ಅಸ್ಸಾಂ ನಲ್ಲಿರುವ ಚಹಾ ತೋಟದಲ್ಲಿನ ಕಾರ್ಮಿಕರ ದಿನಗೂಲಿಯನ್ನು 167 ರೂ.ಗಳಿಂದ 365 ರೂ.ಗಳಿಗೆ ಹೆಚ್ಚಿಸುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಅಸ್ಸಾಂ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಅಸ್ಸಾಂನ ಚಹಾ ತೋಟ ಕಾರ್ಮಿಕರು ದಿನಗೂಲಿಯಾಗಿ 167 ರೂ.ಗಳನ್ನು ಪಡೆಯುತ್ತಿರುವಾಗ ಗುಜರಾತ್‌ನ ವ್ಯಾಪಾರಿಗಳು ಚಹಾ ತೋಟವನ್ನೇ ಕೊಳ್ಳುತ್ತಿದ್ದಾರೆ. ಅಸ್ಸಾಂನ ಚಹಾ ತೋಟದಲ್ಲಿನ ಕಾರ್ಮಿಕರಿಗೆ ದಿನಕ್ಕೆ 365 ರೂ.ಗಳ ದಿನಗೂಲಿಯನ್ನು ನೀಡುತ್ತೇವೆ ಎಂದು ಭರವಸೆ ನೀಡುತ್ತೇವೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ? ಗುಜರಾತ್‌ನ ವ್ಯಾಪಾರಿಗಳಿಂದ ಬರುತ್ತದೆ” ಎಂದು ಹೇಳಿದ್ದಾರೆ.
Assam's tea garden workers get Rs 167 per day wage while traders in Gujarat get tea gardens. We promise to give tea garden workers of Assam Rs 365 per day wage. Where will the money come from? It will come from Gujarat's traders: Congress leader Rahul Gandhi in Assam pic.twitter.com/NtgxjKLJE9
— ANI (@ANI) February 14, 2021
ಇದನ್ನೂ ಓದಿ: ಟೂಲ್‌ಕಿಟ್ ಪ್ರಕರಣ: ಬೆಂಗಳೂರಿನ ವಿದ್ಯಾರ್ಥಿನಿಯನ್ನು ಬಂಧಿಸಿದ ದೆಹಲಿ ಪೊಲೀಸರು
ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇನ್ನೇನು ಘೋಷಣೆಯಾಗಲಿದ್ದು, ಏಪ್ರಿಲ್-ಮೇ ತಿಂಗಳಿನಲ್ಲಿ ಮತದಾನ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪಾಂಡಿಚೇರಿಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ.
ಇಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಸ್ಸಾಂ ಗೆ ಭೇಟಿ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, 2020 ರಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಅದರಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಇದನ್ನೂ ಓದಿ: ಈ ವಾರದ 10 ಪ್ರಮುಖ ಸುದ್ದಿಗಳು: ನಾನುಗೌರಿ ಓದುಗರಿಗಾಗಿ…