ಕೋವಾಕ್ಸಿನ್ ಲಸಿಕೆಯ “ಮೂರನೇ ಹಂತದ ಪ್ರಯೋಗಗಳ ಅಪೂರ್ಣತೆ” ಮತ್ತು “ಲಸಿಕೆಗಳ ಮುಕ್ತಾಯ ದಿನಾಂಕ”ಕ್ಕೆ ಸಂಬಂಧಿಸಿದ ಗೊಂದಲಗಳು ನಮ್ಮ ರಾಜ್ಯದ ಪ್ರಾಥಮಿಕ ಕಾಳಜಿಯ ವಿಷಯವಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಛತ್ತೀಸ್‌ಗಡಕ್ಕೆ ಕೋವಾಕ್ಸಿನ್ ಸರಬರಾಜನ್ನು ನಿಲ್ಲಿಸಬೇಕು ಎಂದು ರಾಜ್ಯದ ಆರೋಗ್ಯ ಸಚಿವ ಡಿಯೋ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರಬರೆದಿದ್ದರು.
ಲಸಿಕೆಯ ಬಾಟಲುಗಳಲ್ಲಿ ಮುಕ್ತಾಯ ದಿನಾಂಕವಿಲ್ಲದಿರುವುದು ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವವರೆಗೆ ಛತೀಸ್‌ಘಡ್ ಸರ್ಕಾರಕ್ಕೆ ಕೋವಾಕ್ಸಿನ್ ಸರಬರಾಜನ್ನು ನಿಲ್ಲಿಸುವಂತೆ ನಾನು ಕೇಂದ್ರವನ್ನು ವಿನಂತಿಸಿದ್ದೇನೆ ಎಂದು ಛತ್ತೀಸ್‌ಘಡ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ: ಗುಲಾಂ ನಬಿ ಆಜಾದ್
▪️The absence of expiration date on the vials of the vaccine.
I have requested him to halt the supply of COVAXIN to Chhattisgarh until these issues are addressed to the satisfaction of our Health Department to avoid the wastage of the early expiration doses of the drug. (2/2)
— TS Singh Deo (@TS_SinghDeo) February 11, 2021
ಈ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಡಾ.ಹರ್ಷವರ್ಧನ್ ಅವರು ಛತ್ತೀಸ್‌ಗಡದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೊ ಅವರಿಗೆ ಪ್ರತಿಕ್ರಿಯಿಸಿ ಪತ್ರ ಬರೆದಿದ್ದಾರೆ.
ಡಾ.ಹರ್ಷವರ್ಧನ್ ತಮ್ಮ ಪತ್ರದಲ್ಲಿ, ವ್ಯಾಕ್ಸಿನೇಷನ್ ವೇಳಾಪಟ್ಟಿಯಲ್ಲಿ ರಾಜ್ಯವು ತೀರಾ ಹಿಂದುಳಿದಿದೆ. ಇದು ಕೇಂದ್ರಕ್ಕೆ ಹೆಚ್ಚಿನ ಚಿಂತೆಯನ್ನುಂಟುಮಾಡಿದೆ. ಛತ್ತೀಸ್‌ಘಡ ಸರ್ಕಾರವು ತಮ್ಮ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಪ್ರಮಾಣವನ್ನು ನೀಡುವ ಮೂಲಕ 69.87% ರಷ್ಟು ಮಾತ್ರ ಲಸಿಕೆ ನೀಡಿದೆ. ಜೊತೆಗೆ ರಾಜ್ಯವು ತನ್ನ 2,09,512 ಮುಂಚೂಣಿಯ ಕಾರ್ಯಕರ್ತರಲ್ಲಿ ಕೇವಲ 9.55% ರಷ್ಟು ಜನರಿಗೆ ಮಾತ್ರ ಲಸಿಕೆಯ ಮೊದಲ ಡೋಸ್ ನೀಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ ಕೇವಲ 5 ಸ್ಥಾನ ಗೆದ್ದು ತೋರಿಸಲಿ: HDK ಸವಾಲ್
“ಕೊವಾಕ್ಸಿನ್ ಬಾಟಲಿಯಲ್ಲಿ ಮುಕ್ತಾಯ ದಿನಾಂಕ ಲಭ್ಯವಿಲ್ಲದಿರುವ ಬಗ್ಗೆ ನಿಮ್ಮ ಕಾಳಜಿ ಸಂಪೂರ್ಣವಾಗಿ ಆಧಾರರಹಿತವಾಗಿದೆ” ಎಂದು ಹರ್ಷವರ್ಧನ್ ಛತ್ತೀಸ್‌ಘಡ ಆರೋಗ್ಯ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಡಾ. ಹರ್ಷವರ್ಧನ್ ಅವರು ರಾಜ್ಯಗಳಿಗೆ ಸರಬರಾಜು ಮಾಡುವ ಎಲ್ಲಾ ಲಸಿಕೆಗಳು “ಸುರಕ್ಷಿತ ಮತ್ತು ಇಮ್ಯುನೊಜೆನಿಕ್” ಮತ್ತು ಇದನ್ನು ತ್ವರಿತವಾಗಿ ಬಳಸಬೇಕು ಎಂದು ಹೇಳಿದ್ದಾರೆ.
ತನ್ನ ಮೂರನೇ ಹಂತದ ಪ್ರಯೋಗಗಳನ್ನು ಇನ್ನೂ ಪೂರ್ಣಗೊಳಿಸದ ಕೊವಾಕ್ಸಿನ್ ಅನ್ನು ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ ಬಳಸಲಾಗುತ್ತಿದೆ. ಅಂದರೆ ಇದನ್ನು ಸ್ವೀಕರಿಸುವವರನ್ನು ಇನ್ನೂ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಆಡಳಿತದ ರಾಜ್ಯವಾದ ಛತ್ತೀಸ್‌ಘಡವು ಈ ಹಿಂದೆ ಕೋವಾಕ್ಸಿನ್ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ: ಕಾಂಗ್ರೆಸ್ ತೀರ್ಮಾನ


