Homeಮುಖಪುಟಪಂಜಾಬಿ ರೈತರ ಸಿರಿತನದ ಹಿಂದಿನ ಗುಟ್ಟೇನು?; ರಾಜಮೋಹನ್ ಗಾಂಧಿ ಅವರ ಪುಸ್ತಕದಿಂದ..

ಪಂಜಾಬಿ ರೈತರ ಸಿರಿತನದ ಹಿಂದಿನ ಗುಟ್ಟೇನು?; ರಾಜಮೋಹನ್ ಗಾಂಧಿ ಅವರ ಪುಸ್ತಕದಿಂದ..

ದೇಶದ ಹೃದಯಭಾಗ ದೆಹಲಿ ಎನ್ನಲಾಗುತ್ತದೆ. ಆದರೆ ಇಂದು ದೇಶದ ಹೃದಯಭಾಗವಾಗಿರುವವರು ಪಂಜಾಬಿನ ರೈತರು. 70ಕ್ಕೂ ಹೆಚ್ಚು ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಪಂಜಾಬ್, ಕೃಷಿ, ರೈತ ಎಲ್ಲವೂ ಚರ್ಚೆಯ ಕೇಂದ್ರದಲ್ಲಿವೆ. ಬ್ರಿಟಿಷ್ ಕಾಲದಿಂದಲೂ ತಮ್ಮ ನೆಲ-ಜಲ-ಕೃಷಿಗಾಗಿ ಹೋರಾಟ ನಡೆಸಿದ್ದು, ಪಂಜಾಬಿಗಳ ಇತಿಹಾಸ. ರಾಜ್ ಮೋಹನ್ ಗಾಂಧಿಯವರ, ’ಪಂಜಾಬ್; ಎ ಹಿಸ್ಟರಿ ಫ್ರಮ್ ಔರಂಗ ಜೇಬ್ ಟು ಮೌಂಟ್ ಬ್ಯಾಟನ್ ಕೃತಿ ಆ ಐತಿಹಾಸಿಕ ಸಂಗತಿಗಳನ್ನು ವಿಸ್ತೃತವಾಗಿ ದಾಖಲಿಸಿದೆ. ಈ ಕೃತಿಯಿಂದ ಆಯ್ದ ಭಾಗದ ಅನುವಾದ ಇಲ್ಲಿದೆ.

- Advertisement -
- Advertisement -

ಪಂಜಾಬ್‌ನಲ್ಲಿ ಮತ್ತು ಭಾರತದಾದ್ಯಂತ ಬಂಡಾಯಗಳನ್ನು ಹತ್ತಿಕ್ಕಲಾಗಿದ್ದು, ದಶಕಗಳ ಸಾಮ್ರಾಜ್ಯಶಾಹಿ ಯಶಸ್ಸಿನಿಂದಾಗಿ. 1904ರ ಗೆಝೆಟಿಯರ್‌ನಲ್ಲಿ ಈ ಕುರಿತು ವಿವರಣೆ ನೀಡಿದ ಬ್ರಿಟಿಷ್ ಅಧಿಕಾರಿ, “ಈ ಜಿಲ್ಲೆಯ ನಂತರದ ಇತಿಹಾಸವು ರಾಜಕೀಯಕ್ಕಿಂತ ಹೆಚ್ಚು ಸಾಮಾಜಿಕವಾದದ್ದು. ಸಾಮಾನ್ಯ ಆಡಳಿತದ ದಿನಚರಿಯಿಂದ ಕೂಡಿದ್ದು, ಯಾವುದೇ ರೀತಿಯ ಅಡ್ಡಿಗಳಿಲ್ಲದೇ ಸಾಗಿತ್ತು. ಹಾಗಾಗಿ ತೀರ್ಪು ಇಡೀ ಪಂಜಾಬ್‌ಗೆ ಅನ್ವಯವಾಗಬಹುದು”

ಬ್ರಿಟಿಷ್ ಸಾಮ್ರಾಜ್ಯ ಬಂಡಾಯದ ಪಾಠಗಳನ್ನು ಅಧಿಕಾರಿಗಳು ಚೆನ್ನಾಗಿಯೇ ಅರ್ಥ ಮಾಡಿಕೊಂಡರು. ಆದರೆ ಪಂಜಾಬಿಗಳಾಗಲಿ ಮತ್ತು ಇತರೆ ಭಾರತೀಯರಾಗಲಿ, ಅರ್ಥಮಾಡಿಕೊಳ್ಳಲಿಲ್ಲ. ಇನ್ನೊಂದು ಬಹು ಮುಖ್ಯವಾದ ಪಾಠವೆಂದರೆ, ಮುಸ್ಲಿಮ್-ಹಿಂದು ಸಹಭಾಗಿತ್ವ, ಸಂಘರ್ಷಕ್ಕೆ ವಿಶೇಷ ಬಲವನ್ನೇ ನೀಡಿತ್ತು. ಇನ್ನೊಂದು, ಉಳ್ಳವರ ನಡುವೆ ಇದ್ದ ಬೇಧ ವೈಫಲ್ಯವನ್ನು ಖಚಿತಗೊಳಿಸಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ದಂಗೆಯನ್ನು ಮುನ್ನಡೆಸುತ್ತಿದ್ದ ನಾಯಕರು ಯಾವುದೇ ರೀತಿಯಲ್ಲಿ ಭಾರತೀಯ ರೈತರೊಂದಿಗೆ ಒಂದು ಸದೃಢವಾದ ಸಂಬಂಧವನ್ನು ಕಟ್ಟಿಕೊಳ್ಳಲಿಲ್ಲ.

ಚತುರತೆಯಿಂದ ಸಾಮ್ರಾಜ್ಯವು ತನ್ನ ಕಾರ್ಯತಂತ್ರವನ್ನು ಮುಂದುವರೆಸಿ, ಪಂಜಾಬಿನ ಮುಸ್ಲಿಮರು, ಹಿಂದುಗಳು ಮತ್ತು ಸಿಖ್ಖರು ತಮ್ಮ ಧರ್ಮದತ್ತ ಗಮನವಿರಿಸುವಂತೆ ಮಾಡಿ ಒಬ್ಬರನ್ನು, ಇನ್ನೊಬ್ಬರಿಂದ ಬೇರೆ ಮಾಡಿದರು. 1857ರ ನಂತರ ಭಾರತದಲ್ಲಿದ್ದ ಬ್ರಿಟಿಷರ್ ಆಡಳಿತಗಾರರು ತೀರ್ಮಾನಿಸಿದ್ದು ಇವುಗಳನ್ನು:

* ಕ್ರೈಸ್ತ ಧರ್ಮವನ್ನು ಬ್ರಿಟಿಷ್ ಆಳ್ವಿಕೆಯಿಂದ ಬೇರ್ಪಡಿಸುವುದು

* ಭಾರತದ ಮುಖ್ಯರು, ಶ್ರೀಮಂತ ವ್ಯಕ್ತಿಗಳ ಸೂಕ್ಷ್ಮ ಸಂಗತಿಗಳನ್ನು ಗುರುತಿಸುವುದು. ಆದರೆ

* ಪಂಜಾಬ್ ಮತ್ತು ಉಳಿದ ಭಾರತವನ್ನು ಶ್ರೇಷ್ಠ ಕುಲದವರಂತೆ ಆಳುವುದು. ಆಳುವವರು ಮತ್ತು ಪ್ರಜೆಗಳ ನಡುವೆ ಯಾವುದೇ ಸಮಾನತೆಯ ಭಾವ ಇಲ್ಲವಾಗಿಸುವುದು.

* ಉತ್ತಮ ರಸ್ತೆಗಳು, ರೈಲು ಮಾರ್ಗಗಳು, ಅಂಚೆ ಮತ್ತು ಟೆಲಿಗ್ರಾಫ್ ಆಫೀಸ್‌ಗಳು, ಕಾಲುವೆಗಳು, ಶಾಲೆಗಳು, ಆಸ್ಪತ್ರೆಗಳು, ಕಾಲೇಜ್, ವಿಶ್ವವಿದ್ಯಾಲಯಗಳು ಮತ್ತು ಕೋರ್ಟ್‌ಗಳನ್ನು ನೀಡಿ ಪಂಜಾಬಿಗಳಿಗೂ ಮತ್ತು ಭಾರತೀಯರಿಗೆ ಉತ್ತಮ ಗುಣಮಟ್ಟದ ಜೀವನ ಕಲ್ಪಿಸುವುದು

* ಕೃಷಿ ಅಭಿವೃದ್ಧಿಪಡಿಸುವುದು, ವಿಶೇಷವಾಗಿ ರೈತರನ್ನು ಒಳಗೊಳ್ಳುವುದು.

* ಸಾಮ್ರಾಜ್ಯದ ಸೈನ್ಯಕ್ಕೆ ಗ್ರಾಮೀಣ ಪಂಜಾಬಿನಿಂದ ಹೊಸ ಯೋಧರನ್ನು ನೇಮಿಸಿಕೊಳ್ಳುವುದು, ಪ್ರತಿ ನೇಮಿಕಾತಿಯ ಸಂದರ್ಭದಲ್ಲಿ ಭಿನ್ನ ಜಾತಿ, ಧರ್ಮದಿಂದ ಆಯ್ಕೆ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೇ ಭಾರತೀಯ ಯೋಧರ ಕೈಗೆ ಯಾವುದೇ ದೊಡ್ಡ ಅಸ್ತ್ರ ಸಿಗದಂತೆ ನೋಡಿಕೊಳ್ಳುವುದು. ಕಡೆಯದಾಗಿ

* ಯೋಧನನ್ನು ಹಳ್ಳಿಯ ಸಾಮ್ರಾಜ್ಯದ ಪರವಾದ ಏಜಂಟನನ್ನಾಗಿ ಮಾಡುವುದನ್ನು ಗುರಿಯಾಗಿಸಿಕೊಳ್ಳುವುದು
ಈ ಕಾರ್ಯತಂತ್ರದ ಒಂದು ಭಾಗ 1858ರ ವಿಕ್ಟೋರಿಯಾ ರಾಣಿಯ ಘೋಷಣೆಯಲ್ಲಿ ಪ್ರಸ್ತಾಪವಾಗಿತ್ತು. ಉಳಿದಿದ್ದು ಕಾಲಾನುಕ್ರಮದಲ್ಲಿ ಹೇಗೋ ಹೊಮ್ಮಿತು. ಅಂದರೆ ಪಂಜಾಬ್, ಕಲ್ಕತ್ತಾ ಮತ್ತು ಲಂಡನ್‌ನಲ್ಲಿರುವ ಸಾಮ್ರಾಜ್ಯದ ನಾಗರಿಕ ಹಾಗೂ ಸೇನಾ ಅಧಿಕಾರಿಗಳು, ಹೇಗೆ ಪಂಜಾಬ್ ದಂಗೆಯಿಂದ ತಪ್ಪಿಸಿಕೊಂಡಿತು, ಆದರೆ ದಂಗೆಯನ್ನು ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತು ಮತ್ತು ಸಾಮ್ರಾಜ್ಯದ ಪರವಾಗಿ ಇದು ಇಡೀ ಭಾರತದ ಮೇಲೆ ಪ್ರಭಾವ ಮುಂದುವರೆಸಿತು ಎಂಬ ಬಗ್ಗೆ ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದರು.

ಗುಣಮಟ್ಟವನ್ನು ಕೊಡುವ ಮೂಲಕ ಸಮಾನತೆಯನ್ನು ತಿರಸ್ಕರಿಸುವುದು ಅತ್ಯಂತ ಸೂಕ್ಷ್ಮವಾದ ಸಂಗತಿಯಾಗಿತ್ತು. ಆದರೂ ಅದು ಅರವತ್ತು ವರ್ಷಗಳ ಕಾಲ ಕ್ರಿಯಾಶೀಲವಾಗಿತ್ತು. ಯಾವುದೇ ರೀತಿಯ ತೊಡಕು ಕಂಡರೂ ಅದನ್ನು ಸರಿಪಡಿಸಿಕೊಳ್ಳಲಾಗುತ್ತಿತ್ತು.

ಶಾಂತಿ ಕಾಪಾಡಿಕೊಳ್ಳಲಾಗುತ್ತಿತ್ತು. 1860 ಮತ್ತು 1920ರ ನಡುವೆ ಕಾಲುವೆಗಳು ನಿರ್ಮಾಣಗೊಂಡವು. ಹತ್ತು ಕೋಟಿ ಎಕರೆಗಳಷ್ಟು ಜಾಗವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಯಿತು. ಭೂಮಿಯ ಒಡೆತನವನ್ನು ಹಳ್ಳಿಯ ಸಮುದಾಯ ಅಥವಾ ಒಂದು ಜಾತಿಯಿಂದ ವ್ಯಕ್ತಿಗತವಾಗಿ ರೈತನಿಗೆ ಹಂಚಲಾಯಿತು. ಭೂ ಒಡೆತನವನ್ನು ದಾಖಲಿಸಿ, ಸಂರಕ್ಷಿಸಿಡಲಾಯಿತು. ಭೂ ಕಂದಾಯದ ದರ ಕಡಿಮೆ ಮಾಡಲಾಯಿತು. ಆದರೆ ಕಂದಾಯ ಸಂಗ್ರಹ ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಯಿತು.

ಪಂಜಾಬಿನ ಕೃಷಿ ಉತ್ಪಾದನೆ ಹೆಚ್ಚಿದಂತೆ ಸರ್ಕಾರದ ಆದಾಯವೂ ಹೆಚ್ಚಿತು. ಬ್ರಿಟಿಷ್ ಬ್ಯಾಂಕ್‌ಗಳು, ಹಡುಗಳು ಮತ್ತು ಆಮದು-ರಫ್ತು ನಿರ್ವಹಿಸುತ್ತಿದ್ದ ಏಜೆನ್ಸಿಗಳು- ಪಂಜಾಬಿನ ಹತ್ತಿ, ಗೋದಿ ಮತ್ತು ಎಣ್ಣೆ ಕಾಳುಗಳ ರಫ್ತು ಮಾಡಿದವು. ರೂಪಾಯಿ-ಸ್ಟರ್ಲಿಂಗ್ ಅನುಪಾತವನ್ನು ನಿಯಂತ್ರಿಸುವ ಮೂಲಕ ಮತ್ತು ಭಾರತದ ಆದಾಯಗಳ ಮೂಲಕ ಪಂಜಾಬಿ ಸಂಪತ್ತಿನ ಪ್ರಗತಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯವು ತಾನೊಬ್ಬ ಬಹುಮುಖ್ಯ ಪಾಲುದಾರನಾಗಿರುವುದನ್ನು ಖಚಿತಪಡಿಸಿಕೊಂಡಿತು.

ಪಂಜಾಬಿನ ವ್ಯಾಪಾರ ವಿಸ್ತರಿಸಿತು. ಭೂಮಿ ವ್ಯಾಪಾರ ಮತ್ತು ಕೃಷಿಯ ವಾಣಿಜ್ಯೀಕರಣ ನಡೆಯಿತು. ಆದರೆ ಕೆಲವು ರೈತರು ಇತರೆ ರೈತರಿಗಿಂತ ಕಷ್ಟ ಅನುಭವಿಸಿದರು. ಸಾಲ ನೀಡುವುದು ಸಮೃದ್ಧವಾಗಿ ಬೆಳೆಯಿತು ಮತ್ತು ಭಾರತೀಯ ಬ್ಯಾಂಕ್‌ಗಳು ತಲೆ ಎತ್ತಲಾರಂಭಿಸಿದವು. ಹಾಗೆಯೇ ರೈತರು ನಗರದ ಮತ್ತು ಹಳ್ಳಿಯ ಲೇವಾದೇವಿದಾರರಲ್ಲಿ ತಮ್ಮ ಭೂಮಿ ಅಡವಿಟ್ಟು ಸಾಲ ಮಾಡಿದರು. ಇದರಿಂದಾಗಿ ಭೂಮಿ ಕಳೆದುಕೊಳ್ಳುತ್ತಿದ್ದರು.

ನಗರಗಳು ಬೆಳೆದವು. ಲಾಹೋರ್, ಅಮೃತ್‌ಸರ್, ರಾವಲ್‌ಪಿಂಡಿ, ಮುಲ್ತಾನ್ ಮತ್ತು ಲುಧಿಯಾನಗಳಲ್ಲಿ ಮರಗಳಿಂದ ನಾಗರಿಕ ರಸ್ತೆಗಳು ತಲೆ ಎತ್ತಿದವು. ಈ ನಗರಗಳಲ್ಲಿ ಬ್ರಿಟಿಷ್ ಆಡಳಿತಗಾರರು ಮತ್ತು ಅವರ ನಂತರ ಕೆಳಹಂತದ ಅಧಿಕಾರಿಗಳು ವಾಸಿಸುತ್ತಿದ್ದರು. ಹಾಗೆಯೇ ಕಂಟೋನ್ಮೆಂಟ್‌ಗಳಲ್ಲಿ ಯೋಧರು ಮತ್ತು ಅವರ ಅಧಿಕಾರಿಗಳು ವಾಸಿಸುತ್ತಿದ್ದರು. ಸುಮಾರು 5000 ಬ್ರಿಟಿಷ್ ಯೋಧರು ರಾವಲ್ಪಿಂಡಿಯಲ್ಲಿ ನೆಲೆಸಿದ್ದರು ಎಂದು 1895ರ ಬ್ರಿಟಿಷ್ ಗೆಝೆಟಿಯರ್ ಹೇಳುತ್ತದೆ.

1880ರ ಉತ್ತರಾರ್ಧದಲ್ಲಿ ಹೊಸ ಕಾಲುವೆ ಕಾಲೋನಿಗಳಿಗೆ ವಲಸೆ ಬಂದ ರೈತರಿಗೆ ಭೂಮಿ ನೀಡುವ ಕಾರಣದಿಂದಾಗಿ ಪಶ್ಚಿಮ ಪಂಜಾಬಿನಲ್ಲಿ ಮಹತ್ವದ ವಲಸೆಯನ್ನು ಕಂಡು ಬಂದಿತು. ಇದರ ಫಲವಾಗಿ ಮಾಂಟೆಗೊಮೇರಿ, ಮುಲ್ತಾನ್, ಲೈಲ್‌ಪುರ್, ಝಾಂಗ್ ಮತ್ತು ಮುಝಫ್ಪರ್‌ಗಢದಲ್ಲಿ ಜನಸಂಖ್ಯೆ ಹೆಚ್ಚಿತು. ಇದೆಲ್ಲವೂ ಮುಲ್ತಾನ ಪ್ರಾಂತ್ಯ ಮತ್ತು ರಾವಲ್ಪಿಂಡಿಯ ಶಾಹ್‌ಪುರ್ ಜಿಲ್ಲೆಯ ಭಾಗದಲ್ಲಿ ನಡೆಯಿತು.

ಪಂಜಾಬಿನ ಜಿಲ್ಲೆಯ ಅಧಿಕಾರಿಗಳಿಂದ ನಡೆದ ಈ ಆಯ್ಕೆಯ ಪ್ರಕ್ರಿಯೆಯಲ್ಲಿ ಕಾಲುವೆ ಕಾಲೋನಿಗೆ, ಏಳು ಅತಿ ಹೆಚ್ಚು ಜನಸಂಖ್ಯೆ ಇದ್ದ, ಅಮೃತ್‌ಸರ್, ಗುರುದಾಸ್‌ಪುರ್ ಮತ್ತು ಸಿಯಾಲ್‌ಕೋಟ್, ಜಲಂದರ್, ಹೋಶಿಯಾರ್‌ಪುರ್ ಮತ್ತು ಲುಧಿಯಾನ ಮತ್ತು ಅಂಬಾಲ ಜಿಲ್ಲೆಗಳಿಂದ ವಲಸೆ ಬಂದರು. ಹಾಗಾಗಿ ಈ ಎಲ್ಲ ಜಿಲ್ಲೆಗಳಿಂದ ಜನಸಂಖ್ಯೆಯ ಸಾಂದ್ರತೆ ಕುಸಿಯಿತು.

ಹೀಗೆ ವಲಸೆ ಬಂದ ಮೂರನೆಯ ಎರಡು ಭಾಗ ಜನರು ಮುಸ್ಲಿಮ್, ಸಿಖ್ ಮತ್ತು ಹಿಂದು ಜಾಟ್‌ರು. ಉಳಿದವರು ಆರಿಯನ್ಸ್, ಸೈನಿಸ್, ಕಾಂಬೋಸ್ ಮತ್ತು ರಜಪೂತರು. ಇವರ ಜೊತೆಗೆ ಡೆರಾ ಘಾಜಿಖಾನ್, ಮಿಯಾನ್‌ವಾಲಿ ಮತ್ತು ಝೆಲಂ ಜಿಲ್ಲೆಗಳ ಒಣ ಪ್ರದೇಶದಿಂದ ಬಂದ ಮುಸ್ಲಿಮರು ಇದ್ದರು.

ಈ ಹೊಸ ಕಾಲುವೆ ಕಾಲೋನಿಯ ಯೋಜನೆ ಸ್ಪಷ್ಟವಾಗಿತ್ತು: ನೀರು ಯಥೇಚ್ಚವಾಗಿತ್ತು. ಹಾಳು ಬಿದ್ದ ಭೂಮಿಗಳು ಕೃಷಿ ಚಟುವಟಿಕೆಗಾಗಿ ಕಾದಿದ್ದವು. ಫಲವತ್ತಾದ ಜಿಲ್ಲೆಗಳಲ್ಲಿ ಜನಸಂಖ್ಯೆ ಹೆಚ್ಚಿತ್ತು. ಆದರೆ ಈ ಕಾಲೋನಿಗಳು ಅತಿ ಹೆಚ್ಚು ರಾಜಕೀಯ ಮೌಲ್ಯವನ್ನು ಪಡೆದುಕೊಂಡಿದ್ದವು. ರಾಜಾಡಳಿತವನ್ನು ಭೂಮಿ ನೀಡುವ ದಾನಿಯಂತೆ ಮತ್ತು ಪಂಜಾಬಿಗಳನ್ನು ಅದನ್ನು ನೋಡಿಕೊಳ್ಳುವವರನ್ನಾಗಿ ಮಾಡಿ ಕಾಲುವೆ ಕಾಲೋನಿಗಳನ್ನು ನಿಷ್ಠೆಗೆ ಮನ್ನಣೆ ನೀಡುವ ಅಥವಾ ಅದನ್ನು ಖರೀದಿಸುವ ಸಾಧನವಾಗಿ ಬಳಸಿಕೊಂಡಿತು. ಅಷ್ಟೇ ಅಲ್ಲದೇ ಇದೇ ನೆಲದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಪಂಜಾಬಿನೊಂದಿಗಿನ ಸೈನ್ಯದ ಸಂಬಂಧವನ್ನು ಮತ್ತಷ್ಟು ಬಿಗಿ ಮಾಡಿದ್ದನ್ನು ನಾವು ಕಾಣುತ್ತೇವೆ.

ಹೊಸ ಕಾಲುವೆಗಳು ಮತ್ತು ಹೊಸ ರೈಲು ಮಾರ್ಗಗಳು ಆಯತಾಕಾರದ ಹಸಿರುವ ಹೊಲಗಳ ನಡುವೆ ಗೆರೆ ಎಳೆದವು. ಹಾಗೆಯೇ ಹೊಸ ಮಾರುಕಟ್ಟೆಯ ಪಟ್ಟಣಗಳು ಮತ್ತು ಹೊಸ ರೈಲ್ವೆ ನಿಲ್ದಾಣಗಳು ತಲೆ ಎತ್ತಿದವು. ಈ ಕಾಲೋನಿಗಳಲ್ಲಿ ಗೋದಿ, ಹತ್ತಿ, ಬೆಳೆಯುವ ಜೊತೆಗೆ, ಹೇಸರಗತ್ತೆ, ಹೆಣ್ಣು ಕತ್ತೆ, ಒಂಟೆಗಳನ್ನು ಸಾಮ್ರಾಜ್ಯದ ಸೇನೆಗಾಗಿ ಸಾಕಲಾಯಿತು. ಉದ್ಯಮಿಗಳು- ಹೆಚ್ಚಾಗಿ ಹಿಂದು ಮತ್ತು ಸಿಖ್ಖರು- ಸಂಸ್ಕರಣೆ ಮತ್ತು ಅರೆ ಉತ್ಪಾದನಾ ಘಟಕಗಳನ್ನು ಆರಂಭಿಸಿ, ಹತ್ತಿಯ ಸಂಸ್ಕರಣೆ ಮಾಡಿದರು. ಪ್ರೆಸ್ಸಿಂಗ್ ಕಾರ್ಖಾನೆಗಳು ಆರಂಭವಾದವು. ಹೀಗೆ ಬ್ರಿಟಿಷ್ ಸರ್ಕಾರ, ಕಾಲೋನಿಗಳು ಬೆಳೆದ ಮತ್ತು ಉತ್ಪಾದಿಸಿದ ಪ್ರತಿಯೊಂದರಿಂದಲೂ ಆದಾಯವನ್ನು ಗಳಿಸಿತು.

ಲೆಕ್ಕವಿಲ್ಲದ ತಲೆಮಾರುಗಳ ಕಾಲ, ಈ ಕಾಲೋನಿಗಳ ಭೂಮಿಯನ್ನು ಜಂಗ್ಲೀಗಳು – ಅಂದರೆ ಮೇಕೆ ಮತ್ತು ಒಂಟಿಗಳನ್ನು ಮೇಯಿಸಿಕೊಂಡು, ನಾಗರಿಕತೆಯಿಂದ ದೂರ ಉಳಿದ ಸಮುದಾಯದವರು- ಬಳಸುತ್ತಿದ್ದರು. ಬ್ರಿಟಿಷ್ ಆಡಳಿತನ್ನು ಇವರನ್ನೂ ಒಂದೆಡೆ ನೆಲೆ ನಿಲ್ಲುವಂತೆ ಮಾಡಿತು.

1886 ಮತ್ತು 1916ರ ನಡುವೆ ಎಂಟು ಕಾಲುವೆ ಕಾಲೋನಿಗಳ ಆರಂಭಗೊಂಡವು. ಮೊದಲನೆಯದು ಮುಲ್ತಾನ್ ಜಿಲ್ಲೆಯಲ್ಲಿ ತೆರೆಯಲಾಯಿತು. ಎರಡನೆಯದು ಮಾಂಟೆಗೊಮೇರಿ, ಮೂರನೆಯದು ಲಾಹೋರ್ ಜಿಲ್ಲೆಯ ಚೂನಿಯನ್‌ನಲ್ಲಿ, ನಾಲ್ಕನೆಯದು (ಇದೇ ಅತಿ ದೊಡ್ಡದು) ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಚೀನಾಬ್ ಕಾಲೋನಿ ಆರಂಭವಾಯಿತು. ಐದನೆಯ ಕಾಲೋನಿ ಶಾಹ್‌ಪುರ್ ಮತ್ತುಝಾಂಗ್ ಜಿಲ್ಲೆಗಳ ನಡುವೆ ಝೇಲಂನಲ್ಲಿ ಆರಂಭವಾಯಿತು. ಬಾರಿ ದೊಅಬ್ ಆರನೆಯದು, ಚೀನಾಬ್ ಮೇಲ್ಭಾಗದಲ್ಲಿ ಮತ್ತು ಝೇಲ್ ಮೇಲ್ಭಾಗದ ಪ್ರದೇಶದಲ್ಲಿ ಉಳಿದ ಕಾಲೋನಿಗಳು ಆರಂಭಗೊಂಡವು.

ಸೈದ್ಧಾಂತಿಕವಾಗಿ ಈ ಕಾಲುವೆ ಕಾಲೋನಿಗಳು, ಉತ್ತಮ ಶ್ರೇಣಿಯ ಕೃಷಿಕರಿಂದ ಉತ್ತಮವಾದ ಕೃಷಿಯನ್ನು ಮಾಡುವಂತಾಗಬೇಕು. ಇದಕ್ಕಾಗಿ ತನ್ನ ಕುಟುಂಬದ ಎಲ್ಲರ ಸಹಕಾರ ಪಡೆದುಕೊಳ್ಳಬೇಕಿತ್ತು. ತಮ್ಮ ಮೂಲ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಭೂಮಿ ಹೊಂದಿದ್ದ ರೈತರು ಇಲ್ಲಿ ಹೆಚ್ಚು ಭೂಮಿಯನ್ನು ಪಡೆದುಕೊಳ್ಳಲು ಅವಕಾಶವಾಯಿತು. ಒಂದು ಚೌಕವೆಂದರೆ ಸುಮಾರು 25 ಎಕರೆ. ಇಂತಹ ಹಲವು ಚೌಕಗಳು ಈ ಕಾಲೋನಿವಾಸಿಗಳಿಗೆ ಲಭಿಸಿತು.

ಹೀಗೆ ಸೋಹಾಗ್ ಪಾರಾ ಕಾಲುವೆ ಕಾಲೋನಿಯ ವಾಸಿಯಾದ ರಾವಲ್ಪಿಂಡಿಯ ಜಿಲ್ಲೆಯ ಬಾಬಾ ಖೇಮ್ ಸಿಂಗ್ ಬೇಡಿ -ಗುರುನಾನಕ್ ಬೇಡಿ ವಂಶದದವರು- ಸುಮಾರು 7798 ಎಕರೆ ಭೂಮಿಯನ್ನು ಹೊಂದುವಂತಾಯಿತು.

(ಕನ್ನಡಕ್ಕೆ): ಕುಮಾರ್ ಎಸ್


ಇದನ್ನೂ ಓದಿ: ಪಂಜಾಬ್ ಲೂಧಿಯಾನ ಮಹಾಪಂಚಾಯತ್‌ನಲ್ಲಿ ಲಕ್ಷಕ್ಕೂ ಅಧಿಕ ರೈತರು ಭಾಗಿ: ಚಳವಳಿ ತೀವ್ರಗೊಳಿಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...