Homeಮುಖಪುಟಕೊರೊನಾ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ಮತ್ತು ಅತಿ ಆತ್ಮವಿಶ್ವಾಸ ಹೊಂದಿದೆ-ರಾಹುಲ್ ಗಾಂಧಿ

ಕೊರೊನಾ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ಮತ್ತು ಅತಿ ಆತ್ಮವಿಶ್ವಾಸ ಹೊಂದಿದೆ-ರಾಹುಲ್ ಗಾಂಧಿ

- Advertisement -
- Advertisement -

ಕೊರೊನಾ ಸಾಕ್ರಮಿಕ ಇನ್ನೂ ಮುಗಿದಿಲ್ಲ, ಆದರೆ ಅದನ್ನು ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರವು ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತದಲ್ಲಿ ಕೊರೊನಾದ ಆಫ್ರಿಕಾ ಮತ್ತು ಬ್ರೆಜಿಲಿಯನ್ ರೂಪಾಂತರ ವೈರಸ್‌ಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯ ಈ ಹೇಳಿಕೆಯು ಹೊರಬಂದಿದೆ.

“ಕೇಂದ್ರ ಸರ್ಕಾರವು ಕೊರೊನಾ ಬಗ್ಗೆ ತೀವ್ರ ನಿರ್ಲಕ್ಷ್ಯ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದೆ. ಆದರೆ ಅದು ಇನ್ನೂ ಮುಗಿದಿಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಣ ಎಲ್ಲಿಂದ ಬರುತ್ತದೆ? ಗುಜರಾತಿನ ವ್ಯಾಪಾರಿಗಳಿಂದ ಬರುತ್ತದೆ: ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?

 

ಭಾರತದಲ್ಲಿ ಮೊದಲ ಬಾರಿಗೆ, ದಕ್ಷಿಣ ಆಫ್ರಿಕಾದ ರೂಪಾಂತರಿ SARS-CoV-2 ವೈರಸ್ ಇರುವ ನಾಲ್ಕು ಜನರು ಮತ್ತು ಬ್ರೆಜಿಲ್ ರೂಪಾಂತರಿ ವೈರಸ್ ಇರುವ ಒಬ್ಬರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಭಾರತಕ್ಕೆ ಹಿಂದಿರುಗಿದ ನಾಲ್ಕು ಜನರಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದರಲ್ಲಿ ಒಬ್ಬರು ಅಂಗೋಲಾದಿಂದ, ಒಬ್ಬರು ಟಾಂಜಾನಿಯಾದಿಂದ ಒಬ್ಬರು ಮತ್ತು ಇಬ್ಬರು ದಕ್ಷಿಣ ಆಫ್ರಿಕಾದಿಂದ ಜನವರಿಯಯಲ್ಲಿ ಬಂದಿದ್ದರು ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.

11,610 ಹೊಸ ಪ್ರಕರಣಗಳೊಂದಿಗೆ, ಭಾರತದ ಕೊರೊನಾ ಸಂಖ್ಯೆ ಬುಧವಾರ 1,09,37,320 ಕ್ಕೆ ಏರಿದೆ. 1,06,44,858 ರಷ್ಟು ಜನರು ಸಾಂಕ್ರಮಿಕದಿಂದ ಚೇತರಿಕೆ ಕಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ಸಾಂಕ್ರಮಿಕದಿಂದಾಗಿ 100 ಜನರು ಸಾವಿಗೀಡಾಗಿದ್ದಾರೆ. ಸಾಂಕ್ರಮಿಕದಿಂದಾಗಿ ದೇಶದಲ್ಲಿ ಇದುವರೆಗೂ 1,55,913 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಭೂಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟ ಪ್ರಧಾನಿ ಮೋದಿ ಒಬ್ಬ ಹೇಡಿ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...