Homeಮುಖಪುಟರೈತ ಹೋರಾಟದ ಆಕ್ರೋಶ: ಪಂಜಾಬ್‌ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ

ರೈತ ಹೋರಾಟದ ಆಕ್ರೋಶ: ಪಂಜಾಬ್‌ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದ ನಡುವೆಯ ನಡೆದ ಪಂಜಾಬ್ ಸ್ಥಳೀಯ ನಗರ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ. ರೈತ ಹೋರಾಟದ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಧೂಳಿಪಟವಾದರೆ ಕಾಂಗ್ರೆಸ್ ಸಂಪೂರ್ಣ ಲಾಭ ಪಡೆದುಕೊಂಡಿದ್ದು ಭರ್ಜರಿ ಜಯ ಸಾಧಿಸಿದೆ.

7 ಮುನ್ಸಿಪಲ್ ಕಾರ್ಪೋರೇಷನ್‌ಗಳಲ್ಲಿ 7ನ್ನು ಕಾಂಗ್ರೆಸ್ ಗೆದ್ದು ಬೀಗಿದೆ. ಮೊಗ್ಗ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್, ಬತಾಲ ಮತ್ತು ಬಟಿಂಡಾ ಮುನ್ಸಿಪಲ್ ಕಾರ್ಪೋರೇಷನ್‌ಗಳು ಕಾಂಗ್ರೆಸ್ ಪಾಲಾಗಿವೆ. ಎಸ್‌ಎಎಸ್‌ ನಗರದ ಮತ ಎಣಿಕೆಯು ಫೆಬ್ರವರಿ 18ರವರೆಗೆ ನಡೆಯುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುನ್ಸಿಪಲ್ ಕೌನ್ಸಿಲ್‌ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 109 ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ 80ರ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಪಕ್ಷವು 65 ಕೌನ್ಸಿಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಅಕಾಲಿ ದಳ 05ರಲ್ಲಿ ಗೆಲುವು ಸಾಧಿಸಿದೆ. ಅವುಗಳ ವಿವರ ಈ ಕೆಳಗಿನಂತಿದೆ.

ಫೆರೋಜೆಪುರ

ಫೆರೋಜೆಪುರ ಮುನ್ಸಿಪಲ್ ಕೌನ್ಸಿಲ್‌ನ 33 ಸ್ಥಾನಗಳಲ್ಲಿ 33 ಅನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. ಈ ರೀತಿಯ ಶೇ.100 ಸ್ಥಾನಗಳಲ್ಲಿ ಹಿಂದೆ ಎಂದೂ ಯಾರೂ ಗೆದ್ದಿಲ್ಲ ಎಂದು ಕಾಂಗ್ರೆಸ್ ಶಾಸಕ ಪರಮಿಂದರ್ ಸಿಂಗ್ ಪಿಂಕಿ ಹೇಳಿದ್ದಾರೆ.

ಪಠಾಣ್‌ಕೋಟ್

ಬಿಜೆಪಿಯು ತನ್ನ ಭದ್ರಕೋಟೆಯಾದ ಪಠಾಣ್‌ಕೋಟ್‌ನಲ್ಲಿ ಭಾರೀ ಮುಖಭಂಗ ಅನುಭವಿಸಿದೆ. 50 ಸ್ಥಾನಗಳಲ್ಲಿ 37 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಬಿಜೆಪಿ 11 ಸ್ಥಾನಗಳಿಗೆ ಸೀಮಿತಗೊಂಡಿದೆ.

ಸುಜಾನ್ ಪುರ್

15 ಸ್ಥಾನಗಳಲ್ಲಿ ಕಾಂಗ್ರೆಸ್ 8 ನ್ನು ಗೆಲ್ಲುವ ಮೂಲಕ ಕೌನ್ಸಿಲ್‌ ಅನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ 5 ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಜಯಿಸಿದ್ದಾರೆ.

ಜೈತು

17 ಸ್ಥಾನಗಳಲ್ಲಿ ಕಾಂಗ್ರೆಸ್ 7, ಅಕಾಲಿ ದಳ 3, ಪಕ್ಷೇತರರು 4 ಸ್ಥಾನಗಳಲ್ಲಿ ಜಯಿಸಿದ್ದಾರೆ.

ಕೋಠಾಕ್‌ಪುರ

ಕಾಂಗ್ರೆಸ್ 21 ವಾರ್ಡ್‌ಗಳಲ್ಲಿ, ಬಿಜೆಪಿ 5 ಮತ್ತು ಆಪ್ 3 ವಾರ್ಡ್‌ಗಳಲ್ಲಿ ಜಯಸಿದ್ದಾರೆ.

ಫರೀದ್‌ಕೋಟ್

25 ವಾರ್ಡ್‌ಗಳಲ್ಲಿ ಕಾಂಗ್ರೆಸ್ 16, ಅಕಾಲಿದಳ 7, ಆಪ್ 1 ಮತ್ತು ಪಕ್ಷೇತರರು 1 ವಾರ್ಡ್‌ಗಳಲ್ಲಿ ಜಯಿಸಿದ್ದಾರೆ.

ದೇರಾ ಬಸ್ಸಿ

19 ರಲ್ಲಿ ಕಾಂಗ್ರೆಸ್ 13 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಬಿಜೆಪಿ 1 ಕ್ಕೆ ಸೀಮಿತವಾಗಿದೆ.

ಫೈಜಿಲ್ಕ

19 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ರಲ್ಲಿ ಬಿಜೆಪಿ ಮತ್ತು 2 ರಲ್ಲಿ ಆಪ್ ಜಯಿಸಿದೆ.


ಇದನ್ನೂ ಓದಿ: ಪಂಜಾಬ್: ಬಟಿಂಡಾದಲ್ಲಿ 53 ವರ್ಷಗಳ ಬಳಿಕ ಮೇಯರ್ ಸ್ಥಾನ ಕಾಂಗ್ರೆಸ್‌ಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...