Homeಅಂತರಾಷ್ಟ್ರೀಯಕೊಸೊವೊ ಚುನಾವಣೆ: ಎಡಪಕ್ಷ ವೆಟೆವೆಂಡೋಸ್ಜೆಗೆ ಭರ್ಜರಿ ಜಯ

ಕೊಸೊವೊ ಚುನಾವಣೆ: ಎಡಪಕ್ಷ ವೆಟೆವೆಂಡೋಸ್ಜೆಗೆ ಭರ್ಜರಿ ಜಯ

ನಮ್ಮ ಆದ್ಯತೆ "ನ್ಯಾಯ ಮತ್ತು ಉದ್ಯೋಗಗಳು" ಎಂದು ಪ್ರಧಾನಿಯಾಗಲಿರುವ ಅಲ್ಬಿನ್ ಕುರ್ತಿ ಹೇಳಿದ್ದಾರೆ.

- Advertisement -
- Advertisement -

ಕೊರೊನಾವೈರಸ್ ಸಾಂಕ್ರಾಮಿಕ, ಆರ್ಥಿಕ ಹಿಂಜರಿತ ಮತ್ತು ಸೆರ್ಬಿಯಾದೊಂದಿಗೆ ಮಾತುಕತೆಗಳನ್ನು ಸ್ಥಗಿತಗೊಳಿಸಿದ ನಡುವೆ ನಡೆದ ಆರಂಭಿಕ ಚುನಾವಣೆಯಲ್ಲಿ ಕೊಸೊವೊದ ಎಡ ಪಕ್ಷ ವೆಟೆವೆಂಡೋಸ್ಜೆ ಸ್ಪಷ್ಟ ಗೆಲುವು ಸಾಧಿಸಿದೆ. ಪಕ್ಷದ ಮುಖಂಡ ಅಲ್ಬಿನ್ ಕುರ್ತಿ ಪ್ರಧಾನಿಯಾಗಲಿದ್ದಾರೆ ಎಂದು ನ್ಯೂಸ್‌ಕ್ಲಿಕ್ ವರದಿ ಮಾಡಿದೆ.

ಸೋಮವಾರ 98% ಮತ ಎಣಿಕೆ ಮುಗಿದಿದ್ದು, ಎಡಪಂಥೀಯ ನಿರ್ಣಯ ಚಳವಳಿ ಪಕ್ಷ ಎಂದು ಕರೆಯಲ್ಪಡುವ ವೆಟೆವೆಂಡೋಸ್ಜೆ 48% ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಕೊಸೊವೊದ ಸೆಂಟರ್-ರೈಟ್ ಡೆಮಾಕ್ರಟಿಕ್ ಪಾರ್ಟಿ ಅಥವಾ ಪಿಡಿಕೆ ಮತ್ತು ಕನ್ಸರ್ವೇಟಿವ್ ಆಡಳಿತದ ಕೊಸೊವೊದ ಡೆಮಾಕ್ರಟಿಕ್ ಲೀಗ್ ಅಥವಾ ಎಲ್ಡಿಕೆ ಎರಡೂ ಪಕ್ಷಗಳು ಸೋಲು ಅನುಭವಿಸಿವೆ.

ವೆಟೆವೆಂಡೋಸ್ಜೆ ಪಕ್ಷದ ಪ್ರಧಾನ ಮಂತ್ರಿಯಾಗುವ ನಿರೀಕ್ಷೆಯಿರುವ ನಾಯಕ ಅಲ್ಬಿನ್ ಕುರ್ತಿ ಮುಂದೆ “ದೇಶದ ಆರ್ಥಿಕತೆಯನ್ನು ಮೇಲೆತ್ತುವ, ಸಾಂಕ್ರಾಮಿಕ ರೋಗವನ್ನು ಎದುರಿಸುವ, ನಿರುದ್ಯೋಗವನ್ನು ಕಡಿಮೆ ಮಾಡುವ ಮತ್ತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸವಾಲು ಇದೆ” ಎಂದು ಅಲ್‌ಜಜೀರಾ ವರದಿ ಮಾಡಿದೆ.

“ರಾಜ್ಯದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನ್ಯಾಯ ಮತ್ತು ಉದ್ಯೋಗಗಳಿಗಾಗಿ ನಾವು ಈ ಜನಾಭಿಪ್ರಾಯವನ್ನು ಗೆದ್ದಿದ್ದೇವೆ” ಎಂದು ಅಲ್ಬಿನ್ ಕುರ್ತಿ ಹೇಳಿದ್ದಾರೆ. “ನಮ್ಮ ಆದ್ಯತೆ ನ್ಯಾಯ ಮತ್ತು ಉದ್ಯೋಗಗಳು” ಎಂದು ಅವರು ಸಾರಿದ್ದಾರೆ.

ಕೊಸೊವೊದಾ 120 ಸ್ಥಾನಗಳ ಸಂಸತ್ತಿನಲ್ಲಿ ಅಲ್ಬಿನ್ ಕುರ್ತಿಗೆ ಅಗತ್ಯವಾದ 61 ಸ್ಥಾನಗಳು ದಕ್ಕಿಲ್ಲ. ಆದರೆ ಸೋತ ಮುಖ್ಯ ವಿರೋಧ ಪಕ್ಷಗಳೊಂದಿಗೆ ಯಾವುದೇ ಮೈತ್ರಿ ಇರುವುದಿಲ್ಲ, ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊಸೊವೊ ದೇಶವು 2008 ರಲ್ಲಿ ಸೆರ್ಬಿಯಾದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು ಕೊಸೊವೊವನ್ನು ರಾಷ್ಟ್ರವೆಂದು ಒಪ್ಪಿಕೊಂಡಿವೆ. ಆದರೆ ಸೆರ್ಬಿಯಾ ಮತ್ತು ಅದರ ಮಿತ್ರ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಇದನ್ನು ಒಪ್ಪುವುದಿಲ್ಲ.


ಇದನ್ನೂ ಓದಿ: ಜಗತ್ತಿನ ಎಲ್ಲ ಹೋರಾಟಗಳನ್ನು ಬೆಸೆಯುವ ಡಿಜಿಟಲ್ ಆಕ್ಟಿವಿಸಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...