟಿ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್, ’ಕೂ’ ಅಪ್ಲಿಕೇಷನ್‌ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತದೆ ಎಂದು ಕಂಡು ಹಿಡಿದಿದ್ದಾರೆ. ಬ್ಯಾಪ್ಟಿಸ್ಟ್ ಈ ಹಿಂದೆ ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ಎತ್ತಿ ತೋರಿಸಿದ್ದು, ಇದರ ನಂತರ ಅವರು ಜನಪ್ರಿಯರಾಗಿದ್ದರು.

ಬ್ಯಾಪ್ಟಿಸ್ಟ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ‘ಕೂ’ ಸಂಸ್ಥಾಪಕ ಅಪ್ರಮೇಯ, “ಕೂ ಪ್ರೋಫೈಲ್‌ನಲ್ಲಿ ಬಳಕೆದಾರರು ತಾವಾಗಿಯೆ ಈ ಮಾಹಿತಿಯನ್ನು ಬಹಿರಂಗ ಪಡಿಸಿದರಷ್ಟೇ ಅದು ಬಹಿರಂಗವಾಗುತ್ತದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಬ್ಯಾಷ್ಟಿಸ್ಟ್, ಸೋನಾಲ್ ಗೋಯಲ್ ಎಂಬ ಐಎಎಸ್ ಅಧಿಕಾರಿಯ ‘ಕೂ’ ಫ್ರೋಫೈಲ್‌ ಒಂದರ ಸ್ಕ್ರೀನ್ ಶಾರ್ಟ್ ಹಾಕಿ ಉತ್ತರಿಸಿದ್ದಾರೆ. ಅದರಲ್ಲಿ “ಮೊದಲಿಗೆ ಕಂಡು ಹಿಡಿದ ಫ್ರೋಫೈಲ್ ಇದು.  ಈ ಪ್ರೋಫೈಲ್‌‌ನಲ್ಲಿ ಇವರು ಯಾವುದೆ ಹುಟ್ಟಿದ ದಿನಾಂಕ, ಅವರ ಲಿಂಗ, ಅವರ ವೈವಾಹಿಕ ಸ್ಥಿತಿಯ ಬಗ್ಗೆ ಬಹಿರಂಗಪಡಿಸಿದ್ದಾರೆಯೆ ಎಂದು” ಪ್ರಶ್ನಿಸಿದ್ದಾರೆ. ಆದರೆ ಅಪ್ರಮೇಯ ಅವರು ರಾಷ್ಟ್ರೀಯತೆಯ ಹೆಸರು ಹೇಳಿ ಪ್ರಶ್ನೆಯಿಂದ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್‌ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್‌ಗೆ ಕೇಂದ್ರ ತಾಕೀತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...